ಭಾಗಮಂಡಲ, ಸೆ. ೧೧: ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಲ್ಲಿ ಕಳೆದ ೯ ವರ್ಷಗಳಿಂದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ತೀರ್ಥಹಳ್ಳಿಯ ದುರ್ಗಾ ಶಕ್ತಿ ಇಂಡಸ್ಟಿçಯಲ್ ಡೀಲರ್ಸ್ ಇನ್ ಹನಿ ವರ್ಕ್ ಸಂಸ್ಥೆಯ ಹೆಸರಿನಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರ ಬಗ್ಗೆ ಲೋಕಾಯುಕ್ತ ತನಿಖೆಗೆ ಹೋಗುವುದಾದರೆ ಸೂಕ್ತ ದಾಖಲೆಗಳನ್ನು ಕೊಡುವುದಾಗಿ ಸಂಸ್ಥೆಯ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಭಾಗಮಂಡಲದಲ್ಲಿ ನಡೆದ ಸಂಸ್ಥೆಯ ಮಹಾಸಭೆಯಲ್ಲಿ ಹೇಳಿದರು.

ಮೊದಲಿಗೆ ಅಜೆಂಡಾದAತೆ ಸಭೆ ನಡೆದು ಕಾರ್ಯದರ್ಶಿ ಸುಧಾ ಲೆಕ್ಕಪರಿಶೋಧನೆ ಮಂಡಿಸಿ ಕಳೆದ ಬಾರಿಯ ಲೆಕ್ಕ ಪರಿಶೋಧನೆ ವರದಿಯನ್ನು ವಾಚಿಸಿದ ಬಳಿಕ ಅಜೆಂಡಾದಲ್ಲಿ ರಾಜೀವ್ ಮತ್ತು ಬಾರಿಕೆ ವೆಂಕಟರಮಣ ಅವ್ಯವಹಾರದ ಬಗ್ಗೆ ಠರಾವು ನೀಡಿದ್ದ ಮೇರೆಗೆ ಚರ್ಚೆ ನಡೆಯಿತು. ಬಾರಿಕೆ ವೆಂಕಟರಮಣ ಅವ್ಯವಹಾರ ಆಗಿರುವುದಾಗಿ ಆರೋಪಿಸಿ ಲೋಕಾಯುಕ್ತ ತನಿಖೆಗೆ ನೀಡಿ ಇಲ್ಲದಿದ್ದರೆ ನಮಗೆ ಅವಕಾಶ ಕೊಡಿ ಎಂದು ಕೋರಿದರು.

ರಾಜೀವ್ ಮಾತನಾಡಿ, ದುರ್ಗಾ ಶಕ್ತಿ ಸಂಸ್ಥೆ ಕಳುಹಿಸಿರುವ ಪತ್ರದಿಂದಾಗಿ ಸಂಸ್ಥೆಯ ಹೆಸರು ಹಾಳಾಗಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆ ಉಳಿಯಬೇಕು ಎಂಬ ಚಿಂತನೆ ಕೂಡ ಇದೆ. ಆಡಳಿತ ಮಂಡಳಿ ಮೇಲೆ ಯಾವುದೇ ಆರೋಪಗಳಿಲ್ಲ. ಆರೋಪಿತರನ್ನಾಗಿ ಮಾಜಿ ಕಾರ್ಯದರ್ಶಿ ಅವರನ್ನು ಗುರಿ ಮಾಡಲಾಗಿದೆ ಸಂಸ್ಥೆಯ ಹೆಸರಿನಲ್ಲಿ ಕೆ.ಜಿ.ಗೆ ೧೩೨ ರೂಪಾಯಿಗೆ ಜೇನು ಖರೀದಿ ಮಾಡಿ ಇದರಲ್ಲಿ ೭೨ ರೂಪಾಯಿ ಕಮೀಷನ್ ಪಡೆಯ ಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿ ಸಲಾಗಿದ್ದು ಮೂರು ಕೋಟಿ ರೂಪಾಯಿ ಅಷ್ಟು ಕಮೀಷನ್ ಪಡೆಯ ಲಾಗಿದೆ ಎಂದು ಸಂಸ್ಥೆಯೊAದು ಗಂಭೀರ ಆರೋಪ ಹೊರಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಲೋಕಾಯುಕ್ತ ತನಿಖೆಗೆ ನೀಡಬೇಕು ಇಲ್ಲದಿದ್ದಲ್ಲಿ ಸಹಕಾರ ಸಂಘವನ್ನು ಸಂಶಯದಿAದ ನೋಡುವ ಸ್ಥಿತಿ ಸೃಷ್ಟಿಯಾಗುತ್ತದೆ. ಆದ್ದರಿಂದ ಕ್ರಿಮಿನಲ್ ಮೊಕದ್ದಮೆ ಹೂಡಲು ಸಲಹೆ ನೀಡಿದರು.

ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಸದಸ್ಯ ಹೊಸಗದ್ದೆ ಭಾಸ್ಕರ ೧೦ ವರ್ಷಗಳ ಕಾಲ ದುರ್ಗಾ ಶಕ್ತಿಯಿಂದ ಜೇನು ತೆಗೆದುಕೊಳ್ಳುತ್ತಿದ್ದ ಸಂದರ್ಭ ವ್ಯವಹಾರ ಚೆನ್ನಾಗಿತ್ತು. ಮಾಜಿ ಕಾರ್ಯದರ್ಶಿಯ ಜೊತೆ ವೈಮನಸ್ಸು ಉಂಟಾಗಿ ಸಂಘಕ್ಕೆ ಕೆಟ್ಟ ಹೆಸರು ತರುವ ಸಲುವಾಗಿ ಇದನ್ನು ಮಾಡಿದ್ದಾರೆ ಆದ್ದರಿಂದ ಇದನ್ನು ಯಾರು ಮಾಡಿದ್ದಾರೋ ಅವರ ಮೇಲೆ ಕ್ರಮವಹಿಸಿ ಎಂದು ಒತ್ತಾಯಿಸಿದರು. ಸದಸ್ಯ ಕುದುಪಜೆ ಪ್ರಕಾಶ್ ಮಾತನಾಡಿ, ಆರೋಪಿಸಿರುವ ಪತ್ರದಲ್ಲಿ ಗೊಂದಲಗಳಿದ್ದು ಅವರೊಂದಿಗೆ ನಾನು ಮಾತನಾಡಿ ದ್ದೇನೆ. ನಿಮಗೆ ಎಷ್ಟಕ್ಕೆ ಜೇನು ಸಿಗುತ್ತದೆ ಎಂದಾಗ ಅರವತ್ತು ರೂಪಾಯಿ ಎಂದಿದ್ದು, ಸಂಘಕ್ಕೆ ನೀವು ಎಷ್ಟಕ್ಕೆ ನೀಡುತ್ತಿದ್ದೀರಿ ಎಂಬ ಪ್ರಶ್ನೆಗೆ ೧೩೨ ಎಂದು ಹೇಳಿತ್ತು. ಸಂಸ್ಥೆ ನೀಡಿರುವ ಎಲ್ಲಾ ದಾಖಲಾತಿಯಲ್ಲಿ ೧೩೨ ರೂಪಾಯಿ ಎಂದು ದಾಖಲಾಗಿದೆ. ಸಂಸ್ಥೆ ೧೨ ರೂಪಾಯಿ ಕಮೀಷನ್ ನೀಡಿದೆ ಎಂದು ತಿಳಿಸಿದೆ. ಹಾಗಾದರೆ ನಾಲ್ಕು ಲಕ್ಷ ಕೆಜಿ ಜೇನು ಖರೀದಿ ಆದರೆ ಕೋಟಿಗಳಷ್ಟು ಅವ್ಯವಹಾರ ಆಗಿದೆಯೇ ಎಂದು ಪ್ರಶ್ನಿಸಿದರು.

ಸದಸ್ಯ ನಂಜುAಡಪ್ಪ ಮಾತನಾಡಿ ನಾಲ್ಕು ಲಕ್ಷ ಕೆಜಿ ಜೇನು ದಾಖಲಾತಿ ನೀಡಿರುವುದಲ್ಲದೆ ರೂ. ೭೨ ಕಮೀಷನ್ ಕೆಜಿ ಮೇಲೆ ನೀಡಲಾಗಿದ್ದು ಮೂರು ಕೋಟಿ ಅವ್ಯವಹಾರ ಮಾಡಲಾಗಿದೆ ೨೦೧೦ ರಿಂದ ೨೨ ರವರೆಗೆ ರೂ. ೭೨ ಕಮೀಷನ್ ನೀಡಿ ವ್ಯವಹರಿಸಲು ಸಾಧ್ಯವೆ? ದುರ್ಗಾ ಶಕ್ತಿ ರೂ. ೬೦ಕ್ಕೆ ಖರೀದಿ ಮಾಡಿ ೧೩೨ ಕ್ಕೆ ಮಾರಾಟ ಮಾಡಿದ್ದು ರೂ. ೭೨ ಕಮಿಷನ್ ನೀಡಲು ಸಂಸ್ಥೆ ಮೂರ್ಖವೇ ಎಂದು ಪ್ರಶ್ನಿಸಿದರು. ರೂಪಾಯಿ ೬೦ ಕ್ಕೆ ಜೇನುಕೊಟ್ಟು ಸಂಸ್ಥೆ ನಷ್ಟಕ್ಕೆ ಹೋಗುತ್ತಿದೆ ನನ್ನ ಜೀವನದ ಗತಿ ಏನು ಎಂದು ಪತ್ರದಲ್ಲಿ ಬರೆದಿದ್ದಾನೆ ಹಾಗಾದರೆ ಈತ ಏಕೆ ೧೦ ವರ್ಷಗಳ ಕಾಲ ಆಡಳಿತ ಮಂಡಳಿಯ ಗಮನಕ್ಕೆ ತಂದಿಲ್ಲ ಎಂದು ಪ್ರಸ್ತಾಪಿಸಿದರು.

ಈ ೧೨ ವರ್ಷದ ಅವಧಿಯಲ್ಲಿ ಆಡಳಿತ ಮಂಡಳಿಯವರ ಗಮನಕ್ಕೆ ತಂದಿದ್ದರೆ ಕಮೀಷನ್ ನೀಡುವುದನ್ನು ನಿಲ್ಲಿಸಬಹುದಿತ್ತು. ನೇರವಾಗಿ ಸಂಸ್ಥೆಯ ಗಮನಕ್ಕೆ ತರಬೇಕಿತ್ತಲ್ಲವೇ ? ಕಮಿಷನ್ ದಂಧೆ ನಿಲ್ಲಿಸಲು ಆಡಳಿತ ಮಂಡಳಿಯ ಮೊರೆ ಹೋಗಬೇಕು ಎಂದು ಆತನಿಗೆ ಏಕೆ ಹೊಳೆದಿಲ್ಲ. ಇದು ಮೂಡುವ ಪ್ರಶ್ನೆ. ೨೦೨೦ರಲ್ಲಿ ನಿವೃತ್ತಿಯಾದ ಕಾರ್ಯದರ್ಶಿ ಆರೋಪಿತನನ್ನಾಗಿ ಮಾಡಿದ್ದು ನಿವೃತ್ತಿ ಬಳಿಕ ಈ ಪ್ರಕರಣ

(ಮೊದಲ ಪುಟದಿಂದ) ಬೆಳಕಿಗೆ ಬಂದಿದೆ ಇದು ಎಷ್ಟರಮಟ್ಟಿಗೆ ಸತ್ಯ ಇದನ್ನು ನಂಬಬೇಕೇ ಎಂದು ಪ್ರಶ್ನಿಸಿದರು.

ಸದಸ್ಯ ಕೋಡಿ ಪೊನ್ನಪ್ಪ ಮಾತನಾಡಿ, ಸಂಸ್ಥೆಯು ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿಲ್ಲ ಎಂದ ಮೇಲೆ ಯಾರು ಆರೋಪ ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ನೀವು ಆರೋಪಿಗಳಲ್ಲ ಎಂದು ಸಾಬೀತು ಮಾಡುವ ಜವಾಬ್ದಾರಿ ಆಡಳಿತ ಮಂಡಳಿಯ ಮೇಲಿದೆ. ತನಿಖೆ ಆಗಲಿ ತನಿಖಾ ಅಧಿಕಾರಿಗಳು ಏನು ತನಿಖೆ ಮಾಡುತ್ತಾರೆ ಮಾಡಲಿ. ಇದಕ್ಕೆ ಮಹಾಸಭೆ ಒಪ್ಪಿಗೆ ಕೊಡಬೇಕು ಎಂದರು. ಮಾಜಿ ಅಧ್ಯಕ್ಷ ಗೋಪಾಲ್ ಮಾತನಾಡಿ, ಬೇನಾಮಿ ಹೆಸರಿನಲ್ಲಿ ಖಾತೆಗೆ ನವೆಂಬರ್ ೧೭. ೨೦೨೨ ಹಣ ಹಾಕಿದೆ ಎಂಬ ಉಲ್ಲೇಖವಿದೆ ಆ ತಿಂಗಳು ಬರಲು ಇನ್ನೂ ಎರಡು ತಿಂಗಳಿದೆ ಆಗದರೆ ಈ ಪತ್ರದಲ್ಲಿ ಸತ್ಯಾಸತ್ಯತೆ ಎಷ್ಟಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಸದಸ್ಯ ಬಾಲಕೃಷ್ಣ ಮಾತನಾಡಿ, ಸಂಸ್ಥೆಯ ನಿರ್ದೇಶಕರೊಬ್ಬರು ಮಾಹಿತಿ ಹಕ್ಕಿನ ಮೂಲಕ ವಿಷಯ ಪಡೆದು, ಅದರಲ್ಲಿ ಎಲ್ಲವೂ ಸರಿ ಇದೆ ಎಂದು ತಿಳಿದಿದ್ದರೂ, ಗೊಂದಲ ಸೃಷ್ಟಿ ಮಾಡಲು ಕಾರಣಕರ್ತರಾಗಿದ್ದಾರೆ ಎಂದು ದೂರಿದರು. ಇದಕ್ಕೆ ಸದಸ್ಯ ಗೋಪಾಲ್ ಗೊಂದಲ ಸೃಷ್ಟಿಸಿದ ನಿರ್ದೇಶಕರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ಅಸಮಾಧಾನ ವ್ಯಕ್ತಪಡಿಸಿದರು.

ಸಂಸ್ಥೆಯ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ, ಸಂಸ್ಥೆಯು ಈ ವರ್ಷ ೬೩.೮೨ ಲಕ್ಷದಷ್ಟು ಲಾಭಗಳಿಸಿದ್ದು ಸುಮಾರು ೨೦ ಲಕ್ಷದಷ್ಟು ಕಾಮಗಾರಿ ಪ್ರಗತಿಯಲ್ಲಿದೆ. ಜಾಗಕ್ಕೆ ಫೆನ್ಸಿಂಗ್ ಅಳವಡಿಸಲಾಗಿದ್ದು ತಣ್ಣಿಮಾನಿಯಲ್ಲಿ ಇರುವ ಮಧುವನ ಜಾಗಕ್ಕೆ ದಾಖಲಾತಿಗಾಗಿ ಸರ್ವೆ ನಡೆಯುತ್ತಿದೆ ಎಂದರು. ದುರ್ಗಾ ಶಕ್ತಿ ಸಂಸ್ಥೆಯ ಆರೋಪ ಸತ್ಯಕ್ಕೆ ದೂರ. ಜೇನು ಕೃಷಿಕರ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಆಡಿಟ್ ವರದಿ ಬಂದ ನಂತರ ಆಡಿಟ್ ನಲ್ಲಿ ಸಂಸ್ಥೆಗಳನ್ನು ಪರಿವೀಕ್ಷಣೆ ಮಾಡಲಾಗಿದ್ದು ಎಲ್ಲವೂ ಸ್ಪಷ್ಟವಾಗಿದೆ ಎಂದರು.

ಕೊಟೇಶನ್ ಆಧಾರದಂತೆ ಜೇನು ಖರೀದಿಸಿದ್ದು ಒಂದು ರೂಪಾಯಿ ವ್ಯತ್ಯಾಸ ಕೂಡ ಇರುವುದಿಲ್ಲ. ಲೆಕ್ಕ ಪರಿಶೋಧಕರು ಯಾವುದೇ ಲೋಪದೋಷ ಉಲ್ಲೇಖಿಸಿಲ್ಲ. ಸಂಘದಿAದ ಯಾವುದೇ ಲೋಪ ದೋಷವಾಗಿಲ್ಲ ಲೋಕಾಯುಕ್ತ ತನಿಖೆಗೆ ಸದಸ್ಯರು ಹೋಗುವುದಿದ್ದಲ್ಲಿ ಎಲ್ಲಾ ಸದಸ್ಯರು ಬೆಂಬಲ ನೀಡುತ್ತಾರೆ. ನಮ್ಮ ಸಂಸ್ಥೆ ಯಾವುದೇ ಲೋಪವಿಲ್ಲದೆ ಮುಕ್ತವಾಗಿ ಹೊರಬರುತ್ತದೆ. ಲೋಕಾಯುಕ್ತ ತನಿಖೆಗೆ ಅಗತ್ಯವಾದ ದಾಖಲೆಗಳನ್ನು ಕೂಡ ಕೊಡುತ್ತೇವೆ ಎಂದರು. ಈ ಸಂದರ್ಭ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜೇನು ಕೃಷಿಕರ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ವಸಂತ್, ಸಂಸ್ಥೆಯ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷ ವಿಠಲ ವಂದಿಸಿದರು