ವೀರಾಜಪೇಟೆ, ಸೆ. ೯: ಗಳಿಕೆಯಿಂದ ಪಡೆದು ಸ್ವಾರ್ಥವಿಲ್ಲದೆ ನೀಡುವ ದಾನವು ದುಪ್ಪಟ್ಟುಗೊಂಡು ನಮಗೆ ಮರಳುತ್ತದೆ ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಮೇ. ಬಿದ್ದಂಡ ಎ. ನಂಜಪ್ಪ (ನಂದಾ) ನಿವೃತ್ತ, ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಐಡಿಯಲ್ ಚಿತ್ರಕಲಾ ಸಂಸ್ಥೆ ಅಹಮದಾಬಾದ್ ಪ್ರಯೋಜಿತ ದಿ. ಬಿದ್ದಂಡ ಶೀಲಾ ಚಂಗಪ್ಪ ಅವರ ಜನ್ಮ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆಯ ಅಂಗವಾಗಿ ನಗರದ ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಾಲಾ ವಿದ್ಯಾರ್ಥಿಗಳಿಗೆ ಒಂದು ದಿನದ ಚಿತ್ರಕಲಾ ಶಿಬಿರದ ಸಮರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಿ ಮಾತನಾಡಿದ ಅವರು, ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆಗಳು ಸಹಜವಾಗಿಬೇಕು. ಆದರೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಎಲ್ಲರೂ ತೇರ್ಗಡೆ ಹೊಂದುವುದಿಲ್ಲ ಎಂದರು. ನೀವುಗಳು ಪರರಿಗೆ ನೀಡುವ ಅಂಶಗಳು ತಮಗೆ ದ್ವಿಗುಣವಾಗಿ ಹಿಂದುರುಗುತ್ತದೆ. ಸ್ವಾರ್ಥವಿಲ್ಲದೆ ನೀಡುವ ಜ್ಞಾನವು ನಿಸ್ವಾರ್ಥತೆಯಿಂದ ಮರಳಿ ಪಡೆಯಬಹುದಾಗಿದೆ. ಇದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯ ನಿರ್ದೇಶಕರಾದ ಡಾ. ಫಾತಿಮ ಕಾರ್ಯಪ್ಪ ಅವರು ಮಾತನಾಡಿ, ಪ್ರತಿಯೊಂದು ವಿದ್ಯಾರ್ಥಿಯ ಜೀವನವು ನಿರ್ಧಿಷ್ಟವಾದ ಗುರಿ ಸಾಧನೆಯತ್ತ ಕೇಂದ್ರೀಕೃತವಾಗಿರುತ್ತದೆ. ನಮ್ಮಲ್ಲಿನ ಪ್ರತಿಭೆಯನ್ನು ಹೊರಹಾಕಿದಲ್ಲಿ ಸಮಾಜವು ಗುರುತಿಸುತ್ತದೆ. ಖಾಸಗಿ ಸಂಸ್ಥೆಗಳು ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳನ್ನು ಪ್ರದರ್ಶನ ಮಾಡಲು ವೇದಿಕೆ ಕಲ್ಪಿಸಿಕೊಡುತ್ತವೆ. ಇದನ್ನು ಸದ್ಬಳಕೆ ಮಾಡಿಕೊಂಡಲ್ಲಿ ಸಮಾಜದಲ್ಲಿ ಗೌರವಾಧಾರಗಳು ಲಭಿಸುತ್ತದೆ ಎಂದು ಹೇಳಿದರು. ಐಡಿಯಲ್ ಸಂಸ್ಥೆಯ ಪ್ರಮುಖರಾದ ಬಿದ್ದಂಡ ಆಶಾ ಮಂದಪ್ಪ ಅವರು ಪ್ರಸ್ತಾವಿಕ ಭಾಷಣದಲ್ಲಿ ಕಲೆ ಎಂಬುದು ನಿಂತ ನೀರಲ್ಲಾ, ಕೊನೆಯು ಇಲ್ಲಾ, ಮನಸ್ಸಿನ ಅಂತರಾಳದಲ್ಲಿ ಹುದುಗಿರುವ ಚಿತ್ರಣವು ಪರದೆಯ ಮೇಲೆ ತರುವುದೇ ಚಿತ್ರಕಲೆ ಎಂದರು. ವಿವಿಧ ಶಾಲೆಗಳ ೫೨ ಮಂದಿ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಚಿತ್ರ ಕಲಾವಿದ ಬಾವ ಮಾಲ್ದಾರೆ, ಕಾರ್ಯಕ್ರಮದ ತೀರ್ಪುಗಾರರಾಗಿ ಆಗಮಿಸಿದ ಟಿ.ಎಸ್. ನಾಣಯ್ಯ ಅವರು ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಜೆಮ್ಮಿ ಗಣಪತಿ ಮಡಿಕೇರಿ ಮತ್ತು ಜೆಪ್ಪು ಗಣಪತಿ, ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯ ಮುಖ್ಯೋಪಧ್ಯಾಯ ಬಿ.ಎಸ್. ಲಾಲ್ ಕುಮಾರ್ ಉಪಸ್ಥಿತರಿದ್ದರು. ಸಮಾರೋಪ ಕಾರ್ಯಕ್ರಮದಲ್ಲಿ ಹವ್ಯಾಸಿ ಚಿತ್ರ ಕಲಾವಿದ ಸಾದೀಖ್. ಚಿತ್ರ ಕಲಾ ಸಂಸ್ಥೆಯ ಸದಸ್ಯರಾದ ದಿವ್ಯಾ ಮುತ್ತಣ್ಣ, ವರ್ಗಿಸ್, ಮೋನಾ ಬೋಪಣ್ಣ, ಅಂಜಲಿ ಜೀವನ್, ಶ್ವೇತಾ ಮತ್ತು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.