ವೀರಾಜಪೇಟೆ, ಸೆ. ೯: ಒಂದಕ್ಕೊAದು ಚಂದದ ಗಣೇಶ ಮೂರ್ತಿಗಳು, ಅದನ್ನು ಕಣ್ತುಂಬಿಕೊAಡ ಭಕ್ತಗಣ, ಚಿತ್ತಾಕರ್ಷಕ ಪ್ರಭಾವಳಿಗಳು, ಎದೆಝಲ್ಲೆನಿಸುವ ಧ್ವನಿವರ್ಧಕದ ಅಬ್ಬರ, ಕುಣಿದು ಕುಪ್ಪಳಿಸುತ್ತಿರುವ ಜನ, ಸಂಭ್ರಮ ದುಪ್ಪಟ್ಟುಗೊಳಿಸುವ ಕೊಡವ ವಾಲಗ, ತಮಟೆ ಏಟು, ಆಗೊಮ್ಮೆ ಹೀಗೊಮ್ಮೆ ವರುಣನ ದರ್ಶನ, .ಮಳೆಯನ್ನು ಲೆಕ್ಕಿಸದೆ ಹರಿದು ಬರುತ್ತಿದ್ದ ಜನತೆ.

ಈ ದೃಶ್ಯಗಳು ಕಂಡುಬAದಿದ್ದು ವೀರಾಜಪೇಟೆ ಐತಿಹಾಸಿಕ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಸಂಭ್ರಮದಲ್ಲಿ. ಆ.೩೧ ರಂದು ಏಕಕಾಲದಲ್ಲಿ ಪಟ್ಟಣದ ೨೨ ಕಡೆ ಪ್ರತಿಷ್ಠಾಪನೆಗೊಂಡ ಗೌರಿ-ಗಣೇಶ ಮೂರ್ತಿಗಳನ್ನು ಅನಂತ ಪದ್ಮನಾಭ ವೃತದ ದಿನವಾದ ತಾ. ೧೦ ರಂದು ಸಾಮೂಹಿಕವಾಗಿ ಐತಿಹಾಸಿಕ ಗೌರಿಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಮೂಲಕ ಉತ್ಸವ ಸಂಭ್ರಮದಿAದ ಸಂಪನ್ನಗೊAಡಿತು.

ಪಟ್ಟಣದ ೨೨ ಕಡೆ ಪ್ರತಿಷ್ಠಾಪನೆಗೊಂಡ ಗೌರಿ-ಗಣೇಶ ಮೂರ್ತಿಗಳನ್ನು ಅನಂತ ಪದ್ಮನಾಭ ವೃತದ ದಿನವಾದ ತಾ. ೧೦ ರಂದು ಸಾಮೂಹಿಕವಾಗಿ ಐತಿಹಾಸಿಕ ಗೌರಿಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಮೂಲಕ ಉತ್ಸವ ಸಂಭ್ರಮದಿAದ ಸಂಪನ್ನಗೊAಡಿತು.

(ಮೊದಲ ಪುಟದಿಂದ) ಸಾಂಪ್ರದಾಯಿಕ ಚಾಲನೆ : ಮೊದಲು ನಗರದ ಗಡಿಯಾರ ಕಂಬದ ಬಳಿಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ಸಂಜೆ ೪ ಗಂಟೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳು ಪೂಜೆ ಮಾಡಿ, ೧೦೦೧ ಈಡುಗಾಯಿ ಅರ್ಪಿಸಿ ಪುಷ್ಪ್ಪಾಲಂಕೃತ ವಾಹನದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮೂಲಕ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ಪ್ರದೇಶ ಗೌರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಉಳಿದ ಎಲ್ಲಾ ಮಂಟಪಗಳ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ದೊರೆಯಿತು.

ಎಲ್ಲಾ ಮಂಟಪಗಳಲ್ಲಿ ಗಣೇಶ ಉತ್ಸವ ಮೂರ್ತಿಯಾದರೆ, ಶ್ರೀ ಬಸವೇಶ್ವರ ದೇವಾಲಯದ ಮಂಟಪ ಮಾತ್ರ ಪ್ರದೇಶ ಗೌರಿಯನ್ನು ಉತ್ಸವ ಮೂರ್ತಿಯಾಗಿ ಪ್ರತಿಷ್ಠಾಪಿಸಿದ್ದು ವಿಶೇಷವಾಗಿತ್ತು. ಇದಕ್ಕೆ ಐತಿಹಾಸಿಕ ಹಿನ್ನೆಲೆ ಕೂಡ ಇದೆ.

ಮೆರವಣಿಗೆಯಲ್ಲಿ ಗಡಿಯಾರ ಕಂಬದ ಶ್ರೀ ಮಹಾಗಣಪತಿ ದೇವಾಲಯ, ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ಸಮಿತಿ, ಅರಸುನಗರದ ಶ್ರೀ ವಿಘ್ನೇಶ್ವರ ಸಮಿತಿ, ತೆಲುಗರ ಬೀದಿಯ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದ ವಿನಾಯಕ ಯುವಕ ಭಕ್ತ ಮಂಡಳಿ, ಮೀನುಪೇಟೆಯ ಶ್ರೀ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ, ಪುರಸಭೆಯ ಗಣಪತಿ ಸೇವಾ ಸಮಿತಿ, ಅಯ್ಯಪ್ಪ ಬೆಟ್ಟದ ಶ್ರೀ ವರದ ವಿನಾಯಕ ಸೇವಾ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ಉತ್ಸವ ಸಮಿತಿ, ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ, ನೆಹರು ನಗರದ ಶ್ರೀನೇತಾಜಿ ಉತ್ಸವ ಸಮಿತಿ, ಗಣಪತಿ ಬೀದಿಯ (ಪಂಜರಪೇಟೆ) ಶ್ರೀ ಮಹಾಗಣಪತಿ ಸೇವಾ ಸಂಘ, ಮಲೆತಿರಿಕೆ ಬೆಟ್ಟದ ಶ್ರೀ ಕಣ್ಮಣಿ ವಿನಾಯಕ ಉತ್ಸವ ಸಮಿತಿ, ಸುಣ್ಣದ ಬೀದಿಯ ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಚಿಕ್ಕಪೇಟೆ (ಛತ್ರಕೆರೆ) ಶ್ರೀ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ಸುಂಕದ ಕಟ್ಟೆಯ ಶ್ರೀ ಸರ್ವ ಸಿದ್ಧಿ ವಿನಾಯಕ ಉತ್ಸವ ಸಮಿತಿ, ದಖ್ಖನಿ ಮೊಹಲ್ಲದ ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ, ಗೌರಿಕೆರೆಯ ಶ್ರೀ ಗಣಪತಿ ಉತ್ಸವ ಸಮಿತಿ, ಪಂಜರಪೇಟೆಯ ವಿನಾಯಕ ಸೇವಾ ಸಮಿತಿ, ಕುಕ್ಲೂರಿನ ವಿಘ್ನೇಶ್ವರ ಸೇವಾ ಸಮಿತಿ, ಶಿವಕೇರಿಯ ಶ್ರೀ ವಿನಾಯಕ ಸೇವಾ ಸಮಿತಿ, ಕೆ.ಬೋಯಿಕೇರಿಯ ಕೆಂಕೇರಮ್ಮ ದೇವಾಲಯದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಗಾಂಧಿ ನಗರ ಗಣಪತಿ ಸೇವಾ ಸಮಿತಿಯ ಮಂಟಪಗಳು ನಗರದ ರಾಜಬೀದಿಯಲ್ಲಿ ಸಾಗಿದವು.

ನಗರದ ಆದಿಪೂಜಿತ ಗಣಪತಿ ದೇವಾಲಯ ಸಮಿತಿಯ ಮಂಟಪದ ಹಿಂದೆ ಒಂದೊAದೆ ಮಂಟಪಗಳು ಸಾಗುವಂತೆ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿತ್ತು. ಪ್ರತಿ ಸಮಿತಿಗೂ ಸಂಖ್ಯೆ ನೀಡಲಾಗಿತ್ತು. ಅದರ ಆಧಾರದಲ್ಲಿ ಆಯಾ ಪ್ರದೇಶದಿಂದ ಹೊರಟ ಮಂಟಪಗಳು ಸರತಿ ಸಾಲಿನಲ್ಲಿ ಸಾಗಿತು. ಪ್ರತಿ ಮಂಟಪಗಳು ವಿಶೇಷ ಅಲಂಕಾರದ ಜೊತೆಗೆ ಚಿತ್ತಾಕರ್ಷಕ ಪ್ರಭಾವಳಿ ಜನರನ್ನು ತನ್ನತ್ತ ಸೆಳೆಯುತಿತ್ತು. ಬೆಳಕು ಮರೆಯಾಗಿ ಕತ್ತಲು ಆವರಿಸುತ್ತಿದ್ದಂತೆ ನಗರ ದೀಪಗಳಿಂದ ಮಿಂಚುತಿತ್ತು. ಜನದಟ್ಟಣೆ ಹೆಚ್ಚಾಗ ತೊಡಗಿತು. ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಗಣ ವಿಸರ್ಜನೋತ್ಸವಕ್ಕೆ ಸಾಕ್ಷಿಯಾದರು.

ಮನೆ ಮಾಡಿದ ಸಂಭ್ರಮ

ವಿಸರ್ಜನೋತ್ಸವಕ್ಕೂ ಮುನ್ನ ನಡೆಯುವ ಪ್ರತಿ ಸಮಿತಿಗಳ ಮಂಟಪದ ಮೆರವಣಿಗೆ ಕಂಡು ಜನ ಪುಳಕಿತರಾದರು. ಮಿನಿ ದಸರಾವೆಂದೆ ಕರೆಸಿಕೊಳ್ಳುವ ವಿಸರ್ಜನೋತ್ಸವ ಅಕ್ಷರಶಃ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತಿತ್ತು. ಪಟ್ಟಣ ನವವಧುವಿನಂತೆ ಅಲಂಕಾರಗೊAಡಿತ್ತು. ಸಂಭ್ರಮದೊAದಿಗೆ ಭಕ್ತಾದಿಗಳು ಪ್ರತಿಷ್ಠಾಪಿತ ಮೂರ್ತಿಗೆ ಪೂಜೆ ಸಲ್ಲಿಸುತ್ತಿದ್ದರು. ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಎಲ್ಲಾ ವರ್ಗದ ಜನ ಸಂಭ್ರಮದಲ್ಲಿ ಪಾಲುದಾರರಾದರು. ಉತ್ಸವ ಮೂರ್ತಿಗಳು ಒಂದಕ್ಕಿAತ ಒಂದು ಅಂದವಾಗಿತ್ತು. ಪರಿಸರ ಸ್ನೇಹಿ ಮಣ್ಣಿನ ಗಣಪ ಕೂಡ ಪ್ರತಿಷ್ಠಿತಗೊಂಡಿತ್ತು.

ಮಳೆಯ ಸಿಂಚನ

ಮಧ್ಯಾಹ್ನದಿಂದ ಪಟ್ಟಣದಲ್ಲಿ ಮಳೆರಾಯ ಆಗಾಗ್ಗೆ ದರ್ಶನ ನೀಡುತ್ತಿದ್ದ. ಇದು ಸಂಭ್ರಮವನ್ನು ಕಳೆಗುಂದಿಸುವ ಆತಂಕವನ್ನು ಉಂಟು ಮಾಡಿತ್ತು. ಆದರೆ, ಜೋರು ಮಳೆ ಇಲ್ಲದ ಕಾರಣ ಛತ್ರಿ ಹಿಡಿದು ಜನರು ನಗರ ಪ್ರದಕ್ಷಿಣೆ ಹಾಕಿದರು. ಈ ನಡುವೆಯೂ ಜನರು ಡಿಜೆ, ವಾಲಗಕ್ಕೆ ಹೆಜ್ಜೆ ಹಾಕಿ ಖುಷಿ ಪಟ್ಟರು.

ಪೊಲೀಸ್ ಸರ್ಪಗಾವಲು

ಗಣೇಶ ವಿಸರ್ಜನೋತ್ಸವ ಹಿನ್ನೆಲೆ ಪಟ್ಟಣ ಪೂರ್ತಿ ಪೊಲೀಸ್ ಸರ್ಪಗಾವಲು ಇತ್ತು. ಎಸ್.ಪಿ., ೨ ಡಿವೈಎಸ್ ಪಿ, ೧೨ ವೃತ್ತನಿರೀಕ್ಷಕರುಗಳು, ೩೩, ಉಪನಿರೀಕ್ಷಕರುಗಳು, ೬೦ ಸಹಾಯಕ ಉಪನಿರೀಕ್ಷಕರುಗಳು, ೪೦೦ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ೩ ಕೆಎಸ್‌ಆರ್‌ಪಿ ಹಾಗೂ ೮. ಡಿಎಆರ್ ತುಕಡಿಗಳಿದ್ದವು. ಆಯಕಟ್ಟು ಪ್ರದೇಶದಲ್ಲಿ ಪೊಲೀಸರ ಕಣ್ಗಾವಲಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಎ. ಅಯ್ಯಪ್ಪ ಅವರು ಬೆಳಿಗ್ಗಿನಿಂದಲೇ ಸ್ಥಳದಲ್ಲಿದ್ದು ಮಾಹಿತಿಯನ್ನು ಪಡೆದುಕೊಂಡರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ವೀರಾಜಪೇಟೆ ಡಿವೈಎಸ್‌ಪಿ ನಿರಂಜನ್ ರಾಜೇ ಅರಸ್ ಹಾಗೂ ಮಡಿಕೇರಿ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ನೇತೃತ್ವದ ತಂಡ ಕಾರ್ಯನಿರ್ವಹಿಸಿತು. ಶಾಸಕ ಕೆ.ಜಿ.ಬೋಪಯ್ಯ ಅವರು ಕೂಡ ಅಲ್ಲಲ್ಲಿಗೆ ಭೇಟಿ ನೀಡಿ ಪರಿಶೀಲನಾ ಕಾರ್ಯ ನಡೆಸಿದರು.

-ಚಿತ್ರ ವರದಿ: ಹೆಚ್.ಜೆ. ರಾಕೇಶ್, ಕಿಶೋರ್ ಕುಮಾರ್ ಶೆಟ್ಟಿ