ಇತ್ತೀಚೆಗೆ ಒಂದು ದಿನ, ಹಳೆಯ ದಾಖಲೆಗಳನ್ನು ಪರಿಶೀಲಿಸುತ್ತಿರುವ ಸಂದರ್ಭದಲ್ಲಿ, ಈ ಒಂದು ಮುಖ್ಯವಾದ ಮಾಹಿತಿ ಗಮನವನ್ನು ಸೆಳೆಯಿತು ಮತ್ತು ಗಹನವಾಗಿ ಆಲೋಚಿಸುವಂತೆ ಮಾಡಿತು.

ಅದು ಕೋವಿಡ್ ತಡೆಯಲು ಲಾಕ್‌ಡೌನ್ ಜಾರಿಗೊಳಿಸಿದ್ದ ಸಂದರ್ಭ. ಆಸ್ಪತ್ರೆಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ತುರ್ತು ಚಿಕಿತ್ಸೆ ಮತ್ತು ಅತೀ ಅಗತ್ಯ ಎನಿಸುವ ಕಾರಣಕ್ಕಾಗಿ ಮಾತ್ರ ಆಸ್ಪತ್ರೆಗೆ ಬರುತ್ತಿದ್ದರು.

ಮನೆಯಿಂದ ಹೊರಗೆ ಹೋಗಬಾರದೆಂಬ ನಿರ್ಬಂಧ, ಓಡಾಡಲು ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಅಲಭ್ಯತೆ. ಇಷ್ಟೆಲ್ಲಾ ಅಡೆ ತಡೆಗಳಿದ್ದರೂ ಈ ಒಂದು ವಿಚಾರ ಬಹಳ ಗಂಭೀರವಾಗಿ ಕಂಡು ಬಂದಿದ್ದAತೂ ಸತ್ಯ.

ಐದರಿಂದ ಆರು ವಾರಗಳವರೆಗೂ ಲಾಕ್‌ಡೌನ್ ಇದ್ದಂತಹ ಸಮಯದಲ್ಲಿಯೂ ಸಹ ಸುಮಾರು ಐವತ್ತು ಜನರು ಆತ್ಮಹತ್ಯೆಗೆ ಪ್ರಯತ್ನಪಟ್ಟು, ವೈದ್ಯಕೀಯ ವಿಭಾಗದಲ್ಲಿ ದಾಖಲಾಗಿ, ಶಾರೀರಿಕವಾಗಿ ಚೇತರಿಸಿಕೊಂಡ ನಂತರ, ಆಪ್ತ ಸಮಾಲೋಚನೆಗೆಂದು ಬರುತ್ತಿದ್ದುದು ಕೌತುಕದ ವಿಷಯವಾಗಿತ್ತು.

ಹದಿಹರೆಯದಿಂದ ಹಿಡಿದು, ವಯಸ್ಸಾದ ಹಿರಿಯರೂ ಕೂಡ ಆತ್ಮಹತ್ಯೆ ಪ್ರಯತ್ನವನ್ನು ಮಾಡಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಅವರೊಂದಿಗೆ ಆಪ್ತಸಮಾಲೋಚನೆ ನಡೆಸಿದಾಗ ಕೆಲವೊಂದು ಗಂಭೀರ ವಿಚಾರಗಳು ಸಹ ತಿಳಿದು ಬರುತ್ತಿದ್ದವು.

ಸಾರ್, ಪ್ರತಿದಿನ ನಾನು ಪಯಣಿಸುವ ಬಸ್‌ನಲ್ಲಿ ಒಬ್ಬ ಯುವಕನ ಪರಿಚಯವಾಗಿತ್ತು ಮತ್ತು ಆತನೊಂದಿಗೆ ಚಾಟ್ ಮಾಡುವುದು, ಮೇಸೇಜ್ ಮಾಡುವುದು ಮಾಡುತ್ತಿದ್ದೆ. ಅವನು ನನಗೆ ಪ್ರಫೋಸ್ ಕೂಡ ಮಾಡಿದ್ದ. ಆದರೆ ಏನಾಯಿತೋ, ಏನೋ ಇತ್ತೀಚೆಗೆ ನನ್ನೊಂದಿಗೆ ಅವನು ಮಾತನಾಡುತ್ತಿಲ್ಲ ಮತ್ತು ಬೇರೆಯವರೊಂದಿಗೆ ಸುತ್ತಾಡುತ್ತಿದ್ದಾನೆ. ಈ ವಿಚಾರ ನನ್ನ ಅಪ್ಪ, ಅಮ್ಮನಿಗೂ ತಿಳಿದು ಅವರೂ ಕೂಡ ಬೈದರು. ಇದೆಲ್ಲದರಿಂದ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನಪಟ್ಟೆ ಎಂದು ಆಗ ತಾನೆ ಕಾಲೇಜು ಸೇರಿದ್ದ ಯುವತಿಯೊಬ್ಬಳು ತಿಳಿಸಿದಳು.

ಹದಿ ವಯಸ್ಸಿನಲ್ಲಿ ಮೂಡುವ ಭಾವನೆಗಳು, ಪರಸ್ಪರ ಆಕರ್ಷಣೆ, ಹಾರ್ಮೋನ್‌ಗಳ ಏರಿಳಿತಗಳ ಬಗ್ಗೆ ವಿವರಿಸಿ, ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸುವಂತೆ ತಿಳಿಸಿ ಕಳುಹಿಸಿಕೊಡಲಾಯಿತು.

ಕೋವಿಡ್ ಸಮಸ್ಯೆಯಿಂದಾಗಿ ನೀಟ್ ಪರೀಕ್ಷೆಗಳು ಮುಂದೂಡಲ್ಪಟ್ಟು, ಎರಡು ಮೂರು ವರ್ಷಗಳ ಸತತ ಪ್ರಯತ್ನದ ನಂತರ ಮೆಡಿಕಲ್ ಸೀಟು ಪಡೆದುಕೊಂಡಿದ್ದ ವಿದ್ಯಾರ್ಥಿಯೊಬ್ಬರು ಐಸಿಯುನಲ್ಲಿ ಅಡ್ಮಿಟ್ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಶಾರೀರಿಕವಾಗಿ ಚೇತರಿಸಿಕೊಂಡ ನಂತರ ಆ ವಿದ್ಯಾರ್ಥಿಯು, ತನಗೆ ಮೆಡಿಕಲ್ ಮಾಡಿ ಡಾಕ್ಟರ್ ಆಗಬೇಕೆಂಬ ಆಸೆ ಇದೆಯೆಂದು, ಆದರೆ ಹೊಸ ಪರಿಸರ, ಹೊಸ ಭಾಷೆ, ಕಠಿಣವಾದ ಪಾಠಗಳು, ಜೊತೆಗೆ ಕುಟುಂಬದಲ್ಲಿ ಇರುವ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸಲಾಗದೆ, ಮನಸ್ಸು ತಲ್ಲಣಗೊಂಡು ಚಿಕಿತ್ಸೆಗೆಂದು ನೀಡಿದ್ದ ಮಾತ್ರೆಗಳನ್ನೇ ಅಧಿಕವಾಗಿ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟೆ ಎಂಬ ವಿಚಾರವನ್ನು ತಿಳಿಸಿದರು.

ದೀಪದ ಕೇಳಗೆ ಕತ್ತಲು ಎಂಬAತೆ, ವೈದ್ಯಕೀಯ ಕ್ಷೇತ್ರವೂ ಸಹ ಈ ಸಮಸ್ಯೆಗೆ ಹೊರತಲ್ಲ ಎನಿಸಿತು. ದಿನನಿತ್ಯ ಬರಬಹುದಾದ ಸಮಸ್ಯೆಗಳನ್ನು ಎದುರಿಸಲು ಸೂಕ್ತವಾದ ಮಾರ್ಗದರ್ಶನವನ್ನು ಮಾಡಿ, ಮನೋಸ್ಥೆöÊರ್ಯವನ್ನು ತುಂಬಲಾಯಿತು ಮತ್ತು ಅವಶ್ಯಕವಾಗಿದ್ದ ಮಾತ್ರೆಗಳ ಚಿಕಿತ್ಸೆಯನ್ನು ನೀಡಲಾಯಿತು.

ಇನ್ನೂ ಹಲವಾರು ಪ್ರಕರಣಗಳಲ್ಲಿ, ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳು ಬರಲಿಲ್ಲವೆಂದೂ, ಅಪ್ಪ, ಅಮ್ಮ ಬಯ್ಯಬಹುದೆಂಬ ಭಯದಿಂದಲೋ, ಆತ್ಮಹತ್ಯೆಗೆ ಪ್ರಯತ್ನಪಟ್ಟ ಹದಿಹರೆಯದ ವಯಸ್ಸಿನವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಅಂಶಗಳಾಗಿದ್ದವು.

ಜೀವನದಲ್ಲಿ ಅಂದುಕೊAಡ ಯಶಸನ್ನು ಸಾಧಿಸಲಾಗಲಿಲ್ಲವೆಂದು, ನಿರುದ್ಯೋಗ, ದಾಂಪತ್ಯ ಕಲಹ, ಕೌಟುಂಬಿಕ ಸಮಸ್ಯೆಗಳು, ಕುಡಿತ ಮತ್ತು ಮಾದಕ ವ್ಯಸನಗಳ ದುರಭ್ಯಾಸಗಳು, ಆತ್ಮಹತ್ಯೆಗೆ ಪ್ರಯತ್ನಪಡುವ ಮಧ್ಯ ವಯಸ್ಸಿನವರಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶಗಳಾಗಿವೆ.

ಇಷ್ಟು ವರ್ಷಗಳ ನನ್ನ ಜೀವನದಲ್ಲಿ ಸುಖಃ, ದುಖಃಗಳೆರಡನ್ನೂ ನೋಡಿದ್ದೇನೆ, ಇಬ್ಬರು ಮಕ್ಕಳ ಮದುವೆಯನ್ನು ಮಾಡಿ, ಮೊಮ್ಮಕ್ಕಳನ್ನೂ ಸಹ ಕಂಡಿದ್ದೇನೆ. ಆದರೆ ಇಷ್ಟು ವರ್ಷ ಜೊತೆಗಿದ್ದ ನನ್ನ ಬಾಳ ಸಂಗಾತಿ ಹೋದ ತಿಂಗಳು ಅಗಲಿದ ನಂತರ ಮನಸ್ಸೇಕೊ ನಿರಾಸೆಯ ಕೂಪಕ್ಕೆ ದೂಡಲ್ಪಟ್ಟಿತು, ಇದರ ಜೊತೆಗೆ ಶುಗರ್ ಕಾಯಿಲೆ ಬೇರೆ. ಹಾಗೆಂದೆ ಈ ಸಮಸ್ಯೆಗಳಿಂದ ಮುಕ್ತಿ ಹೊಂದಲು ಆತ್ಮಹತ್ಯೆಗೆ ಪ್ರಯತ್ನಪಟ್ಟೆ, ಆದರೆ ತಾನೊಂದು ಬಗೆದರೆ, ದೈವ ಒಂದು ಬಗೆದೀತು ಎಂಬAತೆ ಬದುಕುಳಿದು ಬಿಟ್ಟೆ. ಇನ್ನು ಮುಂದೆ ಇರುವಷ್ಟು ಕಾಲ ಮೊಮ್ಮಕ್ಕಳೊಂದಿಗೆ ಚೆನ್ನಾಗಿ ಇರಬೇಕು ಅಂದುಕೊAಡಿದ್ದೇನೆ, ಎಂದು ಸಾವಿನಂಚಿನಿAದ ಹೊರಬಂದು ಭರವಸೆಯ ನುಡಿಗಳನ್ನಾಡಿದರು ಆ ಹಿರಿಯರು. ಆತ್ಮಹತ್ಯೆ ಎಂಬುದು ಇಂದಿನ ಜಗತ್ತಿನ ಒಂದು ಸಾಮಾಜಿಕ ಪಿಡುಗಾಗಿದೆ. ಈ ಗಂಭೀರ ವಿಷಯವನ್ನು ಅರಿತುಕೊಂಡೆ ವಿಶ್ವ ಸಂಸ್ಥೆಯು ಪ್ರತಿವರ್ಷ ಸೆಪ್ಟೆಂಬರ್ ಹತ್ತನೆಯ ತಾರೀಖಿನಂದು 'ಆತ್ಮಹತ್ಯೆ ತಡೆ ದಿನವೆಂದು' ಘೋಷಿಸಿದೆ. "ಅಡಿeಚಿಣiಟಿg hoಠಿe ಣhಡಿough ಚಿಛಿಣioಟಿ" ಎಂಬ ಘೋಷವಾಕ್ಯದೊಂದಿಗೆ ಈ ಸಾಮಾಜಿಕ ಪಿಡುಗಿನ ವಿರುದ್ಧ ಎಲ್ಲೆಡೆ ಅರಿವು ಮೂಡಿಸಲು ಸಹಕಾರಿಯಾಗಿದೆ. ಹೊಳೆಯಲ್ಲಿ ಮುಳುಗುವವನಿಗೆ ಒಂದು ಹುಲ್ಲುಕಡ್ಡಿಯೂ ಆಸರೆ ಎನ್ನುವಂತೆ, ಅರಳುವ ಮುನ್ನವೇ, ಅಳಿಯುವ ನಿರ್ಧಾರ ಮಾಡುವ ಎಷ್ಟೋ ಮನಸ್ಸುಗಳಿಗೆ, ಒಂದಿಷ್ಟು ಭರವಸೆಯ ಮಾತು, ಸಹಾಯ ಹಸ್ತ, ಜೀವನದೆಡೆಗಿನ ಪ್ರೇಮ, ಅತ್ಯಮೂಲ್ಯ ಜೀವಗಳನ್ನು ಉಳಿಸಲು, ಸಮಾಜವನ್ನು ಉತ್ತಮ ರೀತಿಯಲ್ಲಿ ಬೆಳೆಸಲು ಸಹಕಾರಿಯಾಗುತ್ತದೆ. ಈ ಕೈಂಕರ್ಯದಲ್ಲಿ ಎಲ್ಲರ ಪಾಲುದಾರಿಕೆಯು ಬಹಳ ಮುಖ್ಯವಾಗಿದೆ. ಈ ಲೇಖನದ ಸಾರ್ಥಕತೆಯೂ ಇದರಲ್ಲಿಯೇ ಅಡಗಿದೆ.

- ಡಾ. ಸತೀಶ್ ಕುಮಾರ್ ಎಸ್.ವಿ.