ಕೂಡಿಗೆ, ಸೆ.೧೦ : ಕೊಡಗಿನ ಗಡಿಭಾಗದಲ್ಲಿರುವ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜಿಲ್ಲೆಯ ಏಕೈಕ ಕಾವೇರಿ ಹ್ಯಾಂಡ್‌ಲೂA ಶಾಖೆಯಾದ ಕಾವೇರಿ ಸಮೂಹ ನೇಯ್ಗೆ ಕೇಂದ್ರವು ಕಳೆದ ೨೫ ವರ್ಷಗಳಿಂದ ಮೂಲೆ ಗುಂಪಾಗಿ ಸಣ್ಣ ಪ್ರಮಾಣದಲ್ಲಿ ನೇಯ್ಗೆ ಕಾರ್ಯ ನಡೆಯುತ್ತಿತ್ತು. ಇದೀಗ ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ರೂ. ೪೦ ಲಕ್ಷ ಹಣ ಬಿಡುಗಡೆಗೊಂಡಿದೆ.

ಕಳೆದ ನಾಲ್ಕು ವರ್ಷಗಳಿಂದ ಕಟ್ಟಡವು ತೀರಾ ಹಾಳಾಗಿ ಬೀಳುವ ಹಂತದಲ್ಲಿದ್ದದನ್ನು ಅಲ್ಲಿನ ನೇಕಾರರು ಮತ್ತು ಜಿಲ್ಲಾ ನೇಕಾರ ಒಕ್ಕೂಟವು ಇಲಾಖೆಯವರಿಗೆ ಪತ್ರ ವ್ಯವಹಾರ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಮತ್ತು ಅಧಿಕಾರಿಗಳ ತಂಡ ಘಟಕದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಾಜ್ಯ ಮಟ್ಟದ ಅಧಿಕಾರಿ ಗಮನಕ್ಕೆ ತಂದಿದ್ದರು. ಅದರಂತೆ ರಾಜ್ಯಮಟ್ಟದ ಅಧಿಕಾರಿಗಳ ತಂಡವು ಸಹ ಶಿರಂಗಾಲ ಗ್ರಾಮದ ನೇಯ್ಗೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಗ್ರವಾದ ವರದಿಯನ್ನು ಇಲಾಖೆಗೆ ಮಾಹಿತಿಯನ್ನು ನೀಡಿದರು. ಅದರಂತೆ ಈಗಾಗಲೇ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ನೂತನ ಕಟ್ಟಡವನ್ನು ಕಟ್ಟಲು ಸರಕಾರದಿಂದ ರೂ. ೪೦ ಲಕ್ಷ ಹಣ ಬಿಡುಗಡೆಯಾಗಿದ್ದು ಕ್ರಿಯಾ ಯೋಜನೆ ಅನುಗುಣವಾಗಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ

(ಮೊದಲ ಪುಟದಿಂದ) ಸಹಾಯಕ ನಿರ್ದೇಶಕ ಗುರುಸ್ವಾಮಿನವರು ಶಿರಂಗಾಲದಲ್ಲಿ ತಿಳಿಸಿದರು

ಕಟ್ಟಡ ನಿರ್ಮಾಣ ನಂತರ ಈ ವ್ಯಾಪ್ತಿಯ ನೇಯ್ಗೆ ಕೆಲಸದಲ್ಲಿ ತೊಡಗುವ ನೇಕಾರರಿಗೆ ಅನುಕೂಲವಾಗುವಂತೆ ನೂತನ ತಂತ್ರಜ್ಞಾನ ಕೈಮಗ್ಗದ ಯಂತ್ರಗಳನ್ನು ಅಳವಡಿಕೆ ಮಾಡಿ ನೇಯ್ಗೆಗೆ ಬೇಕಾಗುವ ಕಚ್ಚಾವಸ್ತುಗಳನ್ನು ನೀಡಿ ಅದರ ಮೂಲಕ ಸಿದ್ಧವಾದ ಬೆಡ್ ಶಿಟ್ ಮತ್ತು ಇತರೆ ಸಿದ್ಧ ಉಡುಪುಗಳನ್ನು ಸಿದ್ಧತೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುವುದು.

ಅಲ್ಲದೆ ಹಾಲಿ ಇರುವ ೫೮ ನೇಕಾರರಿಗೆ ನೇಕಾರರ ಗುರುತಿನ ಚೀಟಿಯನ್ನು ನೀಡಲಾಗಿದೆ ಜಿಲ್ಲೆಯ ಕೈಮಗ್ಗ ನೇಕಾರರಿಗೆ ಸಹಕಾರ ನೀಡುವ ಎಲ್ಲಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗುರುಸ್ವಾಮಿ ತಿಳಿಸಿದ್ದಾರೆ.

ಈಗಾಗಲೇ ಶಿರಂಗಾಲ ನೇಯ್ಗೆ ಕೇಂದ್ರದಲ್ಲಿ ನೇಯ್ಗೆ ಕೆಲಸ ಮಾಡುತ್ತಿರುವ ನೇಕಾರರಿಗೆ ಕೇಂದ್ರದಲ್ಲಿರುವ ನೇಯ್ಗೆ ಯಂತ್ರಗಳನ್ನು ನೂತನ ಕಟ್ಟಡ ನಿರ್ಮಾಣ ಆಗುವವರೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಯಾವುದಾದರೂ ಕಟ್ಟಡದಲ್ಲಿ ನೇಯ್ಗೆಯ ಯಂತ್ರಗಳನ್ನು ಅಳವಡಿಕೆ ಮಾಡಿಸಿ ನೇಯ್ಗೆ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರAU ಅಧಿಕಾರಿಯವರನ್ನು ಒತ್ತಾಯಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.