ಸಿದ್ದಾಪುರ, ಸೆ. ೮: ಮಾಲ್ದಾರೆ ಭಾಗದಲ್ಲಿ ಕಾಡಾನೆಗಳ ಹಾಗೂ ಹುಲಿಯ ಹಾವಳಿಯಿಂದ ತತ್ತರಿಸಿರುವ ಗ್ರಾಮಸ್ಥರು ಇದೀಗ ಕೆನ್ನಾಯಿಗಳ ಹಾವಳಿಯಿಂದ ಭಯಭೀತರಾಗಿದ್ದಾರೆ. ಮಾಲ್ದಾರೆ ಸಮೀಪದ ಬಾಡಗ - ಬಾಣಂಗಾಲ ಗ್ರಾಮದ ಘಟ್ಟದಳ್ಳದ ಬಳಿ ಬಿಬಿಟಿಸಿ ಸಂಸ್ಥೆಗೆ ಸೇರಿದ ಕಾಫಿ ತೋಟದೊಳಗೆ ಬೀಡುಬಿಟ್ಟಿರುವ ೧೦ಕ್ಕೂ ಅಧಿಕ ಕೆನ್ನಾಯಿಗಳು ಕಾಫಿ ತೋಟದೊಳಗೆ ರಾಜಾರೋಷವಾಗಿ ಸುತ್ತಾಡುತ್ತಿವೆ. ಕಳೆದೆರಡು ದಿನಗಳ ಹಿಂದೆ ಕಾಫಿ ತೋಟದೊಳಗೆ ಜಿಂಕೆಯೊAದರ ಮೇಲೆ ದಾಳಿ ನಡೆಸಿ ಕೊಂದು ತಿಂದು ಹಾಕಿರುವುದು ಗೋಚರಿಸಿದೆ. ಸ್ಥಳೀಯ ಕಾರ್ಮಿಕರು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ತಿತಿಮತಿ ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಂಕೆಯ ಕಳೇಬರ ಪತ್ತೆಯಾಗಿದೆ.