*ಸಿದ್ದಾಪುರ ಸೆ.೮ : ಅತ್ತಿಮಂಗಲ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಇಂದು ನಡೆಯಿತು. ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಅವರ ನೇತೃತ್ವದಲ್ಲಿ ೨೫ ಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯಾಚರಣೆ *ಸಿದ್ದಾಪುರ ಸೆ.೮ : ಅತ್ತಿಮಂಗಲ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಇಂದು ನಡೆಯಿತು. ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಅವರ ನೇತೃತ್ವದಲ್ಲಿ ೨೫ ಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯಾಚರಣೆ ದಾಟಲು ಹಿಂದೇಟು ಹಾಕಿದವು. ನೀರಿನ ಹರಿವು ಹೆಚ್ಚು ಇದ್ದುದರಿಂದ ಮರಿಯಾನೆಗಳು ನದಿಗೆ ಇಳಿಯಲಿಲ್ಲ. ಮತ್ತೆ ಕಾಡಾನೆಗಳು ಅಕ್ಕಪಕ್ಕದ ತೋಟಗಳಿಗೆ ನುಸುಳಿದವು. ಇಂದಿನ ಕಾರ್ಯಾಚರಣೆ ವಿಫಲವಾದ ಹಿನ್ನೆಲೆ ಅರಣ್ಯ ಸಿಬ್ಬಂದಿಗಳು ಮರಳಿದರು. ಶುಕ್ರವಾರ ಮತ್ತೆ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳೆಗಾರರ ವಿರೋಧ

ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಕಾಫಿ ಗಿಡಗಳಿಗೆ ಹಾನಿಯಾಗುತ್ತಿದ್ದು, ನಷ್ಟ ಉಂಟಾಗುತ್ತಿದೆ. ಪ್ರಸ್ತುತ ಕಾಫಿ ಫಸಲು ಬಿಟ್ಟಿದ್ದು, ಎಲ್ಲವೂ ನೆಲಕಚ್ಚುತ್ತಿದೆ. ತೋಟಗಳ ಮೂಲಕ ಕಾರ್ಯಾಚರಣೆ ನಡೆಸಬಾರದು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.