ಸುಂಟಿಕೊಪ್ಪ, ಸೆ. ೮: ಕ್ಯಾಥೋಲಿಕ್ ಕ್ರೆöÊಸ್ತರ ಮಾತೆ ಮರಿಯಮ್ಮನವರ ಜನ್ಮದಿನೋತ್ಸವದ ಅಂಗವಾಗಿ ದಿವ್ಯ ಅಡಂಬರ ಬಲಿಪೂಜೆಯನ್ನು ಧರ್ಮಗುರುಗಳು ನೇರವೇರಿಸಿದರು ನೂರಾರು ಸಂಖ್ಯೆಯಲ್ಲಿ ಕ್ರೆöÊಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಹಾಗೂ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮಾತೆ ಮರಿಯಮ್ಮನವರ ಜನ್ಮದಿನದ ಬಲಿಪೂಜೆಯನ್ನು ಸಂತ ಅಂತೋಣಿ ದೇವಾಲಯದ ಧರ್ಮಗುರು ಅರುಳ್ ಸೆಲ್ವಕುಮಾರ್ ಹಾಗೂ ಧರ್ಮಗುರುಗಳಾದ ಮೈಸೂರು ಧರ್ಮಾಧ್ಯಕ್ಷರ ನಿಲಯದ ಧರ್ಮಗುರು ಜೇಮ್ಸ್ ಸಮರ್ಪಿಸಿದರು. ನಂತರ ಮಾತೆ ಮರಿಯಮ್ಮನವರ ಮೂರ್ತಿಯನ್ನು ಮೆರವಣಿಗೆಯ ಮೂಲಕ ಸಂತ ಮೇರಿ ಶಾಲಾ
(ಮೊದಲ ಪುಟದಿಂದ) ಆವರಣದಲ್ಲಿ ಇರಿಸಿ ಪುಷ್ಪನಮನ ಸಲ್ಲಿಸಲಾಯಿತು. ತಾ.೮ ರಂದು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯವರ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿ ಪೆಸ್ಟ್) ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ನಡೆಯುವ ೯ ದಿನಗಳ ದಿವ್ಯ ಬಲಿಪೂಜೆ ಹಾಗೂ ನೊವೇನಾ ಪ್ರಾರ್ಥನೆ ಹಾಗೂ ದಿವ್ಯ ಬಲಿಪೂಜೆಯು ಆಗಸ್ಟ್ ೩೦ ರಿಂದ ಆರಂಭಗೊAಡು ತಾ.೮ ರವರೆಗೆ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ.
ನೊವೇನಾ ಪ್ರಾರ್ಥನೆ ಸಂದರ್ಭದಲ್ಲಿ ವಿಶೇಷವಾಗಿ ಮಾತೆ ಮರಿಯಮ್ಮನವರಿಗೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಲಾಗುವುದು. ಚಿಕ್ಕಮಕ್ಕಳು, ಯುವಕ, ಯುವತಿಯರು ಹಾಗೂ ಹಿರಿಯರು ಪ್ರತಿ ದಿನ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಗಾಯನ ಬಲಿಪೂಜೆಯಲ್ಲಿ ಪಾಲ್ಗೊಂಡು ನಂತರ ತಾವು ತಂದ ಹೂವುಗಳನ್ನು ಕ್ರಿಸ್ತರ ತಾಯಿ ಮರಿಯಮ್ಮನವರಿಗೆ ಸಮರ್ಪಿಸುತ್ತಾರೆ. ೯ ದಿನಗಳ ನೊವೇನಾ ಪ್ರಾರ್ಥನೆ ಕಾರ್ಯಕ್ರಮಗಳೊಂದಿಗೆ ದಿನ ತಾ. ೮ ರಂದು ಹೊಸ ತೆನೆಗಳ ‘ಮೊಂತಿ ಪೆಸ್ಟ್’ ಹಬ್ಬವನ್ನು ಎಲ್ಲಾ ದೇವಾಲಯಗಳಲ್ಲಿ ಸಾಮೂಹಿಕವಾಗಿ ಆಚರಿಸಿ ಪ್ರಾರ್ಥನೆ ಮಾಡಲಾಗುತ್ತದೆ. ಆನಂತರ ಮನೆ ಮನೆಗಳಲ್ಲಿ ಭಕ್ಷ ಭೋಜನಗಳೊಂದಿಗೆ ಆಚರಿಸುವುದು ಸಂಪ್ರದಾಯವಾಗಿದೆ.
ಈ ಧರ್ಮ ಕೇಂದ್ರಕ್ಕೆ ಸೇರಿದ ಪಿ.ಎಫ್. ಸಬಾಸ್ಟೀನ್, ಲಿಯೋನಾ ದಂಪತಿಗಳ ಪುತ್ರಿ ಮರಿಯ ಡೀನಾ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಉತ್ತಮ ಸಾಧನೆಯನ್ನು ಮಾಡಿದ್ದು ಅವರನ್ನು ಸಮುದಾಯದ ವತಿಯಿಂದ ಧರ್ಮಗುರುಗಳಾದ ಜೇಮ್ಸ್ ಹಾಗೂ ಅರುಳ್ ಸೆಲ್ವಕುಮಾರ್ ಸನ್ಮಾನಿಸಿ ಗೌರವಿಸಿದರು.