ಮಡಿಕೇರಿ, ಸೆ. ೮: ಮಲಯಾಳಿ ಬಾಂಧವರ ಸಂಭ್ರಮದ ಹಬ್ಬವಾದ ತಿರುಓಣಂ ಅನ್ನು ಜಿಲ್ಲೆಯಾದ್ಯಂತ ಮಲಯಾಳಿ ಸಮುದಾಯದವರು ಸಡಗರದಿಂದ ಆಚರಿಸಿದರು. ಹೂವಿನಿಂದ ರಂಗೋಲಿ (ಪೂಕಳಂ) ರಚಿಸಿ, ಮನೆ ಹಾಗೂ ದೇವಾಲಯ ಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ಓಣಂ ಹಬ್ಬದ ವಿಶೇಷ ಖಾದ್ಯಗಳನ್ನು ಮಾಡಿ ಸವಿದು ಹಬ್ಬಾಚರಣೆ ಮಾಡಿದರು. ನಗರದ ಮುತ್ತಪ್ಪ ಕ್ಷೇತ್ರದ ಆವರಣದಲ್ಲಿರುವ ದೈವ ಸನ್ನಿಧಿಗಳಲ್ಲಿಯೂ ಓಣಂ ಹಬ್ಬದ ಪ್ರಯುಕ್ತ ಪೂಕಳಂ ರಚಿಸಿ ಪೂಜಾ ಕೈಂಕರ್ಯಗಳು ನೆರವೇರಿದವು.
ಕಣಿವೆ : ಕೇರಳಿಯರ ಪವಿತ್ರ ಹಬ್ಬವಾದ ಓಣಂ ಹಬ್ಬವನ್ನು ಮಲೆಯಾಳಿ ಬಾಂಧವರು ಕುಶಾಲನಗರ ತಾಲೂಕಿನಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು.
(ಮೊದಲ ಪುಟದಿಂದ) ಮನೆಯಂಗಳದಲ್ಲಿ ತಿಂಗಳುಗಳಿAದ ಬೆಳೆಸಿದ್ದ ಬಗೆ ಬಗೆಯ ಪುಷ್ಪಗಳ ದಳಗಳನ್ನು ಬಿಡಿಸಿಟ್ಟು ಮನೆಯ ಪ್ರವೇಶ ದ್ವಾರದಲ್ಲಿ ಸಾಮೂಹಿಕವಾದ ಪೂಕಳಂ ಬಿಡಿಸಿದರು. ಬಳಿಕ ಮನೆಯೊಳಗೆ ಪೂಜಾದಿ ಧಾರ್ಮಿಕ ಕೈಂಕರ್ಯಗಳನ್ನು ಪೂರ್ಣಗೊಳಿಸಿದರು. ನಂತರ ಓಣಂ ಸದ್ಯವನ್ನು ಸಾಮೂಹಿಕವಾಗಿ ತಯಾರಿಸಿದರು. ಒಟ್ಟು ೨೧ ಖಾದ್ಯಗಳಿದ್ದ ಓಣಂ ಸದ್ಯ ಸವಿದರು.
ಸುಂಟಿಕೊಪ್ಪ: ಇಲ್ಲಿನ ಮಲಯಾಳಿ ಜನಾಂಗದವರು ಓಣಂ ಹಬ್ಬವನ್ನು ಮನೆ ಮನೆಗಳಲ್ಲಿ ಸಂಭ್ರಮದಿAದ ಆಚರಿಸಿದರು. ಬಲಿಚಕ್ರವರ್ತಿ (ಮಾವೇಲಿ) ಪಾತಾಳ ಲೋಕದಿಂದ ಭೂಲೋಕಕ್ಕೆ ಬರುತ್ತಾರೆ ಎಂಬ ನಂಬಿಕೆಯಿAದ ಮನೆ ಮುಂಭಾಗದಲ್ಲಿ ಹಲವು ಬಗೆಯ ಹೂವುಗಳನ್ನು ತಂದು ಅದರ ಎಸಳುಗಳನ್ನು ಬೇರ್ಪಡಿಸಿ ರಂಗೋಲಿ ಬಿಡಿಸಿ, ಹಲವು ಬಗೆಯ ಖಾದ್ಯಗಳನ್ನು ಮಾಡಿ ನೆಂಟರನ್ನು, ಸ್ನೇಹಿತರನ್ನು ಮನೆಗೆ ಕರೆದು ವಿಶೇಷ ಪೂಜೆ-ಪ್ರಾರ್ಥನೆ ಮಾಡಿ ಸುಖ ಶಾಂತಿ ಸಮೃದ್ಧಿ ತರಲಿ ಎಂದು ಪರಸ್ಪರ ಹಾರೈಸಿದರು.*ಗೋಣಿಕೊಪ್ಪ: ಪ್ರಜೆಗಳ ರಕ್ಷಕನಾಗಿದ್ದ ಮಹಾಬಲಿ ಚಕ್ರವರ್ತಿಯನ್ನು ಮನೆ, ಮನೆಗಳಲ್ಲಿ ನೆನೆಯುವ ಹಬ್ಬವೇ ಓಣಂ ಎಂದು ಮಲಯಾಳಿ ಸಮಾಜದ ಪ್ರಮುಖರು ಆಚರಣೆ ಮಾಹಿತಿ ಹಂಚಿಕೊAಡರು.
ಓಣಂ ಪ್ರಯುಕ್ತ ಗುರುವಾರ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ಪೊನ್ನಂಪೇಟೆ ಪಳ್ಳಿಯತ್ ಮಡಪುರ ಮುತ್ತಪ್ಪ ದೇವಸ್ಥಾನದಲ್ಲಿ ಆಯೋಜಿಸಿದ್ದ ‘ನಮ್ಮ ದೇಶ-ನಮ್ಮ ಸಂಸ್ಕೃತಿ’ ಕಾರ್ಯಕ್ರಮದಲ್ಲಿ ತಿಳಿಸಿದರು.
೧೦ ದಿನಗಳ ಕಾಲ ಓಣಂ ಆಚರಿಸಲಾಗುತ್ತದೆ. ಮನೆಗಳಲ್ಲಿ ಪೂಕಳಂ ಎಂಬ ಹೂವಿನ ರಂಗೋಲಿ ಬಿಡಿಸಿ ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುತ್ತೇವೆ. ೧೦ ನೇ ದಿನ ಮನೆ ಜನರು ಎಲ್ಲರೂ ಸೇರಿ, ಪ್ರಾರ್ಥಿಸಿ, ಸಹಭೋಜನದ ಮೂಲಕ ಓಣಂ ಆಚರಿಸಲಾಗುತ್ತದೆ. ಪ್ರಜೆಗಳನ್ನು ರಕ್ಷಿಸುತ್ತಿದ್ದ ರಾಜನ ಜ್ಞಾಪಕಾರ್ಥ ನಡೆಸುವ ವಿಶೇಷ ಆಚರಣೆ ಎಂದು ಮಲಯಾಳಿ ಸಮುದಾಯದ ಹಿರಿಯರು *ಗೋಣಿಕೊಪ್ಪ: ಪ್ರಜೆಗಳ ರಕ್ಷಕನಾಗಿದ್ದ ಮಹಾಬಲಿ ಚಕ್ರವರ್ತಿಯನ್ನು ಮನೆ, ಮನೆಗಳಲ್ಲಿ ನೆನೆಯುವ ಹಬ್ಬವೇ ಓಣಂ ಎಂದು ಮಲಯಾಳಿ ಸಮಾಜದ ಪ್ರಮುಖರು ಆಚರಣೆ ಮಾಹಿತಿ ಹಂಚಿಕೊAಡರು.
ಓಣಂ ಪ್ರಯುಕ್ತ ಗುರುವಾರ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ಪೊನ್ನಂಪೇಟೆ ಪಳ್ಳಿಯತ್ ಮಡಪುರ ಮುತ್ತಪ್ಪ ದೇವಸ್ಥಾನದಲ್ಲಿ ಆಯೋಜಿಸಿದ್ದ ‘ನಮ್ಮ ದೇಶ-ನಮ್ಮ ಸಂಸ್ಕೃತಿ’ ಕಾರ್ಯಕ್ರಮದಲ್ಲಿ ತಿಳಿಸಿದರು.
೧೦ ದಿನಗಳ ಕಾಲ ಓಣಂ ಆಚರಿಸಲಾಗುತ್ತದೆ. ಮನೆಗಳಲ್ಲಿ ಪೂಕಳಂ ಎಂಬ ಹೂವಿನ ರಂಗೋಲಿ ಬಿಡಿಸಿ ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುತ್ತೇವೆ. ೧೦ ನೇ ದಿನ ಮನೆ ಜನರು ಎಲ್ಲರೂ ಸೇರಿ, ಪ್ರಾರ್ಥಿಸಿ, ಸಹಭೋಜನದ ಮೂಲಕ ಓಣಂ ಆಚರಿಸಲಾಗುತ್ತದೆ. ಪ್ರಜೆಗಳನ್ನು ರಕ್ಷಿಸುತ್ತಿದ್ದ ರಾಜನ ಜ್ಞಾಪಕಾರ್ಥ ನಡೆಸುವ ವಿಶೇಷ ಆಚರಣೆ ಎಂದು ಮಲಯಾಳಿ ಸಮುದಾಯದ ಹಿರಿಯರು ಮಲಯಾಳಿ ಸಮುದಾಯ ಬಾಂಧವರು ಓಣಂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಹಬ್ಬದ ಅಂಗವಾಗಿ ಮನೆಯ ಮುಂಭಾಗ ಹೂವುಗಳಿಂದ ಪೂಕಳಂ ರಚಿಸಿ ಮನೆ ಮಂದಿ ಸಂತಸಪಟ್ಟರು. ವಿಶೇಷ ಖಾದ್ಯಗಳನ್ನು ತಯಾರಿಸಿ ಅಕ್ಕಪಕ್ಕದವರೊಂದಿಗೆ ಸೇರಿ ಸವಿದು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮುಳ್ಳೂರು:ಶನಿವಾರಸಂತೆ ವ್ಯಾಪ್ತಿಯಲ್ಲಿರುವ ಮಲೆಯಾಳಿ ಬಾಂಧವರು ಸಡಗರ ಸಂಭ್ರಮದಿAದ ತಿರು ಓಣಂ ಆಚರಿಸಿದರು. ಶನಿವಾರಸಂತೆ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಗೋಪಾಲಪುರ, ಒಡೆಯನಪುರ, ಮುಳ್ಳೂರು, ಜಾಗೇನಹಳ್ಳಿ, ನಿಡ್ತ, ಮಾಲಂಬಿ, ಕಣಿವೆಬಸವನಹಳ್ಳಿ, ಆಲೂರು ಸಿದ್ದಾಪುರ, ಹೊಸಗುತ್ತಿ ಮುಂತಾದ ಗ್ರಾಮಗಳಲ್ಲಿ ಹಬ್ಬ ಸಂಭ್ರಮದಿAದ ನಡೆಯಿತು. ಓಣಂ ಹಬ್ಬದ ಅಂಗವಾಗಿ ಮಲಯಾಳಿ ಬಾಂಧವರು ತಮ್ಮ ಮನೆಯ ಅಂಗಳದಲ್ಲಿ ಬಣ್ಬ ಬಣ್ಣದ ಹೂವಿನ ಎಸಳುನಿಂದ ರಂಗೋಲಿ ಹಾಕಿದ್ದರು. ಓಣಂ ಹಬ್ಬದ ದಿನ ಮಲಯಾಳಿ ಬಾಂಧವರ ಮನೆಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು. ತದನಂತರ ಮನೆಯಲ್ಲಿ ಬಗೆಬಗೆಯ ಸಿಹಿ ಅಡುಗೆ ಮಾಡಿ ಮನೆ ಮಂದಿಯಲ್ಲದೆ ಅಕ್ಕಪಕ್ಕದವರನ್ನು ಕರೆದು ಸಿಹಿ ಬೋಜನ ಸವಿಯುತ್ತಾರೆ.