ಸೋಮವಾರಪೇಟೆ, ಸೆ. ೪: ಮೂರು ತಿಂಗಳಿಗೊಮ್ಮೆ ನಿಯಮಿತ ವಾಗಿ ರಕ್ತದಾನ ಮಾಡಿದರೆ ಆರೋಗ್ಯ ವೃದ್ಧಿಸುತ್ತದೆ ಎಂದು ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತನಿಧಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಕರುಂಬಯ್ಯ ಹೇಳಿದರು.

ಗೌಡಳ್ಳಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗೌಡಳ್ಳಿ ನವದುರ್ಗಾ ಪರಮೇಶ್ವರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರಕ್ತದಾನದಿಂದ ಅನೇಕ ಪ್ರಯೋಜನ ಗಳಿವೆ. ಇನ್ನೊಂದು ಜೀವವನ್ನು ಉಳಿಸ ಬಹುದು ಹಾಗೂ ರಕ್ತದಾನಿಗಳಲ್ಲಿ ಹೊಸ ರಕ್ತ ಉತ್ಪತ್ತಿಯಾಗುವುದರಿಂದ ಅನೇಕ ರೋಗಗಳಿಂದ ಮುಕ್ತರಾಗಬಹುದು ಎಂದರು. ಇತ್ತೀಚಿನ ವರ್ಷಗಳಲ್ಲಿ ಸ್ವಯಂ ರಕ್ತದಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಒಂದಷ್ಟು ಮೂಢನಂಬಿಕೆಯಿAದ ರಕ್ತದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿವೆ. ಈ ಬಗ್ಗೆ ಜನಜಾಗೃತಿ ಮೂಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಜಿ. ಮಲ್ಲಿಕಾ, ಉಪಾಧ್ಯಕ್ಷ ಜಿ.ಜಿ. ಗಣೇಶ್, ಗೌಡಳ್ಳಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಇಂದೂಧರ್, ಪಂಚಾಯಿತಿ ಸದಸ್ಯರಾದ ನವೀನ್ ಅಜ್ಜಳ್ಳಿ, ಜಿ.ಎಸ್. ನಾಗರಾಜ್, ಕೆ.ಎಂ. ರೋಹಿಣಿ, ಕೆ.ಡಿ. ವಿಶಾಲಾಕ್ಷಿ, ಬಿ.ಹೆಚ್. ಮಂಜುನಾಥ್, ಸಿ.ಈ. ವೆಂಕಟೇಶ್, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಜಿ.ಪಿ. ಸುನಿಲ್, ಆರೋಗ್ಯ ಇಲಾಖೆಯ ಮಹೇಶ್, ಪಾರ್ವತಿ, ಧರಣೇಶ್ ಉಪಸ್ಥಿತರಿದ್ದರು.