ನೀರಿನ ಸಮಸ್ಯೆ ಬಗೆಹರಿಸಲು ಅವಕಾಶವಿದೆ: ಗಡ್ಕರಿ
ಬೆಂಗಳೂರು, ಸೆ. ೮: ದೇಶದ ಹಲವು ಪ್ರದೇಶಗಳಲ್ಲಿ ತಲೆದೋರುವ ನೀರಿನ ಸಮಸ್ಯೆಗಳನ್ನು ತಮ್ಮ ಸಚಿವಾಲಯ ಬಗೆಹರಿಸಬಹುದು ಎಂದು ಕೇಂದ್ರ ರಸ್ತೆ, ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರ ಸರ್ಕಾರ ‘ಅಮೃತ್ ಸರೋವರ್’ ಯೋಜನೆಯನ್ನು ಜಾರಿಗೆ ತಂದಿದೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ನೀರಿನ ಸಮಸ್ಯೆಗಳಿಗೆ ಸಂಬAಧಿಸಿದAತೆ ಅದ್ಭುತವಾದ ಕೆಲಸಗಳನ್ನು ಮಾಡಬಹುದು ಎಂದು ಸಚಿವ ಗಡ್ಕರಿ ಭಾರತ್ ಮಾಲಾ ಸರಣಿಯಡಿಯಲ್ಲಿ ನಗರದಲ್ಲಿ ನಡೆದ ಮಂಥನ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ರಾಷ್ಟಿçÃಯ ಪಂಚಾಯತ್ ರಾಜ್ ದಿನವನ್ನು ಏ. ೨೪, ೨೦೨೨ ರಂದು ಮಿಷನ್ ಅಮೃತ್ ಸರೋವರ ಕಾರ್ಯಕ್ರಮವನ್ನು ಉದ್ಘಾಟಿಸಲಾಗಿತ್ತು. ಇದು ಭವಿಷ್ಯಕ್ಕೆ ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಅಭಿಯಾನದ ಭಾಗವಾಗಿತ್ತು. ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಆರಂಭಗೊAಡಿರುವ ಈ ಯೋಜನೆಯಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ೭೫ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿದೆ. ಹಲವು ವರ್ಷಗಳಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ವಿದರ್ಭ ಪ್ರದೇಶದಿಂದ ತಾವು ಬಂದಿರುವುದಾಗಿ ಹೇಳಿದ್ದು, ರೈತರ ಆತ್ಮಹತ್ಯೆಗೆ ನೀರಿನ ಸಮಸ್ಯೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಹಲವು ಪ್ರದೇಶಗಳಲ್ಲಿ ನೀರಿನ ಬಿಕ್ಕಟ್ಟು ಇದೆ. ನೀರಿಗೆ ಅಭಾವವಿಲ್ಲ. ಆದರೆ ನೀರಿನ ನಿರ್ವಹಣೆ ಸಮಸ್ಯೆಯಾಗಿದೆ. ಹೆದ್ದಾರಿಗಳ ನಿರ್ಮಾಣಕ್ಕೆ ಎಷ್ಟು ಮಣ್ಣು ಬೇಕಾಗುತ್ತದೆ ಎಂದರೆ, ಮಣ್ಣನ್ನು ಪಡೆಯುವ ರೀತಿ ಆ ಸ್ಥಳಗಳಲ್ಲಿ ಹೊಸ ಹೊಸ ಜಲಮೂಲಗಳನ್ನು ಸೃಷ್ಟಿಸಬಹುದು, ಇದರಿಂದಾಗಿ ರಸ್ತೆಗಳ ನಿರ್ಮಾಣದ ಅಗತ್ಯತೆ ಪೂರ್ಣಗೊಳ್ಳುವುದಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲಿ ಹೊಸ ಜಲಮೂಲಗಳು(ಕೆರೆ)ಗಳನ್ನೂ ಸೃಷ್ಟಿಸಿ ಕ್ರಮೇಣ ಅಂತರ್ಜಲ ಪ್ರಮಾಣ ಹೆಚ್ಚಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಉದಾಹರಣೆಯನ್ನೂ ಗಡ್ಕರಿ ನೀಡಿದ್ದು, ಇದೇ ಮಾದರಿಯ ಕಾರ್ಯನಿರ್ವಹಣೆಯಿಂದ ವಿವಿಯಲ್ಲಿ ೩೬ ಕೆರೆಗಳು ಹಾಗೂ ಹತ್ತಿರದ ಗ್ರಾಮಗಳಲ್ಲಿ ೨೨ ಬಾವಿಗಳು ಎನ್‌ಹೆಚ್‌ಎಐ ಯೋಜನೆ ಜಾರಿಯಿಂದ ಲಭ್ಯವಾಗಿದೆ ಎಂದು ಹೇಳಿದ್ದು, ಈ ರೀತಿಯ ನವೀನ ಕ್ರಮಗಳು ಯೋಜನೆಯ ವೆಚ್ಚವನ್ನು ಕಡಿಮೆಗೊಳಿಸುವುದಷ್ಟೇ ಅಲ್ಲದೇ ಇತರರಿಗೂ ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕೆ ೧೩೨ನೇ ಸ್ಥಾನ
ನವದೆಹಲಿ, ಸೆ. ೮: ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ೨೦೨೧ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ೧೯೧ ರಾಷ್ಟçಗಳ ಪೈಕಿ ಭಾರತ ೧೩೨ನೇ ಸ್ಥಾನ ಪಡೆದುಕೊಂಡಿದೆ. ೨೦೨೦ರಲ್ಲಿ ಭಾರತ ೧೮೯ ರಾಷ್ಟçಗಳ ಪೈಕಿ ೧೩೧ನೇ ಸ್ಥಾನ ಪಡೆದಿತ್ತು. ೨೦೨೦ ರ ವರದಿಯಲ್ಲಿ ಭಾರತದ ಮೌಲ್ಯ ೦.೬೪೫ರಷ್ಟಿತ್ತು. ಜಾಗತಿಕ ಪ್ರವೃತ್ತಿಗಳಂತೆಯೇ, ಭಾರತದ ವಿಷಯದಲ್ಲಿ ೨೦೧೯ ರಲ್ಲಿ ೦.೬೪೫ ಇದ್ದ ಹೆಚ್‌ಡಿಐ ಮೌಲ್ಯ ೨೦೨೧ ರಲ್ಲಿ ೦.೬೩೩ ರಷ್ಟಿದ್ದು, ಜೀವಿತಾವಧಿ ನಿರೀಕ್ಷೆ ೬೯.೭ ರಿಂದ ೬೭.೨ ಕ್ಕೆ ಕುಸಿಯಲು ಕಾರಣವಾಗಿದೆ. ಮಾನವ ಅಭಿವೃದ್ಧಿಯನ್ನು ಒಂದು ರಾಷ್ಟçದ ಆರೋಗ್ಯ, ಶಿಕ್ಷಣ ಮತ್ತು ಸರಾಸರಿ ಆದಾಯದ ಮೇಲೆ ಅಳೆಯಲಾಗುತ್ತದೆ. ಕೊರೊನಾ ಐದು ವರ್ಷಗಳ ಪ್ರಗತಿಯನ್ನು ಕುಂಠಿತಗೊಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶ್ವದಾದ್ಯಂತ ಮಾನವ ಅಭಿವೃದ್ಧಿಯು ೩೨ ವರ್ಷಗಳಲ್ಲಿ ಮೊದಲ ಬಾರಿಗೆ ಸ್ಥಗಿತಗೊಂಡಿದೆ ಎಂದು ವರದಿಯಲ್ಲಿ ತೋರಿಸಲಾಗಿದೆ. ೨೦೧೯ ರಲ್ಲಿ ೭೨.೮ ವರ್ಷಗಳಿದ್ದ ಜೀವಿತಾವಧಿ ೨೦೨೧ ರಲ್ಲಿ ೭೧.೪ ವರ್ಷಗಳಿಗೆ ಕಡಿತಗೊಂಡಿದೆ. ವಿಶ್ವ ಒಂದರ ಹಿಂದೊAದರAತೆ ಬಿಕ್ಕಟ್ಟುಗಳಿಗೆ ಈಡಾಗುತ್ತಿದ್ದು, ಜೀವನ ವೆಚ್ಚ ಮತ್ತು ಇಂಧನ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂದು ಯುಎನ್‌ಡಿಪಿಯ ನಿರ್ವಾಹಕರಾದ ಅಚಿಮ್ ಸ್ಪೆöÊನರ್ ಹೇಳಿದ್ದಾರೆ. ಮಾನವ ಅಭಿವೃದ್ಧಿಯಲ್ಲಿ ಭಾರತದ ಕುಸಿತವು ಬಿಕ್ಕಟ್ಟುಗಳಿಂದ ಪ್ರಭಾವಿತವಾಗಿದೆ. ಆದರೆ ೨೦೧೯ ಕ್ಕೆ ಹೋಲಿಸಿದರೆ, ಮಾನವ ಅಭಿವೃದ್ಧಿಯ ಮೇಲಿನ ಅಸಮಾನತೆಯ ಪ್ರಭಾವ ಕಡಿಮೆಯಾಗಿದೆ ಎಂದು ಭಾರತದಲ್ಲಿನ ಯುಎನ್‌ಡಿಪಿ ಪ್ರತಿನಿಧಿ ಶೊಕೊ ನೊಡಾ ಹೇಳಿದ್ದಾರೆ. ಬಾಂಗ್ಲಾದೇಶ, ಭೂತಾನ್ ನಂತರ ದಕ್ಷಿಣ ಏಷ್ಯಾದ ರಾಷ್ಟçಗಳ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿಯಾಗಿರುವುದಾಗಿ ವರದಿ ಹೇಳಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ
ಬೆಂಗಳೂರು, ಸೆ. ೮: ಬೆಂಗಳೂರು ನಗರದ ಸಂಚಾರ ದಟ್ಟಣೆಯ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚಿಸಲು ತೀರ್ಮಾನಿಸಲಾಗಿದ್ದು, ಮುಂದಿನ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿ, ಕಾಯ್ದೆ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಕೇಂದ್ರದ ಭೂ ಸಂಪರ್ಕ ಮತ್ತು ಹೆದ್ದಾರಿಗಳ ಸಚಿರ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ, ಬಿಬಿಎಂಪಿ, ಬಿಡಿಎ, ಬಿಎಂಆರ್‌ಡಿಎ, ಲೋಕೋಪಯೋಗಿ ಇಲಾಖೆಗಳಿಂದ ಹಲವು ಕಾಮಗಾರಿಗಳು ನಡೆಯುತ್ತಿರುತ್ತವೆ. ಈ ಬಗ್ಗೆ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಿದರೆ ಬಹಳಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಎಲ್ಲ ಸಂಸ್ಥೆಗಳ ಜೊತೆಗೆ ರೈಲ್ವೆ, ಮಟ್ರೋವನ್ನು ಒಳಗೊಂಡAತೆ ಬೆಂಗಳೂರು ಮತ್ತು ಬೆಂಗಳೂರು ಸುತ್ತಮುತ್ತಲಿನ ಸಂಚಾರ ದಟ್ಟಣೆಯ ನಿರ್ವಹಣೆಗೆ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಇಡೀ ರಾಷ್ಟçದ ರಸ್ತೆ ಸಾರಿಗೆ ವ್ಯವಸ್ಥೆ ಬಗ್ಗೆ ‘ಮಂಥನ’ ಸಮಾವೇಶ ೩ ದಿನಗಳ ಕಾಲ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ರಸ್ತೆ ಹಾಗೂ ಸಂಚಾರದಟ್ಟಣೆಯ ಬಗ್ಗೆ ಕೇಂದ್ರ ಸಚಿವರೊಂದಿಗೆ ಸಭೆ ನಡೆಸಲಾಗಿದ್ದು, ಕೇಂದ್ರದ ಸಹಯೋಗ ಮತ್ತು ಸಹಕಾರವನ್ನು ಕೋರಲಾಗಿದೆ.