ಚೆಯ್ಯಂಡಾಣೆ, ಸೆ ೭. ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಖತ್ತರ್ ರಾಷ್ಟಿçÃಯ ಸಮಿತಿಯ ಮಹಾಸಭೆ ರಯ್ಯಾನ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ಬಾಸ್ ಸಖಾಫಿ ಬಲಮುರಿ ವಹಿಸಿದ್ದರು. ಉದ್ಘಾಟನೆಯನ್ನು ಯೂಸುಫ್ ಸಖಾಫಿ ಅಯ್ಯಂಗೇರಿ ನೆರವೇರಿಸಿದರು.
ಹಾಫಿಝ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು ಹೊಸ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ವಹಿಸಿ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸಮಾಜದ ನೊಂದವರ ಕಣ್ಣೋರೆಸುವ ಅಗತ್ಯತೆಯ ಕುರಿತು ವಿವರಿಸಿ ಬಳಿಕ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು.
ನೂತನ ಪದಾಧಿಕಾರಿಗಳು : ಸಲಹಾ ಸಮಿತಿ ಚೆರ್ಮಾನ್ ಹಾಫಿಝ್ ಉಮರುಲ್ ಫಾರೂಖ್ ಸಖಾಫಿ, ಅಧ್ಯಕ್ಷರಾಗಿ ಯುಸುಫ್ ಸಖಾಫಿ ಅಯ್ಯಂಗೇರಿ, ಉಪಾಧ್ಯಕ್ಷರಾಗಿ ಜಾಬಿರ್ ಪಡಿಯಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ತಾವೂರು, ಕಾರ್ಯದರ್ಶಿಯಾಗಿ ಅಝರ್ ಕೊಂಡAಗೇರಿ, ಕೋಶಾಧಿಕಾರಿಯಾಗಿ ಯಹ್ಯಾ ಸಅದಿ ಕಡಂಗ, ಶಿಕ್ಷಣ ವಿಭಾಗ ಅಧ್ಯಕ್ಷರಾಗಿ ಅಬ್ಬಾಸ್ ಸಖಾಫಿ ಬಲಮುರಿ, ಕೋರ್ಡಿನೇಟರ್ ನಝೀರ್ ಮೂರ್ನಾಡು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಲಿ, ಹಾರಿಸ್ ಎಡಪಾಲ, ಅಝೀಝ್ ಹುಂಡಿ, ಸಿದ್ದೀಕ್ ಪಡಿಯಾಣಿ, ಉಬೈಸ್ ಕಡಂಗ ಅವರನ್ನು ಆಯ್ಕೆ ಮಾಡಲಾಯಿತು.