ಮಡಿಕೇರಿ, ಸೆ. ೭: ‘ಫೆಡರೇಷನ್ ಆಫ್ ಇಂಡಿಯನ್ ಎಕ್ಸ್ಪೋರ್ಟ್ ಆರ್ಗನೈಸೇಶನ್’ (ಈIಇಔ) ವತಿಯಿಂದ ಕೇಂದ್ರ ವಾಣಿಜ್ಯ ಮಂತ್ರಾಲಯದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ, ಜಿಲ್ಲಾ ಕೃಷಿ ಇಲಾಖೆ ಹಾಗೂ ಕೈಗಾರಿಕಾ ಕೇಂದ್ರ, ಕಾಫಿ, ಸಂಬಾರ ಮಂಡಳಿಗಳ ಸಹಭಾಗಿತ್ವದಲ್ಲಿ ನಗರದ ಮಯೂರ ವ್ಯಾಲಿ ವ್ಯೂ ನಲ್ಲಿ ಕಾಫಿ ಹಾಗೂ ಸಂಬಾರ ಬೆಳೆಗಳ ಕುರಿತು ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಜಿಲ್ಲೆಯಲ್ಲಿ ಕಾಫಿ ಮತ್ತು ಸಂಬಾರ ಬೆಳೆಗಳ ರಫ್ತಿನಲ್ಲಿರುವ ಸಮಸ್ಯೆಗಳು ಹಾಗೂ ರಫ್ತಿನ ಅವಕಾಶಗಳನ್ನು ಬಲವರ್ಧಿಸುವ ಕುರಿತು ತಜ್ಞರಿಂದ ಮಾಹಿತಿ ನೀಡಲಾಯಿತು.
ಏಂPPಇಅ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್ ಬಂಥನಾಳ್ ಅವರು ಮಾತನಾಡಿ ‘ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ ಯೋಜನೆ (Pಒಈಒಇ) ಬಗ್ಗೆ ಮಾಹಿತಿ ನೀಡಿದರು. ಈ ಯೋಜನೆಯಡಿಯಲ್ಲಿ ಮನೆಯಿಂದಲೇ ಉದ್ದಿಮೆದಾರರು ವಿವಿಧ ಕಿರು ಆಹಾರಗಳ ಸಂಸ್ಕರಣೆಗಳನ್ನು ಮಾಡಿ ಸುಲಭವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಅವರು ಸವಿಸ್ತಾರವಾಗಿ ಮಾಹಿತಿ ಇತ್ತರು. ಹೊಸ ಉದ್ದಿಮೆಯಾಗಲಿ ಅಥವಾ ಈಗಾಗಲೇ ಇರುವ ಉದ್ದಿಮೆಗಳನ್ನು ವಿಸ್ತರಣೆ ಮಾಡುವ ಸಲುವಾಗಿ ಈ ಯೋಜನೆಯಡಿಯಲ್ಲಿ ಸಬ್ಸಿಡಿ ಆಧಾರದಲ್ಲಿ ದೊರಕುವ ಸಾಲ ಸೌಲಭ್ಯಗಳ ಕುರಿತು ವಿವರಿಸಿದರು. ಉದ್ದಿಮೆದಾರರು ತಯಾರಿಸುವ ಕಿರು ಆಹಾರ ಉತ್ಪನ್ನಗಳು ಸಂಸ್ಕರಣೆಗೊAಡಿದ್ದರೆ ಮಾತ್ರ ಈ ಯೋಜನೆ ಅಡಿಯಲ್ಲಿನ ಸೌಲಭ್ಯಗಳನ್ನು ಬಳಸಬಹುದಾಗಿದೆ ಎಂದು ಹೇಳಿದರು. ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ hಣಣಠಿs://ಠಿmಜಿme.moಜಿಠಿi.gov.iಟಿ/ ವೆಬ್ಸೈಟ್ ವೀಕ್ಷಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ (ಆಉಈಖಿ) ಡೈರೆಕ್ಟರೇಟ್ ಜನರಲ್ ಆಫ್
(ಮೊದಲ ಪುಟದಿಂದ) ಫಾರಿನ್ ಟ್ರೇಡ್ನ ಪ್ರಮುಖರಾದ ಲೋಕೇಶ್ ಹೆಚ್.ಡಿ ಅವರು ಆಮದು-ರಫ್ತು ನೀತಿಯ ಬಗ್ಗೆ ಪಿ.ಪಿ.ಟಿ ಮೂಲಕ ಸವಿಸ್ತಾರವಾದ ಮಾಹಿತಿ ಇತ್ತರು.
ಕೊಡಗು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನ ಶೇಖ್ ಅವರು ಮಾತನಾಡಿ ಕೊಡಗು ಜಿಲ್ಲೆಯು ಕಾಫಿ, ಕೃಷಿ, ಸಂಬಾರ ಬೆಳೆಗಳನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿದ್ದು, ಕೇಂದ್ರ ಸರಕಾರದ ಸಹಯೋಗದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮ ಕೊಡಗಿನಲ್ಲಿ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಕೈಗಾರಿಕಾ ಕ್ಷೇತ್ರದ ಜಂಟಿ ನಿರ್ದೇಶಕ ಟಿ. ದಿನೇಶ್ ಅವರು ಕರ್ನಾಟಕ ಸರಕಾರದ ಕೈಗಾರಿಕಾ ನೀತಿ ೨೦೨೦-೨೦೨೫ರ ಕುರಿತು ಮಾಹಿತಿ ಇತ್ತರು.
ಕಾಫಿ ಮಂಡಳಿ ಬೆಂಗಳೂರಿನ ಉಪ ನಿರ್ದೇಶಕ ಬಾಬು ರೆಡ್ಡಿ ಡಿ.ಆರ್ ಅವರು ಕಾಫಿಯಲ್ಲಿನ ರಫ್ತಿನ ಅವಕಾಶಗಳು ಹಾಗೂ ಜಿ.ಐ ಕಾಫಿ ಕುರಿತು ಮಾಹಿತಿ ನೀಡಿದರು. ಈIಇಔ ಉಪ ನಿರ್ದೇಶಕಿ ಡಾನಿಶ ಮಿನು ಹಾಗೂ ಕಿರಿಯ ಸಹಾಯಕಿ ಭಾಗ್ಯಲಕ್ಷಿö್ಮà ಅವರು ಅಂತರರಾಷ್ಟಿçÃಯ ವ್ಯಾಪಾರ ಹಾಗೂ ಮಾರುಕಟ್ಟೆಯಲ್ಲಿ ಈIಇಔ ಸಂಸ್ಥೆಯ ಪಾತ್ರದ ಕುರಿತು ಮಾಹಿತಿ ನೀಡಿದರು. ಸಂಬಾರ ಮಂಡಳಿಯ ಹಿರಿಯ ಕ್ಷೇತ್ರಾಧಿಕಾರಿಗಳು ಸಂಬಾರ ಮಂಡಳಿಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಇತ್ತರು. ಬ್ಯಾಂಕ್ ಆಫ್ ಬರೋಡಾದ ಹಿರಿಯ ವ್ಯವಸ್ಥಾಪಕ ಅಭಿಷೇಕ್ ಕಟೋಚ್ ಸಣ್ಣ ಹಾಗೂ ಅತಿ ಸಣ್ಣ ಉದ್ಯಮಿಗಳಿಗೆ ಲಭ್ಯವಿರುವ ಬ್ಯಾಂಕಿAಗ್ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರು. ಮಂಗಳೂರಿನ ಇಅಉಅ ಐಣಜ ಕಾರ್ಯ ನಿರ್ವಹಣಾಧಿಕಾರಿ ನಂದಕುಮಾರ್ ಅಂಬಟಿ ಅವರು ಕ್ರೆಡಿಟ್ ರಿಸ್ಕ್ ಮ್ಯಾನೇಜ್ಮೆಂಟ್ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ರೈತರು, ರೈತ ಉತ್ಪಾದಕ ಸಂಸ್ಥೆಯ ಪ್ರತಿನಿಧಿಗಳು, ಉದ್ದಿಮೆದಾರರು ಹಾಗೂ ರಫ್ತುದಾರರು ಭಾಗವಹಿಸಿದ್ದರು.