ಸಿದ್ದಾಪುರ, ಸೆ. ೭: ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅರೆಕಾಡು ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೋರ್ವ ಒತ್ತುವರಿ ಮಾಡಿದ್ದ ೫೦ ಸೆಂಟ್ ಸರಕಾರಿ ಜಾಗವನ್ನು ವಶಪಡಿಸಿಕೊಂಡ ಜಿಲ್ಲಾಡಳಿತ ಅರೆಕಾಡು ಗ್ರಾಮಕ್ಕೆ ಸ್ಮಶಾನದ ಉದ್ದೇಶಕ್ಕೆ ನೀಡಿದೆ.
ಸುಮಾರು ೩೦ ವರ್ಷಗಳಿಂದ ಅರೆಕಾಡು ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಇಲ್ಲದೆ, ಗ್ರಾಮಸ್ಥರು ನದಿ ದಡದಲ್ಲಿ ಶವ ಸಂಸ್ಕಾರ ನೆರವೇರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ಮಶಾನಕ್ಕಾಗಿ ಜಾಗ ಒದಗಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರು. ಸ್ಥಳೀಯ ಗ್ರಾಮಸ್ಥರ ಸತತ ಪರಿಶ್ರಮದ ಫಲವಾಗಿ ಇದೀಗ ಜಿಲ್ಲಾಡಳಿತ ಒತ್ತುವರಿಯಾಗಿದ್ದ ಜಾಗವನ್ನು ವಶಪಡಿಸಿ ಸಾರ್ವಜನಿಕ ಸ್ಮಶಾನ ನಿರ್ಮಿಸಲು ಗ್ರಾಮ ಪಂಚಾಯಿತಿಗೆ ವಹಿಸಿದೆ.
ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸ ಮಾಡುತ್ತಿರುವುದರಿಂದ ಸ್ಥಳೀಯ ವ್ಯಕ್ತಿಗಳು ಮೃತಪಟ್ಟಿದ್ದಲ್ಲಿ ಐದಾರು ಕಿ.ಮೀ. ದೂರದ ಕಾವೇರಿ ನದಿ ದಡದಲ್ಲಿ ಶವ ಸಂಸ್ಕಾರ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಈ ನಡುವೆ ಕಾವೇರಿ ನದಿ ದಡದಲ್ಲಿ ಶವ ಸಂಸ್ಕಾರ ನಿಷೇಧದ ಕುರಿತು ಆದೇಶ ಹೊರಡಿಸಿರುವುದು ವ್ಯಾಪ್ತಿಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಜಾಗ ದೊರಕಿರುವುದು ನಿವಾಸಿಗಳಲ್ಲಿ ಸಂತಸ ತಂದಿದೆ.ಜಿಲ್ಲಾಧಿಕಾರಿಗಳ ಮಾರ್ಗದರ್ಶನ ದಲ್ಲಿ ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ಹಾಗೂ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಒತ್ತುವರಿ ಜಾಗದ ತೆರವು ಕಾರ್ಯ ಪ್ರಾರಂಭಗೊAಡಿತು.
ಹೊಸ್ಕೇರಿ ಗ್ರಾ.ಪಂ. ಅಧ್ಯಕ್ಷ ಪ್ರಭು ಶೇಖರ್, ಸ್ಮಶಾನಕ್ಕಾಗಿ ಒತ್ತಾಯಿಸಿ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಶಾಸಕರುಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಇದೀಗ ಸ್ಥಳೀಯರ ಸಹಕಾರದೊಂದಿಗೆ ೫೦ ಸೆಂಟ್ ಜಾಗ ಸ್ಮಶಾನಕ್ಕಾಗಿ ದೊರಕಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯ ವಿವಿಧ ಯೋಜನೆಗಳಡಿಯಲ್ಲಿ ಸ್ಮಶಾನಕ್ಕೆ ಬೇಕಾಗಿರುವ ಅವಶ್ಯಕ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ವೈ. ರಘು ಆನಂದ, ಮಾಜಿ ಸದಸ್ಯ ಅಪ್ರು ರವೀಂದ್ರ, ಗ್ರಾ.ಪಂ. ಉಪಾಧ್ಯಕ್ಷೆ ಪದ್ಮಾವತಿ, ಗ್ರಾ.ಪಂ. ಪಿಡಿಓ ಅಂಜನ್ ಮೂರ್ತಿ, ಗ್ರಾಮ ಲೆಕ್ಕಿಗ ರಂಜನ್, ಸದಸ್ಯರುಗಳಾದ ಚಿದಂಬರA, ಯೂಸುಫ್, ಜನಾರ್ದನ, ಉಷಾ ತಂಗಮ್ಮ, ಕವಿತಾ ಬೆಳ್ಯಪ್ಪ, ಮಮತಾ, ಪಾರ್ವತಿ ಇನ್ನಿತರರು ಹಾಜರಿದ್ದರು.