ವೀರಾಜಪೇಟೆ, ಸೆ. ೭: ಸಂಸಾರದಲ್ಲಿ ಆಂತರಿಕ ಕಲಹದಿಂದ ಪತ್ನಿ ಮತ್ತು ಮಕ್ಕಳು ಮನೆ ತೊರೆದಿರುವುದರಿಂದ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ವೀರಾಜಪೇಟೆ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ.

ವೀರಾಜಪೇಟೆ ಆರ್ಜಿ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ನಿವಾಸಿ ದಿ. ದಾಮೋದರನ್ ಎಂಬುವರ ಪುತ್ರ ಎಂ.ಡಿ. ವಿಷ್ಣು (೪೦) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.