ಮಡಿಕೇರಿ, ಸೆ. ೭: ತಾ. ೯ ರಂದು ವೀರಾಜಪೇಟೆಯಲ್ಲಿ ಜರುಗುವ ಸಾರ್ವಜನಿಕ ಗಣೇಶೋತ್ಸವ ಹಾಗೂ ತಾ. ೨೬ ರಿಂದ ಅ. ೫ರ ವರೆಗೆ ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ಜರುಗಲಿರುವ ಸಾಂಪ್ರದಾಯಿಕ ನಾಡ ಹಬ್ಬ, ನವರಾತ್ರಿ ಉತ್ಸವಗಳಿಗೆ ಅನುಮತಿ ನೀಡುವಂತೆ ಶಾಸಕ ಕೆ.ಜಿ. ಬೋಪಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್, ಗೃಹ ಸಚಿವ ಆರಗ ಜ್ಞಾನೇಂದ್ರ ಅವರುಗಳಿಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದಾರೆ.

ನ್ಯಾಯಾಲಯದ ಆದೇಶದಂತೆ ರಾತ್ರಿ ೧೦ ಗಂಟೆ ಬಳಿಕ ಶಬ್ಧ ಮಾಲಿನ್ಯ ಮಾಡದಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಶಾಸಕರು, ಪರಿಸರ, ಶಬ್ಧ ಮಾಲಿನ್ಯ ನಿಯಂತ್ರಣ ನಿಯಮ ೧೯೮೬ ಮತ್ತು ನ್ಯಾಯಾಲಯ ೨೦೦೫ರ ತೀರ್ಪನ್ನು ಲಗತ್ತಿಸಿ ಪತ್ರ ಬರೆದಿದ್ದು, ಹಬ್ಬಾಚರಣೆಗೆ ಅನುಮತಿ ನೀಡಲು ಸಂಬAಧಿಸಿದವರಿಗೆ ಸೂಚನೆ ನೀಡುವಂತೆ ಸಚಿವರುಗಳಲ್ಲಿ ಕೋರಿದ್ದಾರೆ.