ವೀರಾಜಪೇಟೆ, ಸೆ. ೭: ಜಿ.ಪಂ, ತಾ.ಪಂ. ಹಾಗೂ ವಿಧಾನಸಭಾ ಚುನಾವಣೆಗೆ ಜಾತ್ಯತೀತ ಜನತಾ ದಳ ಪಕ್ಷ ಸಜ್ಜಾಗಿದ್ದು, ಯಾವುದೇ ಸಂದÀರ್ಭದಲ್ಲಿ ಚುನಾವಣೆ ಬಂದರೂ ಎದರಿಸಲು ಸಿದ್ಧರಿದ್ದೇವೆ ಎಂದು ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಪಿ.ಎ. ಮಂಜುನಾಥ್ ಹೇಳಿದರು.

ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿರುವ ಜನಪರ ಕೆಲಸಗಳಾದ ರೈತರ ಸಾಲಮನ್ನಾ, ಲಾಟರಿ ನಿಷೇಧ, ಸೇರಿ ದಂತೆ ಹಲವಾರು ಕಾರ್ಯಕ್ರಮಗಳನ್ನು ಜನತೆಗೆ ನೀಡಿರುವುದರಿಂದ ಜನಮಾನಸದಲ್ಲಿ ಇಂದಿಗೂ ಮನೆಮಾತಾಗಿದ್ದಾರೆ. ಜಿಲ್ಲೆಯಲಿ ಆದಂತಹ ಪ್ರಕೃತಿ ವಿಕೋಪ ಸಂದರ್ಭ ದಲ್ಲಿ ಮನೆ ಕಳೆದಕೊಂಡವರಿಗೆ ಮನೆ ಕಟ್ಟಿ ಕೊಟ್ಟಿರುವುದು, ಪೊನ್ನಂಪೇಟೆ, ಕುಶಾಲನಗರಗಳನ್ನು ತಾಲೂಕಾಗಿ ಘೋಷಣೆ ಮಾಡಿರುವುದು ಸೇರಿದಂತೆ ಆ ಸಂದÀರ್ಭದಲ್ಲಿ ಜನತೆಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಜನರ ಮನೆ ಮನೆಗೆ ತೆರಳಿ ಮನವರಿಕೆ ಮಾಡಿ ಕೊಡಲಾಗುವುದು. ಎರಡು ರಾಷ್ಟಿçÃಯ ಪಕ್ಷಗಳ ಆಮಿಷಕ್ಕೆ ಬಲಿಯಾಗದೇ ಪಕ್ಷ ಬಿಟ್ಟು ಹೋಗುವವರನ್ನು ಪಕ್ಷದಲ್ಲಿಯೇ ಇರುವಂತೆ ಮನವೊಲಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಸ್.ಎಚ್ ಮತೀನ್, ಪಕ್ಷದ ಮುಖಂಡ ವಿ.ಸಿ. ದೇವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಬಿ ಗಣೇಶ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಜಿಲ್ಲಾಧ್ಯಕ್ಷೆ ಹೆಚ್.ಬಿ. ಜಯಮ್ಮ, ಎಚ್‌ಎಸ್ ರಾಜೇಶ್, ಬಾಳೆಕುಟ್ಟಿರ ದಿನಿ, ಅಪ್ಪಂಡೇರAಡ ಸನ್ನು, ತಾಲೂಕು ಖಜಾಂಚಿ ಸತ್ಯ ಪಾಣತ್ತಲೆ, ಅಲ್ಪಸಂಖ್ಯಾತ ತಾಲೂಕು ಅಧ್ಯಕ್ಷ ಸೈಫುದ್ದಿನ್, ವೀರಾಜಪೇಟೆ ನಗರ ಅಧ್ಯಕ್ಷ ಯೊಗೇಶ್‌ನಾಯ್ಡು, ಸಾಮಾಜಿಕ ಜಾಲತಾಣದ ಅಧ್ಯಕ್ಷ ರಾಕೇಶ್, ಚಿಲ್ಲವಂಡ ಗಣಪತಿ ಸಂಶುದ್ದಿನ್ ಮತ್ತಿತರರು ಉಪಸ್ಥಿತರಿದ್ದರು.