ವೀರಾಜಪೇಟೆ, ಸೆ. ೫: ವಿದ್ಯಾದೇಗುಲಗಳು ವ್ಯಕ್ತಿಯನ್ನು ಸುಶಿಕ್ಷಿತರನ್ನಾಗಿ ರೂಪಿಸುವ ಮಂದಿರಗಳಾಗಿವೆ. ಮಂದಿರದಿAದ ಹೊರ ಬರುವ ಪ್ರತಿಯೊಬ್ಬರು ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ನಿವೃತ್ತ ವಾಯು ಸೇನಾಧಿಕಾರಿಗಳು ಮತ್ತು ತಾಲೂಕು ತಹಶೀಲ್ದಾರ್ ಡಾ. ಆರ್ಚನ ಭಟ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾವೇರಿ ವಿದ್ಯಾಸಂಸ್ಥೆಗಳು ಮತ್ತು ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಸಮಾಜವು ಬಯಸುವ ವಿಷಯಗಳನ್ನು ಗ್ರಹಿಸಿ ಸಮಾಜದ ಒಳಿತಿಗಾಗಿ ನಾವುಗಳು ಶ್ರಮಿಸುವಂತಾಗಬೇಕು. ವಿದ್ಯಾ ಮಂದಿರಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ಪಠ್ಯವಿಷಯ ಗಳೊಂದಿಗೆ ಪಠ್ಯೇತರ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಿದೆ. ಶಾಲಾ ಕಾಲೇಜುಗಳಲ್ಲಿ ಎನ್.ಸಿ.ಸಿ., ಎನ್.ಎಸ್.ಎಸ್ ಹೀಗೆ ವಿವಿಧ ಘಟಕಗಳು ಕಾರ್ಯನಿರ್ವಸುತಿವೆ. ಘಟಕಗಳು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳಾಗಿ ರೂಪಿತಗೊಳಿಸುತ್ತದೆ ಎಂದರು.
ಕಾವೇರಿ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕೆ.ಜಿ. ಉತ್ತಪ್ಪ ಅವರು ಮಾತನಾಡಿ, ಕಾಲೇಜು ವಿದ್ಯಾರ್ಥಿ ಗಳನ್ನು ಉತ್ತಮ ಪ್ರಜೆಗಳನ್ನಾಗಿಸಲು ಸರ್ವ ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತದೆ. ಕಲಿಕೆಯೋಂದಿಗೆ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಿದಲ್ಲಿ ಉನ್ನತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಕ್ತವಾಗುತ್ತದೆ ಎಂದರು.
ಕಾವೇರಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸಿ.ಕೆ. ಉಮೇಶ್ ಉತ್ತಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು ಶಿಕ್ಷಣದಲ್ಲಿ ಪ್ರತಿಯೊಂದು ವಿಷಯಕ್ಕೂ ಪುಸ್ತಕಗಳಿವೆ. ಆದರೆ, ಪುಸ್ತಕವೇ ಜೀವನ ಹಾದಿಯಲ್ಲ. ಬದಲಿಗೆ ಸಮಾಜದಲ್ಲಾಗುವ ಪ್ರತಿಯೊಂದು ಘಟನೆಗಳು ಜೀವನದ ಪಾಠ ಹೇಳುತ್ತವೆ. ಮೌಲ್ಯಾಧಾರಿತ ಶಿಕ್ಷಣ ಪಡೆದ ವಿದ್ಯಾರ್ಥಿಯು ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ.
ಯುವಕರು ರಾಷ್ಟçಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದರು. ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎನ್. ಶಂಕರ್ ನಾರಾಯಣ ಅವರು ಪ್ರಸ್ತುತ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪಿ.ಹೆಚ್.ಡಿ ಪದವಿ ಪಡೆದ ಕಾಲೇಜು ಉಪನ್ಯಾಸಕಿ ಡಾ. ಬೀನಾ ಮತ್ತು ಡಾ. ಕೆ.ಜಿ. ವೀಣಾ ಅವರುಗಳನ್ನು ಕಾಲೇಜು ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಾರ್ಷಿಕ ಪಠ್ಯೇತರ ಚಟುವಟಿಕೆಗಳು ಸೇರಿದಂತೆ, ಕ್ರಿಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾವೇರಿ ವಿದ್ಯಾಸಂಸ್ಥೆಯ ನಿರ್ದೇಶಕ ಐ.ಕೆ. ಬಿದ್ದಪ್ಪ, ಸುಬ್ರಮಣಿ ಕೆ.ಎಂ. ಖಜಾಂಚಿ ಮಾದಪ್ಪ ಸಿ.ಡಿ. ಉಪಧ್ಯಕ್ಷ ಎಂ.ಕೆ. ಮೊಣ್ಣಪ್ಪ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಣಯ್ಯ, ನಿವೃತ್ತ ಉಪನ್ಯಾಸಕಿ ಕಮಲಾಕ್ಷಿ, ಕಾಲೇಜಿನ ಉಪನ್ಯಾಸಕ ವೃಂದ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.