ಕುಶಾಲನಗರ, ಸೆ. ೫: ಹೆಸರಾಂತ ಬಣ್ಣ ತಯಾರಿಕ ಕಂಪೆನಿಯೊAದರ ರಾಯಭಾರಿಯಾಗಿರುವ ಹಿಂದಿ ಭಾಷಾ ನಟ ರಣಬೀರ್ ಕಪೂರ್ ಅವರು ಇತ್ತೀಚಿಗೆ ಹೇಳಿದ "ನಾನು ಗೋ ಮಾಂಸವನ್ನು ಪ್ರೀತಿಸುತ್ತೇನೆ ಹಾಗೂ ತಿನ್ನುತ್ತೇನೆ" ಎಂಬ ಹೇಳಿಕೆಯನ್ನು ವಿರೋಧಿಸಿ ಕುಶಾಲನಗರದ ಬಣ್ಣದಂಗಡಿಯ ಉದ್ಯಮಿಯೊಬ್ಬರು ಅವರ ಅಂಗಡಿ ಎದುರು ನಿಲ್ಲಿಸಿದ್ದ ಭಾವಚಿತ್ರಕ್ಕೆ ಮಸಿ ಬಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬನಿಗು ಆಹಾರದ ವಿಷಯದಲ್ಲಿ ವೈಯಕ್ತಿಕ ಸ್ವಾಂತAತ್ರö್ಯವಿದ್ದರೂ ಕೂಡ ರಣಬೀರ್ ಕಪೂರ್ ಓರ್ವ ಹಿಂದೂ ಆಗಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವುದು ದುರದೃಷ್ಟಕರ ಎಂದು ಉದ್ಯಮಿ ಬಿ.ಎನ್.ಶ್ರೀಧರ್ ಹೇಳಿದರು. ತನ್ನ ತಪ್ಪನ್ನು ಮನಗಂಡು ಅವರು ಈ ಕೂಡಲೇ ಬಹುಸಂಖ್ಯಾತರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಇದ್ದರು.