ಮಡಿಕೇರಿ, ಸೆ. ೫: ತಾ.೬ರಂದು (ಇಂದು) ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ ಗಂಟೆವರೆಗೆ ಗೋಣಿಕೊಪ್ಪದ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ

ರಕ್ತದಾನ ಮಾಡುವುದರಿಂದ ನಿಮ್ಮ ಆರೋಗ್ಯದ ಕ್ಷಮತೆಯು ಹೆಚ್ಚುವುದು. ೧೮ ರಿಂದ ೬೦ ವರ್ಷದವರೆಗಿನ ಪ್ರತಿಯೊಬ್ಬರು ರಕ್ತದಾನ ಮಾಡಲು ಅರ್ಹರು.

ರಕ್ತದಾನ ಮಾಡಲು ಬಯಸುವವರು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಜೆಸಿಐ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗೆ ೯೧೪೮೯೭೮೯೧೯, ೯೮೮೦೫೦೪೨೦೮, ೯೯೭೨೫೩೮೦೩೦ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದೆ.