ಮಡಿಕೇರಿ, ಸೆ. ೬ : ಶ್ರೀರಂಗಪಟ್ಟಣದಿAದ ಮಡಿಕೇರಿ ಮಾರ್ಗವಾಗಿ ಮಂಗಳೂರಿಗೆ ಬೆಲ್ಲವನ್ನು ಸಾಗಾಟ ಮಾಡುವ ಸಂದರ್ಭ ಮಾರ್ಗ ಮಧ್ಯೆ ಮೊಣ್ಣಂಗೇರಿಯಲ್ಲಿ ಪಿಕಪ್ ವಾಹನ ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾದ ಘಟನೆ ನಡೆದಿದೆ. ಪಿಕಪ್ ಚಾಲಕ ಹಾಗೂ ಇನ್ನೋರ್ವ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.