ಗೋಣಿಕೊಪ್ಪ ವರದಿ, ಸೆ. ೬: ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ ಪೊನ್ನಂಪೇಟೆ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ರೂ. ೨೨ ಲಕ್ಷ ಅನುದಾನದಲ್ಲಿ ರೈತ ತರಬೇತಿ ಕೇಂದ್ರ ಮತ್ತು ಸಭಾಂಗಣ ನಿರ್ಮಾಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ಪೊನ್ನಂಪೇಟೆ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖಾಧಿಕಾರಿ ಡಾ. ಎ.ಎಸ್. ಶಾಂತೇಶ, ಪಶು ವೈದ್ಯರಾದ ಡಾ. ಬಿ.ಜಿ. ಗಿರೀಶ್, ಡಾ. ಚಂದ್ರಶೇಖರ್, ಡಾ. ಜಿ.ಜಿ. ಭವಿಷ್ಯಕುಮಾರ್, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ, ಸದಸ್ಯ ಮದುಕುಮಾರ್, ಪ್ರಧಾನ್ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಸಹಾಯಕ ನಿರ್ದೇಶಕ ಕೆ.ಆರ್. ರಾಜೇಶ್ ಇದ್ದರು.