ಮಡಿಕೇರಿ, ಸೆ. ೬: ನಗರದ ಅಂಗಡಿ ಮತ್ತು ಹೊಟೇಲ್‌ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಹಾಗೂ ಕೋಟ್ಪಾ ಕಾಯ್ದೆ ಉಲ್ಲಂಘನೆ ಕುರಿತು ಇತ್ತೀಚೆಗೆ ೧೩ ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಯಿತು.

ಸೆಕ್ಷನ್ ೪ ಅಡಿಯಲ್ಲಿ ೧೨ ಪ್ರಕರಣಗಳಿಗೆ ರೂ. ೧೯೦೦ ದಂಡ ಹಾಗೂ ಸೆಕ್ಷನ್ ೬೦ ಅಡಿಯಲ್ಲಿ ೧ ಪ್ರಕರಣಕ್ಕೆ ರೂ ೧೦೦ ವಿಧಿಸಿ, ಒಟ್ಟು ೧೪ ಪ್ರಕರಣಗಳಿಗೆ ರೂ. ೨೦೦೦ ದಂಡ ವಿಧಿಸಿ ಆರೋಗ್ಯ ಶಿಕ್ಷಣ ಮಾಹಿತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿದರು.

ಸಂಗ್ರಹಣೆಯಾದ ದಂಡವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜಂಟಿ ಖಾತೆಗೆ ಜಮೆ ಮಾಡಲಾಯಿತು. ಅನಿರೀಕ್ಷಿತ ಭೇಟಿ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು, ಜಿಲ್ಲಾ ಸಮಾಜ ಕಾರ್ಯಕರ್ತರು, ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರು ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಇದ್ದರು.