ಮಡಿಕೇರಿ, ಸೆ. ೫: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಇನ್ನಿತರೆಡೆ ಪ್ರತಿಭಟನೆ ನಡೆಯಿತು.
ಜೀವ ವಿಮಾ ಪ್ರತಿನಿಧಿಗಳನ್ನು ವೃತ್ತಿಪರರು ಎಂದು ಗುರುತಿಸಬೇಕು. ಪಾಲಿಸಿದಾರರ ಸಾಲ ಮತ್ತು ಪ್ರೀಮಿಯಂ ವಿಳಂಬದ ಶುಲ್ಕದ ಬಡ್ಡಿ ಕಡಿಮೆ ಮಾಡಬೇಕು. ಜಿಎಸ್‌ಟಿ ತೆಗೆದು ಹಾಕಬೇಕು. ಪ್ರತಿನಿಧಿಗಳ ಕಲ್ಯಾಣ ನಿಧಿ ಆರಂಭಿಸಬೇಕು. ಪಿಂಚಣಿ ಯೋಜನೆ ಜಾರಿಮಾಡಬೇಕು. ಪ್ರತಿನಿಧಿಗಳಿಗೆ ಗ್ರೂಪ್ ಮೆಡಿಕ್ಲೆöÊಮ್ ನೀಡಬೇಕು.
ಅವಧಿ ವಿಮೆ ಮತ್ತು ವಹಿವಾಟು ಶುಲ್ಕ ಹೆಚ್ವಿಸಬೇಕು. ಪಾಲಿಸಿದಾರರ ಬೋನಸ್ ಹೆಚ್ಚಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.ಕಣಿವೆ: ವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ. ಮೋಹನ್ ನೇತೃತ್ವದಲ್ಲಿ ಕುಶಾಲನಗರದ ವಿಮಾ ಕಚೇರಿ ಬಳಿ ಪ್ರತಿನಿಧಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಜೀವ ವಿಮಾ ನಿಗಮದ ಹಿರಿಯ ಪದಾಧಿಕಾರಿಗಳಾದ ಸುಬ್ರಮಣಿ, ಟಿ.ಬಿ.ಜಗದೀಶ್, ಒಕ್ಕೂಟದ ಪದಾಧಿಕಾರಿಗಳಾದ ಹೆಚ್.ಎನ್. ದಿನೇಶ್, ಖಜಾಂಚಿ ಹೇಮಾವತಿ, ನಂದಕುಮಾರ್, ತಾರಕೇಶ್ವರಿ, ಮಹದೇವ, ಜ್ಯೋತಿ, ಪುರುಷೋತ್ತಮ, ರಿನಿತ್ ಶರೋನ್ಹಾ, ನಾಗರಾಜು, ಎ.ಎನ್. ರಮೇಶ, ಡಿ.ಸಿ. ಶಿವಣ್ಣ, ಸಿ.ಆರ್. ನಾಗರಾಜು, ಹೆಚ್.ಎಸ್. ಲೋಕೇಶ್ ಮೊದಲಾದವರಿದ್ದರು.