ವೀರಾಜಪೇಟೆ, ಸೆ. ೬: ಸರ್ವೊಚ್ಚ ನ್ಯಾಯಾಲಯದ ಆದೇಶದಂತೆ ರಾತ್ರಿ ೧೦ ಗಂಟೆಯ ನಂತರ ಲೌಡ್ಸ್ಪೀಕರ್ ಹಾಗೂ ಡಿಜೆಗಳನ್ನು ಬಳಸುವಂತಿಲ್ಲ. ನ್ಯಾಯಾಲಯ ಹಾಗೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿರುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಹೇಳಿದರು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ವೀರಾಜಪೇಟೆ ಗಣೇಶ ವಿಸರ್ಜನೋತ್ಸವ ತಾ. ೯ ರ ರಾತ್ರಿ ಹಾಗೂ ೧೦ ರಂದು ಮುಂಜಾನೆ ನಡೆಯುವುದರಿಂದ ಪೊಲೀಸ್ ಇಲಾಖೆಯಿಂದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನ್ಯಾಯಾಲಯ ಹಾಗೂ ಸರ್ಕಾರದ ಕಾನೂನನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರಾತ್ರಿ ೧೦ ಗಂಟೆಯ ನಂತರ ಶಬ್ದ ಮಾಲಿನ್ಯಕ್ಕೆ ಅವಕಾಶ ಇಲ್ಲ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಇಲಾಖೆ ಯೊಂದಿಗೆ ಸಹಕರಿಸಬೇಕೆಂದು ಎಸ್ಪಿ ಮನವಿ ಮಾಡಿದರು.
ಗಣಪತಿ ಗುಡಿ ದೇವಾಲಯ ಸಮಿತಿ ಕಾರ್ಯದರ್ಶಿ ಮಾಳೇಟಿರ ಮಿಟ್ಟು ಕಾವೇರಪ್ಪ ಮಾತನಾಡಿ, ವೀರಾಜಪೇಟೆ ಗಣೇಶ ಉತ್ಸವ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಕಳೆದ ೨೦೦ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಲೌಡ್ ಸ್ಪೀಕರ್ಗಳನ್ನು ಬಳಸಲು ಅವಕಾಶ ಇಲ್ಲವೆಂದರೆ ಹಬ್ಬಕ್ಕೆ ಕಳೆ ಇರುವುದಿಲ್ಲ. ಕನಿಷ್ಟ ೨ ಗಂಟೆಯವರೆಗಾದರೂ ಡಿ.ಜೆಗಳನ್ನು ಬಳಸಲು ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಪುರಸಭೆ ಸದಸ್ಯ ಮಹಮದ್ ರಾಫಿ ಮಾತನಾಡಿ ಪಟ್ಟಣದಲ್ಲಿ ನಡೆಯುವ ಗೌರಿ ಗಣೇಶ ಹಬ್ಬ ಕೇವಲ ಹಿಂದೂಗಳು ಮಾತ್ರ ಆಚರಿಸುವುದಿಲ್ಲ. ಎಲ್ಲಾ ಕೋಮಿನ ಜನರು ಶಾಂತಿ ಸೌರ್ಹಾದತೆಯಿಂದ ನಡೆಸುವ ಹಬ್ಬವಾಗಿದೆ. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದಲೇ ನಾವು ಹಬ್ಬವನ್ನು ಆಚರಿಸುತ್ತಿದ್ದೇವೆ. ಲೌಡ್ ಸ್ಪೀಕರ್ ಬಳಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಪುರಸಭೆ ಸದಸ್ಯ ಸಿ.ಕೆ ಪೃಥ್ವ್ವಿನಾಥ್, ವಕೀಲ ಟಿ.ಪಿ ಕೃಷ್ಣ, ನಂಬುಡುಮಾಡ ಆನಂದ್, ಬಿ.ಎಂ ಕುಮಾರ್, ಪಾಂಡAಡ ರಚನ್ ಇವರುಗಳು ಮಾತನಾಡಿ ಲೌಡ್ಸ್ಪೀಕರ್ ಬಳಕೆಗೆ ಅವಕಾಶ ನೀಡುವಂತೆ ಕೋರಿದರು.
ಪಿಡಬ್ಲುö್ಯಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸಿದ್ದೆಗೌಡ (ಮೊದಲ ಪುಟದಿಂದ) ಮಾತನಾಡಿ ರಥ ತೆರಳುವ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಇಂದಿನಿAದಲೇ ಪ್ರಾರಂಭಗೊAಡಿದೆ ಎಂದು ಹೇಳಿದರು. ಚೆಸ್ಕಾಂ ಇಲಾಖಾ ಅಧಿಕಾರಿ ರಥ ತೆರಳುವ ರಸ್ತೆಯ ಕೆಳಭಾಗದಲ್ಲಿ ಇರುವ ವಿದ್ಯುತ್ ತಂತಿಗಳನ್ನು ಸರಿಪಡಿಲಾಗಿದೆ. ಆ ದಿನ ವಿದ್ಯುತ್ ಅಡಚಣೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. ವೇದಿಯಲ್ಲಿ ಡಿವೈಎಸ್ಪಿ ನಿರಂಜನ್ ರಾಜ್ ಅರಸ್, ವೃತ್ತ ನಿರೀಕ್ಷಕ ಶಿವರುದ್ರ, ಗುಪ್ತಚರ ಇಲಾಖಾ ವೃತ್ತ ನಿರೀಕ್ಷಕ ಮೇದಪ್ಪ, ಗೌರಿ ಗಣೇಶ ನಾಡ ಸಮಿತಿ ಅಧ್ಯಕ್ಷ ಸಾಯಿನಾಥ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಪಟ್ಟಣದ ೨೨ ಕಡೆಗಳಲ್ಲಿ ಗೌರಿ ಗಣೇಶನ್ನು ಪ್ರತಿಷ್ಠಾಪಿಸಲಾಗಿದ್ದು ಎಲ್ಲಾ ಸಮಿತಿಗಳೂ ಸರತಿ ಸಾಲಿನಲ್ಲಿ ಗೌರಿಕೆರೆಯಲ್ಲಿ ತಾ. ೧೦ ರಂದು ಮುಂಜಾನೆ ಉತ್ಸವ ಮೂರ್ತಿಗಳನ್ನು ವಿಸರ್ಜನೆ ಮಾಡಲಿವೆ.