ಮಡಿಕೇರಿ, ಸೆ. ೫: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ಇಂದು ನಡೆದ ಮಡಿಕೇರಿ ದಸರಾ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದು ಕೊಳ್ಳಲಾಯಿತು. ಸಂಪ್ರದಾಯದAತೆ ಪೇಟೆ ಶ್ರೀರಾಮಮಂದಿರ ಸನ್ನಿಧಿಯಲ್ಲಿ ದಸರಾ ಸಮಿತಿ ವತಿಯಿಂದ ಪೂಜೆ ಸಲ್ಲಿಸಿ ಬಳಿಕ ಕಾವೇರಿ ಕಲಾಕ್ಷೇತ್ರದಲ್ಲಿ ಸಮಿತಿ ಅಧ್ಯಕ್ಷೆ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಅನಿತಾ ಪೂವಯ್ಯ, ಮಡಿಕೇರಿ ದಸರಾ ಉತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಈ ಬಾರಿ ಶಾಸಕರ ಪ್ರಯತ್ನದಿಂದ ದಸರಾ ಹಬ್ಬಕ್ಕೆ ಸರ್ಕಾರದಿಂದ ೧ ಕೋಟಿ ಅನುದಾನ ಮಂಜೂರಾಗಿದೆ. ಆದ್ದರಿಂದ ಪ್ರಸಕ್ತ ವರ್ಷ ದಸರಾವನ್ನು ಎಲ್ಲಾ ಉಪಸಮಿತಿಗಳ ಸಹಕಾರದೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ನುಡಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ಸರ್ಕಾರದಿಂದ ಮಂಜೂರಾಗಿರುವ ಒಂದು ಕೋಟಿ ಅನುದಾನದಲ್ಲಿ ೧೮ ಲಕ್ಷ ಹಣ ಜಿ.ಎಸ್.ಟಿ.ಗೆ ಒಳಪಡುತ್ತದೆ. ಉಳಿದ ೮೨ ಲಕ್ಷದಲ್ಲಿ ಮಂಟಪಗಳಿಗೆ ತಲಾ ೩.೩೦ ಲಕ್ಷ ಹಾಗೂ ನಾಲ್ಕು ಕರಗ ಸಮಿತಿಗಳಿಗೆ ತಲಾ ೨ ಲಕ್ಷ ಅನುದಾನ ನೀಡಲಾಗುತ್ತದೆ. ಇದಕ್ಕಾಗಿ ೪೧ ಲಕ್ಷವನ್ನು ಮೀಸಲಿಡಲಾಗುತ್ತದೆ. ೯ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ೧೩ ಲಕ್ಷ, ಕವಿಗೋಷ್ಠಿಗೆ ೫೦ ಸಾವಿರ, ವೇದಿಕೆ ಹಾಗೂ ನಗರ ಅಲಂಕಾರಕ್ಕೆ ೧೭.೫೦ ಲಕ್ಷ, ಪ್ರತಿನಿತ್ಯ ಪೂಜಾ ಖರ್ಚಿಗಾಗಿ ೨.೮೦ ಲಕ್ಷ, ಬಹುಮಾನ, ಪಾರಿತೋಷಕಗಳಿಗೆ ೫ ಲಕ್ಷ ಹಾಗೂ ಇತರೆ ಖರ್ಚಿಗೆ ೨೦ ಸಾವಿರವನ್ನು ಮೀಸಲಿಡಲಾಗಿದೆ ಎಂದು ಮಾಹಿತಿಯಿತ್ತರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ದಸರಾ, ಮಹಿಳಾ ದಸರಾ, ಜಾನಪದ ದಸರಾ, ಯುವ ದಸರಾ ಸೇರಿದಂತೆ ೯ ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಗಾಂಧಿ ಮೈದಾನದಲ್ಲಿ ಈಗಾಗಲೇ ೭೫ ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಗ್ಯಾಲರಿ ಸಿದ್ಧಗೊಳ್ಳುತ್ತಿದೆ ಎಂದು ಅವರು ಹೇಳಿದರು.

ದಸರಾ ಸಮಿತಿ ವಿಶೇಷ ಆಹ್ವಾನಿತರಾದ ಟಿ.ಪಿ. ರಮೇಶ್ ಮಾತನಾಡಿ, ದಸರಾ ಆಚರಣೆಗೆ ವ್ಯವಸ್ಥಿತವಾದ ಕ್ರಿಯಾಯೋಜನೆ ಸಿದ್ಧಪಡಿಸಿಕೊಳ್ಳಿ ಎಂದು ಸಲಹೆ ನೀಡಿದರಲ್ಲದೇ ಯಾವುದೇ ಲೋಪವಾಗದಂತೆ ಕಾರ್ಯಕ್ರಮ ಆಯೋಜಿಸುವಂತೆ ಹೇಳಿದರು. ದಸರಾ ಸಮಿತಿಗೆ ನೂತನ ಬೈಲಾ ರಚನೆ ಸಂಬAಧ ಆದಷ್ಟು ಶೀಘ್ರವಾಗಿ ದಸರಾ ಸಮಿತಿ ಕಾರ್ಯೋನ್ಮುಖ ವಾಗಬೇಕು ಎಂದು ನುಡಿದರು.

ವಿಶೇಷ ಆಹ್ವಾನಿತರಾದ ಜಿ.ರಾಜೇಂದ್ರ ಅವರು ಮಾತನಾಡಿ, ಮಳೆ ಬರಬಹುದಾದ ಸಾಧ್ಯತೆ ಹಿನೆÀ್ನಲೆಯಲ್ಲಿ ಎಲ್ಲಾ ಸಿದ್ಧತೆಗಳೊಂದಿಗೆ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಉತ್ತಮ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು. ದಸರಾ ಉತ್ಸವಕ್ಕೂ ಮುನ್ನ ಮಂಟಪಗಳಿಗೆ ಅನುದಾನ ಸಿಗುವಂತಾಗಬೇಕು. ರಸ್ತೆ ದುರಸ್ತಿ

(ಮೊದಲ ಪುಟದಿಂದ) ಕಾರ್ಯಗಳಾಗಬೇಕೆಂದು ಸಲಹೆಯಿತ್ತರು. ಸಭೆಯಲ್ಲಿ ದಶಮಂಟಪ, ಕರಗಗಳಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಒತ್ತಾಯಿಸಿದರು. ದಸರಾ ಸಮಿತಿ ಕಾರ್ಯಾಧ್ಯಕ್ಷರು ಪ್ರಕಟಿಸಿದ ೩.೩೦ ಲಕ್ಷ ರೂ. ಅನುದಾನ ಮಂಟಪಗಳ ಅಲಂಕಾರಕ್ಕೆ ಏನೇನೂ ಸಾಲದು. ಹೆಚ್ಚಿನ ಅನುದಾನ ನೀಡಲೇಬೇಕೆಂಬ ಒತ್ತಾಯ ಕೇಳಿಬಂತು. ಈ ಸಂದರ್ಭ ಕೆ.ಎಸ್.ರಮೇಶ್, ಅನಿತಾಪೂವಯ್ಯ ಹೆಚ್ಚಿನ ಅನುದಾನಕ್ಕಾಗಿ ಪ್ರಯತ್ನಿಸೋಣ ಎಂಬ ಭರವಸೆ ನೀಡಿದ ಬಳಿಕ ಸಭೆ ಶಾಂತವಾಯಿತು.

ಸಭೆಯಲ್ಲಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ದಸರಾ ಸಮಿತಿ ಖಜಾಂಜಿ ಶ್ವೇತಾ, ನಗರಸಭಾ ಸದಸ್ಯರಾದ ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಸಬಿತ, ಸತೀಶ್ ಪೈ, ಎಸ್.ಸಿ.ಸುಬ್ರಮಣಿ, ನಗರಸಭಾ ಆಯುಕ್ತ ವಿಜಯ ಸೇರಿದಂತೆ ಪ್ರಮುಖರು ಹಾಜರಿದ್ದರು. ಬಿ.ಕೆ.ಅರುಣ್ ಕುಮಾರ್ ವಂದಿಸಿದರು. ಪೇಟೆ ರಾಮಮಂದಿರದಲ್ಲಿ ಪೂಜೆ ಸಲ್ಲಿಸುವ ಸಂದರ್ಭ ಹಾಜರಿದ್ದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾವನ್ನು ಈ ಬಾರಿ ವಿಜ್ರಂಭಣೆಯಿAದ ಆಚರಿಸ ಲಾಗುವುದು ಎಂದು ಹೇಳಿದರು. ಈ ಸಂದರ್ಭ ದಸರಾ ಸಮಿತಿ ಪ್ರಮುಖರು ಹಾಜರಿದ್ದರು.