ವೀರಾಜಪೇಟೆ, ಸೆ. ೫: ಇತಿಹಾಸ ಪ್ರಸಿದ್ಧ ಗೌರಿ ಗಣೇಶೋತ್ಸವವನ್ನು ವೀರಾಜಪೇಟೆಯಲ್ಲಿ ಹಲವು ವರ್ಷಗಳಿಂದಲೂ ವಿಜೃಂಬಣೆಯಿAದ ನಡೆಸಿಕೊಂಡು ಬರುತ್ತಿದ್ದು, ಈ ವರ್ಷವು ಎಲ್ಲಾ ಸಮಿತಿಯ ವಿದ್ಯುತ್ ಅಲಂಕೃತ ಮಂಟಪಗಳು ಶಾಂತಿಯುತವಾಗಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಬಸವೇಶ್ವರ ದೇವಸ್ಥಾನ ಗೌರಿ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಎನ್.ಜಿ.ಕಾಮತ್ ಹೇಳಿದರು.
ತಾ.೯ ರಂದು ರಾತ್ರಿ ಗೌರಿ ಗಣೇಶ ವಿಸರ್ಜನೋತ್ಸವದ ಅಂಗವಾಗಿ ನಡೆಯುವ ಮೆರವಣಿಗೆ ಹಾಗೂ ಇತರ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ರೀ ಗೌರಿ ಗಣೇಶ ಪ್ರತಿಷ್ಠಾಪಿಸಿರುವ ೨೨ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಬಸವೇಶ್ವರ ದೇವಸ್ಥಾನದಲ್ಲಿ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೌರಿ ಗಣೇಶನ ವಿದ್ಯುತ್ ಅಲಂಕೃತ ಹೂವಿನ ಮಂಟಪಗಳು, ಮೆರವಣಿಗೆಯಲ್ಲಿ ಸರತಿ ಸಾಲಿನಲ್ಲಿ ಭಾಗವಹಿಸುವಂತೆ ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ವಿಸರ್ಜನೋತ್ಸವ ನಡೆಯುವಂತಾಗಲಿ ಎಂದರು.
ಅAಗಾಳ ಪರಮೇಶ್ವರಿ ದೇವಸ್ಥಾನ ವಿನಾಯಕ ಯುವಕ ಮಂಡಳಿ ಅಧ್ಯಕ್ಷ ಟಿ.ಪಿ.ಕೃಷ್ಣ ಮಾತನಾಡಿ, ವರ್ಷದಲ್ಲಿ ಒಂದು ಹಬ್ಬ ನಡೆಸಲು ರಾತ್ರಿ ಧ್ವನಿವರ್ದಕ ಮತ್ತು ಡಿ.ಜೆ. ನಿರ್ಬಂಧ ಕ್ರಮ ಸರಿಯಲ್ಲ ಎಂದರು.
ಗೌರಿ ಗಣೇಶ ನಾಡ ಹಬ್ಬ ಸಮಿತಿ ಅಧ್ಯಕ್ಷ ಬಿ.ಜಿ.ಸಾಯಿನಾಥ್ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಗಣಪತಿ ದೇವಸ್ಥಾನ ಸಮಿತಿಯ ಮಿಟ್ಟು ಕಾವೇರಪ್ಪ, ಆಂಜನೇಯ ದೇವಸ್ಥಾನ ವಿನಾಯಕ ಸಮಿತಿಯ ಸನ್ನಿ ಕಾರ್ಯಪ್ಪ, ಬಸವೇಶ್ವರ ದೇವಸ್ಥಾನ ಸಮಿತಿಯ ಪುಷ್ಪರಾಜ್, ಚಂದ್ರ ಪ್ರಸಾಧ್, ಅರಸುನಗರ ವಿಘ್ನೇಶ್ವರ ಸಮಿತಿಯ ಶ್ರೀಕಾಂತ್ ಮಾತನಾಡಿದರು. ಸಭೆಯಲ್ಲಿ ೨೨ ಗೌರಿ ಗಣೇಶ ಸಮಿತಿ ಸದಸ್ಯರು ಭಾಗವಹಿಸಿದ್ದರು.