ಮಡಿಕೇರಿ, ಸೆ. ೫: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ವಣಚಲು ಮತ್ತು ಗಾಳಿಬೀಡು ಸುತ್ತುಮುತ್ತಲಿನಲ್ಲಿ ಮಳೆಯಿಂದ ಹಾನಿಯಾದ ಪ್ರದೇಶವನ್ನು ಪರಿಶೀಲಿಸಿದರು. ಈ ಸಂದರ್ಭ ತಹಶೀಲ್ದಾರ್ ಮಹೇಶ್, ಜಿ.ಪಂ. ಇಂಜಿನಿಯರ್ ಜವರೇಗೌಡ, ಪಿ.ಡಿ.ಓ., ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಷ್ ಸೋಮಯ್ಯ, ಗ್ರಾಮಸ್ಥರು ಇದ್ದರು.