ಮಡಿಕೇರಿ, ಸೆ. ೫: ರಾಷ್ಟಿçÃಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ೩೭ನೇ ರಾಷ್ಟಿçÃಯ ನೇತ್ರದಾನ ಪಾಕ್ಷಿಕ ಆಚರಣೆಯು ತಾ. ೮ ರವರೆಗೆ ನಡೆಯಲಿದೆ.
ಹದಿನೆಂಟು ವರ್ಷ ವಯಸ್ಸಿನ ಮೇಲ್ಪಟ್ಟವರು ನೋಂದಣಿ ಪತ್ರವನ್ನು ತುಂಬುವ ಮೂಲಕ ಅಥವಾ ಜೀವ ಸಾರ್ಥಕತೆ ವೆಬ್ಸೈಟ್ hಣಣಠಿs://ತಿತಿತಿ.ರಿeevಚಿsಚಿಡಿಣhಚಿಞಚಿಣhe.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ನೇತ್ರದಾನಿಗಳಾಗಲು ನೋಂದಣಿ ಮಾಡಿಸಬಹುದು.
ನೇತ್ರದಾನಕ್ಕೆ ಗರಿಷ್ಠ ವಯಸ್ಸಿನ ಮಿತಿ ಇರುವುದಿಲ್ಲ. ನೇತ್ರದಾನ ಮಾಡಲು ಲಿಂಗ, ಶರೀರದ ಖಾಯಿಲೆಗಳಾದ ಸಕ್ಕರೆ, ರಕ್ತದ ಒತ್ತಡ ಮತ್ತು ಕಣ್ಣಿನ ರೋಗಗಳಾದ ದೃಷ್ಟಿದೋಷ, ಪೊರೆ, ಅಕ್ಷಿಪಟಲ ಕೀಳುವಿಕೆ, ಯಾವುದೇ ಶಸ್ತçಚಿಕಿತ್ಸೆಗೆ ಒಳಪಟ್ಟಿರುವಿಕೆ ಇವುಗಳ ಅಡ್ಡಿಯಲ್ಲದೆ ಕಣ್ಣಿನ ಪಾರದರ್ಶಕ ಪಟಲ ಆರೋಗ್ಯವಾಗಿದ್ದಲ್ಲಿ ನೇತ್ರದಾನ ಮಾಡಬಹುದು. ರೇಬಿಸ್, ಸಿಫಿಲಿಸ್, ಏಡ್ಸ್, ಹೆಪಟೈಟಿಸ್ ಮುಂತಾದ ಕಾಯಿಲೆಗಳಿಂದ ಸಾಯುವ ವ್ಯಕ್ತಿ ನೇತ್ರದಾನ ಮಾಡುವಂತಿಲ್ಲ.
ಮರಣ ಹೊಂದಿದವರು ನೇತ್ರದಾನಕ್ಕೆ ನೋಂದಣಿ ಮಾಡಿಸದಿದ್ದಲ್ಲಿ ಅವರ ಬಂಧುಗಳು ಮರಣ ಹೊಂದಿದವರ ನೇತ್ರದಾನಕ್ಕೆ ಸಮ್ಮತಿ ನೀಡಬಹುದು. ಮರಣ ಹೊಂದಿದವರ ನೇತ್ರದಾನ ಮಾಡಲು ಹತ್ತಿರದ "ನೇತ್ರ ಭಂಡಾರ"/ ನೇತ್ರ ತಜ್ಞರನ್ನು ಯಾವುದೇ ಸಮಯದಲ್ಲಾದರೂ ಸಂಪರ್ಕಿಸಬಹುದು. ಮರಣ ಹೊಂದಿದ ೬ ಗಂಟೆಗಳಲ್ಲಿ ನೇತ್ರದಾನ ಮಾಡಬೇಕು, ಅಲ್ಲಿಯವರೆಗೂ ಮರಣ ಹೊಂದಿದವರ ರೆಪ್ಪೆಗಳನ್ನು ಮುಚ್ಚಿರಬೇಕು. ನೇತ್ರಗಳನ್ನು ತೆಗೆಯಲು ೧೫-೨೦ ನಿಮಿಷಗಳು ಸಾಕು, ಇದನ್ನು ಮರಣ ಹೊಂದಿದವರು ಇದ್ದ ಜಾಗದಲ್ಲೇ ದಿನದ ಯಾವುದೇ ಸಮಯದಲ್ಲಾದರೂ ಮಾಡಲಾಗುವುದು ಮತ್ತು ಇದರಿಂದ ಮುಖ ವಿಕಾರವಾಗುವುದಿಲ್ಲ ಹಾಗೂ ಇದಕ್ಕೆ ದಾನಿಗಳ ಬಂಧುಗಳು ಯಾವ ಖರ್ಚನ್ನು ಭರಿಸಬೇಕಿಲ್ಲ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಮಡಿಕೇರಿ ಕೊಡಗು ಜಿಲ್ಲೆ, ದೂ.ಸಂ.೦೮೨೭೨-೨೨೩೪೪೪ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್ ತಿಳಿಸಿದ್ದಾರೆ.