ಶ್ರೀಮಂಗಲ: ಬಾಳೆಲೆ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದಡಿ ಚದುರಂಗ ಆಟವನ್ನು ಆಯೋಜಿಸಲಾಗಿತ್ತು.
ವಿಜಯಲಕ್ಷಿö್ಮ ವಿದ್ಯಾಸಂಸ್ಥೆ, ಸರಕಾರಿ ಪ್ರಾಥಮಿಕ ಶಾಲೆ, ಬಾಳೆಲೆಯ ಸಾರ್ವಜನಿಕರು ಇದರಲ್ಲಿ ಭಾಗವಹಿಸಿ ಸಬ್ ಜೂನಿಯರ್ ವಿಭಾಗ, ಜೂನಿಯರ್ ವಿಭಾಗ ಮತ್ತು ಸೀನಿಯರ್ ವಿಭಾಗದಲ್ಲಿ ವಿಜೇತರಾದ ಹೇಮಂತ್, ವೈ.ಕೆ. ಸಿದ್ದು, ಅಡ್ಡೇಂಗಡ ಅರ್ಜುನ್ ಪೊನ್ನಣ್ಣರವರು ಪ್ರಸಸ್ತಿ ಪಡೆದುಕೊಂಡರು. ಈ ಪಂದ್ಯಾವಳಿಗೆ ತೀರ್ಪುಗಾರರಾಗಿ ಮುಕ್ಕಾಟಿರ ಮುತ್ತಣ್ಣ ಕಾವೇರಪ್ಪ, ಪೋಡಮಾಡ ನವೀನ್ ನಾಣಯ್ಯ, ಚಕ್ಕೇರ ದಿಲೀಪ್ ಬೋಪಣ್ಣ ಅವರು ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸುವ ಮೂಲಕ ಈ ಪಂದ್ಯಾಟ ಯಶಸ್ವಿಯಾಗಿ ನಡೆಯಿತು.ಗೋಣಿಕೊಪ್ಪಲು: ಜಿಲ್ಲಾ ಪಂಚಾಯಿತಿ, ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಪಂಚಾಯಿತಿ ಇವರ ವತಿಯಿಂದ ಪೊನ್ನಂಪೇಟೆಯ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಎರಡು ತಾಲೂಕುಗಳ ನೂರಾರು ಕ್ರೀಡಾಪಟುಗಳು ಚದುರಂಗ ಆಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.
ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಓದುವ ಬೆಳಕು ಕಾರ್ಯಕ್ರಮದ ಭಾಗವಾಗಿ ಪ್ರತಿ ಪಂಚಾಯಿತಿಗಳಲ್ಲಿ ಕಿರಿಯ, ಹಿರಿಯ ಹಾಗೂ ಮಹನಿಯರುಗಳಿಗೆ ಆಯಾಯ ಡಿಜಿಟಲ್ ಗ್ರಂಥಾಲಯಗಳಲ್ಲಿ ಚದುರಂಗ ಆಟವನ್ನು ಆಯೋಜಿಸಲಾಗಿತ್ತು. ಗ್ರಾಮ ಮಟ್ಟದಲ್ಲಿ ಗೆಲವು ಸಾಧಿಸಿದ ಕ್ರೀಡಾಪಟುಗಳಿಗೆ ತಾಲೂಕು ಮಟ್ಟದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಗ್ರಾಮೀಣ ಭಾಗದಿಂದ ಆಗಮಿಸಿದ್ದ ಕ್ರೀಡಾಪಟುಗಳು ಅತಿ ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು.
ವೀರಾಜಪೇಟೆ ತಾಲೂಕಿನ ೧೭ ಪಂಚಾಯಿತಿ ಹಾಗೂ ಪೊನ್ನಂಪೇಟೆ ತಾಲೂಕಿನ ೨೧ ಪಂಚಾಯಿತಿಗಳಿಗೆ ೨ ವಿಭಾಗಗಳಾಗಿ ವಿಂಗಡಿಸಿ ಕ್ರೀಡೆಯನ್ನು ನಡೆಸಲಾಯಿತು.ನಿಟ್ಟೂರು: ನಿಟ್ಟೂರು ಗ್ರಾಮ ಪಂಚಾಯಿತಿ ಆಯೋಜಿಸಿದ್ದ ಪಂಚಾಯಿತಿ ಮಟ್ಟದ ಚದುರಂಗ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಗ್ರಾಮದ ಜನತೆ ಡಿಜಿಟಲ್ ಲೈಬ್ರರಿಗಳ ಸದುಪಯೋಗಪಡಿಸಿಕೊಂಡು ತಮ್ಮ ಜ್ಞಾನ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕೆಂದು ಕರೆ ನೀಡಿದರು. ನಂತರ ನಡೆದ ಚದುರಂಗ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಅಳಮೇಂಗಡ ಬೋಸ್ ಮಂದಣ್ಣ ಪ್ರಥಮ, ಸಾತ್ವಿಕ ಸುರೇಶ್ ಭಟ್ ದ್ವಿತೀಯ, ಸಬ್ ಜೂನಿಯರ್ ವಿಭಾಗದಲ್ಲಿ ಶ್ರೀಶಾಂತ್ ಪ್ರಥಮ, ಅಮೃತ ದ್ವಿತೀಯ, ಜೂನಿಯರ್ ವಿಭಾಗದಲ್ಲಿ ರೋಹನ್ ಅಪ್ಪಚ್ಚು ಪ್ರಥಮ, ಸುಶ್ಮಿತಾ ದ್ವಿತೀಯ ಸ್ಥಾನ ಪಡೆದರು. ವಿಜೇತರ ಪರವಾಗಿ ಮಾತನಾಡಿದ ಅಳಮೇಂಗಡ ಬೋಸ್ ಮಂದಣ್ಣ, ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್ ರಾಜ್ ಇಲಾಖೆ ಈ ರೀತಿಯ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿರುವುದರಿಂದ ಎಲ್ಲಾ ವಯೋಮಾನದವರ ಜ್ಞಾನ ಸಾಮರ್ಥ್ಯ ಹೆಚ್ಚಾಗುವುದರ ಜೊತೆಗೆ ಗ್ರಾಮದ ಜನತೆಯ ನಡುವೆ ಸ್ನೇಹಪೂರ್ವ ಸಂಬAಧಗಳು ಗಟ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಡಿಞರಂಡ ಕವಿತಾ ಪ್ರಭು, ಸದಸ್ಯರಾದ ಚಕ್ಕೇರ ಸೂರ್ಯ ಅಯ್ಯಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮನಮೋಹನ್, ಗ್ರಂಥಾಲಯ ಪಾಲಕಿ ಕವಿತಾ ಲೋಕನಾಥ್, ಸಿಬ್ಬಂದಿಗಳಾದ ತಿರ್ನೆಲ್ಲಿಮಾಡ ಪೂಣಚ್ಚ, ದೀಪ್ತಿ ಸತೀಶ್ ಮತ್ತಿತರ ಕ್ರೀಡಾ ಪಟುಗಳು ಹಾಜರಿದ್ದರು.