ಕುಶಾಲನಗರ,ಸೆ.೪: ಕುಶಾಲನಗರ ಸಮೀಪದ ಕೈಗಾರಿಕಾ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಘಟಕದ ಗೋದಾಮಿನಲ್ಲಿ ಮಾರಾಟವಾಗದೆ ಅವಧಿ ಮೀರಿ ಉಳಿದ, ಮಾನವ ಸೇವನೆಗೆ ಯೋಗ್ಯವಲ್ಲದ ಮದ್ಯವನ್ನು ನಾಶ ಪಡಿಸಲಾಯಿತು.
ಅಬಕಾರಿ ಇಲಾಖೆಯ ಜಿಲ್ಲಾ ಅಧೀಕ್ಷಕಿ ಆರ್.ಎಂ.ಚೈತ್ರಾ ನೇತೃತ್ವದಲ್ಲಿ ರೂ.೬೮ ಸಾವಿರ ಮೌಲ್ಯದ ಅವಧಿ ಮೀರಿದ ೫೪ ಬಾಕ್ಸ್ ವಿವಿಧ ಕಂಪನಿಯ ಬಿಯರ್ ಹಾಗೂ ೨೫ ವೈನ್ ಬಾಟಲ್ಗಳ ಮದ್ಯವನ್ನು ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು.