ಕುಶಾಲನಗರ, ಸೆ.೪: ಕುಶಾಲನಗರ ಸಮೀಪದ ಕೊಪ್ಪ-ಬೈಲುಕೊಪ್ಪ ಮಾರ್ಗಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅರಣ್ಯ ಇಲಾಖೆ ನೌಕರ ಮೃತಪಟ್ಟಿದ್ದಾರೆ. ಕುಶಾಲನಗರ ವಲಯ ಆನೆಕಾಡಿನಲ್ಲಿ ರಾಪಿಡ್‌ರೆಸ್ಪಾನ್ಸ್ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗ್ಪುರ ಮೂಲದ ಶಾಂತಕುಮಾರ್ (೩೫) ಮೃತ ದುರ್ದೈವಿ. ಕಾರು ಹಾಗೂ ಟ್ರಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಟ್ರಾö್ಯಕ್ಟರ್‌ನಲ್ಲಿದ್ದ ಶಾಂತಕುಮಾರ್ ಮೃತಪಟ್ಟಿದ್ದಾರೆ. ಬೈಲುಕೊಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.