ಕೂಡಿಗೆ, ಸೆ. ೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದಲ್ಲಿ ಕಾಡಾನೆ ಮಲ್ಲಿಕಾರ್ಜುನ ಎಂಬುವರಿಗೆ ಸೇರಿದ ಮನೆಯ ಮುಂಭಾಗದ ಗೇಟ್‌ನ್ನು ತುಳಿದು ಜಮೀನಿನಲ್ಲಿ ಬೆಳೆಸಲಾಗಿದ್ದ ಮರಗೆಣಸು ಮತ್ತು ಬಾಳೆ ಬೆಳೆಗಳನ್ನು ತುಳಿದು ತಿಂದು ನಷ್ಟಪಡಿಸಿದೆ. ಕುಶಾಲನಗರ ಅತ್ತೂರು ವಲಯ ಅರಣ್ಯ ಅಧಿಕಾರಿ ಅನಿಲ್ ಡಿಸೋಜ, ಸಿಬ್ಬಂದಿ ಸಚಿನ್ ಸ್ಥಳ ಪರಿಶೀಲನೆ ನಡೆಸಿದರು.