ಮಡಿಕೇರಿ, ಸೆ. ೪: ಶಿಕ್ಷಕರ ದಿನದ ಅಂಗವಾಗಿ ನೀಡಲಾಗುವುದು ಅತ್ಯುತ್ತಮ ಶಿಕ್ಷಕ ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿಗೆ ಜಿಲ್ಲೆಯ ಶಿಕ್ಷಕರು ಆಯ್ಕೆಯಾಗಿದ್ದು, ತಾ. ೫ ರಂದು (ಇಂದು) ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸೋಮವಾರಪೇಟೆ ತಾಲೂಕಿನ ನೇರುಗಳಲೆ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಎಸ್.ಎಂ. ಇಬ್ರಾಹಿಂ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಜಿಲ್ಲಾ ಪ್ರಶಸ್ತಿಗೆ ಮಡಿಕೇರಿ ತಾಲೂಕಿನ ಕೈಕಾಡು ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಿ.ಆರ್. ಭಾರತಿ, ಕೆ.ಪಿ. ಬಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಡಿ.ಕೆ. ರೇಖಾಕುಮಾರಿ, ಬಲ್ಲಮಾವಟಿ ನೇತಾಜಿ ಶಾಲೆಯ ಶಿಕ್ಷಕ ಮೆಹಬೂಬ್ ಸಾಬ್, ಬೆಟ್ಟಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಉದಯ ಕುಮಾರ್, ಸೋಮವಾರಪೇಟೆ ತಾಲೂಕಿನ ನ್ಯಾಯದಹಳ್ಳ ಸರಕಾರಿ ಪ್ರಾಥಮಿಕ ಶಾಲೆಯ ಮಂಜುಳಾಮಣಿ, ಗೌಡಳ್ಳಿ ಪ್ರೌಢಶಾಲೆಯ ಶಿಕ್ಷಕ ದಿನೇಶ್ ಬಿ.ಬಿ., ವೀರಾಜಪೇಟೆ ತಾಲೂಕಿನ ಬೈರಂಬಾಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹೆಚ್.ಎನ್. ಪದ್ಮ, ಬಿ. ಚೂರಿಕಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ.ಕೆ. ಜಯಲಕ್ಷಿö್ಮ, ಅಮ್ಮತ್ತಿ ಒಂಟಿಯAಗಡಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವಿ.ವಿ. ಮಂಜುನಾಥ್, ಬಿಳುಗುಂದ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಹೆಚ್.ಜಿ. ಸಾವಿತ್ರಿ ಆಯ್ಕೆಯಾಗಿದ್ದಾರೆ.