ಮಡಿಕೇರಿ, ಸೆ.೨: ಪಾರಾಣೆ ಪ್ರೌಢ ಶಾಲೆಯಲ್ಲಿ ಸ್ವಾತಂತ್ರö್ಯ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹೈಕೋರ್ಟ್ ವಕೀಲ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟ ಹೋರಾಟಗಾರರ ಪರಿಶ್ರಮದ ಕುರಿತು ವಿವರಿಸಿದರು.

ಇದೇ ಸಂದರ್ಭ ಶಾಲೆಯ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದರು.ಸಿ.ಆರ್.ಪಿ ಉಮ್ಮರ್ ಅವರು ಕೂಡ ಶಾಲೆಯ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದರು.

ಶಾಲೆಯ ಅಧ್ಯಕ್ಷ ಪೆಬ್ಬಾಟಂಡ.ಎ.ಪೆಮ್ಮಯ್ಯ, ಉಪಾಧ್ಯಕ್ಷ ಬೊಳಕಾರಂಡ ನಾಣಯ್ಯ, ಕಾರ್ಯದರ್ಶಿ ಮುಕ್ಕಾಟಿರ ಪುಟ್ಟು ಕುಶಾಲಪ್ಪ, ಸದಸ್ಯರುಗಳಾದ ಪಾಲಂದಿರ ಮಂದಣ್ಣ, ಬೊಳ್ಳಂಡ ಬಿದ್ದಪ್ಪ, ಕೋಚಮಂಡ ತಮ್ಮಯ್ಯ, ಕೊಣಂಜಗೇರಿ ಗ್ರಾ.ಪಂ ಸದಸ್ಯ ಕಾದೀರ ಪಳಂಗಪ್ಪ, ಮಾಜಿ ಅಧ್ಯಕ್ಷರಾದ ವನಿತ, ಮಾಜಿ ಸದಸ್ಯರುಗಳಾದ ಬೊಳ್ಳಂಡ ಗಿರೀಶ್, ನಾಯಕಂಡ ಮುತ್ತಪ್ಪ, ಬಲ್ಯಾಟಂಡ ಕುಟ್ಟಯ್ಯ, ಶಾಲೆಯ ಮುಖ್ಯ ಶಿಕ್ಷಕಿ ಎ.ಜಿ.ರಜನಿ, ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಎಸ್.ತಿಪ್ಪೇಸ್ವಾಮಿ ಸ್ವಾಗತಿಸಿ, ನಿರೂಪಿಸಿದರು, ಹೆಚ್.ಎಲ್.ಬೈರ ವಂದಿಸಿದರು.