ಗೋಣಿಕೊಪ್ಪ ವರದಿ: ಕಿರುಗೂರು ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಕಿರುಗೂರು ಗ್ರಾಮ ಪಂಚಾಯಿತಿ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ೩೫ ಸ್ಪರ್ಧಿಗಳು ಭಾಗವಹಿಸಿ ಗಮನ ಸೆಳೆದರು.

ಸಬ್ ಜೂನಿಯರ್ ವಿಭಾಗದಲ್ಲಿ ಪಿ.ಎಸ್. ಗೌರವ್ ಪ್ರಥಮ, ಪುತ್ತಾಮನೆ ಜೆ. ತನೀಶ್ ದ್ವಿತೀಯ, ಗ್ರಂಥ್ ಗಣಪಮಯ್ಯ ತೃತೀಯ, ಜೂನಿಯರ್ ವಿಭಾಗದಲ್ಲಿ ಕೆ.ಸಿ. ತಂಗಮ್ಮ (ಪ್ರ), ದಿಶಾ (ದ್ವಿ), ಪುತ್ತಾಮನೆ ಪ್ರಿನ್ಸ್ ಪೊನ್ನಮಯ್ಯ (ತೃ), ಹಿರಿಯರ ವಿಭಾಗದಲ್ಲಿ ಪಿ.ಡಿ. ಜೀವನ್ (ಪ್ರ), ಹೆಚ್.ವಿ. ಸೂರಜ್ (ದ್ವಿ), ಬಿ.ಕೆ. ಜೀತು (ತೃ) ಸ್ಥಾನ ಪಡೆದರು.

ಕಿರುಗೂರು ಗ್ರಾ.ಪಂ. ಅಧ್ಯಕ್ಷ ಪುತ್ತಾಮನೆ ಜೀವನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ. ಶಫೀಕ್, ಸದಸ್ಯರಾದ ಸುನಿತಾ, ಕೆ.ಕೆ. ರವಿ, ಕಾರ್ಯದರ್ಶಿ ಎ.ಪಿ. ರಾಧಾ, ಗ್ರಂಥಾಲಯ ಮೇಲ್ವಿಚಾರಕಿ ಭವ್ಯ ಬಹುಮಾನ ವಿತರಿಸಿದರು. ಯಕ್ಷತಾ, ಕೌಶಿಕ್, ಕುಶಿ ಕಾವೇರಮ್ಮ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.ನಾಪೋಕ್ಲು: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಚೆಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಕಾರ್ಯಕ್ರಮ ಉದ್ಘಾಟಿಸಿದರು. ನಾಪೋಕ್ಲು ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಹಮದ್ ಖುರೇಶಿ, ಪಿಡಿಒ ಚೋಂದಕ್ಕಿ, ತಾಲೂಕು ಪಂಚಾಯಿತಿ ಸಂಯೋಜಕಿ ಅಕ್ಷಿತ, ಪೊಲೀಸ್ ಆರಕ್ಷಕ ಅಧಿಕಾರಿ ಮಂಜುನಾಥ್ ಹಾಗೂ ವಿವಿಧ ಶಾಲೆಗಳ ಶಿಕ್ಷಕ ವೃಂದ ಹಾಗೂ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಫಲಿತಾಂಶ: ಚದುರಂಗ ಸ್ಪರ್ಧೆಯಲ್ಲಿ ಒಟ್ಟು ೩೨ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಬ್ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ವಾಸಿಂ ಕೆ.ಎಸ್., ದ್ವಿತೀಯ ಸ್ಥಾನ ತೌಸಿಫ್ ಕೆ.ಎಂ., ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಎಸ್.ಕೆ. ಮಾನ್ಯ ಕಾವೇರಮ್ಮ, ದ್ವಿತೀಯ ಸ್ಥಾನ ರೋಹನ್ ಮಾಚಯ್ಯ, ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಮುತ್ತಪ್ಪ, ದ್ವಿತೀಯ ಸ್ಥಾನ ಪ್ರಸಾದ್ ಪಡೆದುಕೊಂಡರು.

ತೀರ್ಪುಗಾರರಾಗಿ ಸೇಕ್ರೆಡ್ ಹಾರ್ಟ್ ಶಾಲೆಯ ಶಿಕ್ಷಕ ಸುನಿಲ್ ಹಾಗೂ ಶ್ರೀ ರಾಮ ಟ್ರಸ್ಟ್ ಶಾಲೆಯ ಶಿಕ್ಷಕಿ ಸರಿತಾ ಪಾಲ್ಗೊಂಡಿದ್ದರು.ಕೂಡಿಗೆ: ಕುಶಾಲನಗರ ತಾಲೂಕು ಮಟ್ಟದ ಚದುರಂಗ ಸ್ಪರ್ಧೆ ಕಾರ್ಯಕ್ರಮ ಕೂಡಿಗೆಯ ಅಂಜೆಲ ವಿದ್ಯಾನಿಕೇತನ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸ್ಪರ್ಧೆಗಳು ನಡೆಯುವುದರಿಂದ ವಿದ್ಯಾರ್ಥಿಗಳ ಏಕಾಗ್ರತೆಗೆ ಪೂರಕವಾಗುವುದು ಎಂದರು.

ಕುಶಾಲನಗರ ತಾಲೂಕಿನ ೧೭ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳು ಚದುರಂಗ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.ಮುಳ್ಳೂರು: ಸಮೀಪದ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ‘ಓದುವ ಬೆಳಕು’ ಯೋಜನೆ ವತಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಚೆಸ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಯಿತು. ಸಾರ್ವಜನಿಕ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಚೆಸ್ ಪಂದ್ಯಾವಳಿಯನ್ನು ಆಲೂರು-ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷೆ ದಮಯಂತಿ ಕರುಂಬಯ್ಯ ಉದ್ಘಾಟಿಸಿದ ಬಳಿಕ ಮಾತನಾಡಿ, ಚೆಸ್ ಭಾರತದ ಪುರಾತನ ಆಟವಾಗಿದ್ದು ಬುದ್ಧಿಶಕ್ತಿ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಸಾರ್ವಜನಿಕ ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕಿ ವರ್ಷಿತ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಬೌದ್ಧಿಕ ಬೆಳವಣಿಗೆಯ ವೃದ್ಧಿಗಾಗಿ ಗ್ರಂಥಾಲಯಗಳನ್ನು ಪ್ರತಿಯೊಂದು ಗ್ರಾ.ಪಂ.ಯಲ್ಲಿ ತೆರೆಯಲಾಗಿದೆ. ಗ್ರಂಥಾಲಯ ಇಲಾಖೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಓದುಗರಿಗಾಗಿ ಉಪಯುಕ್ತ ಪುಸ್ತಕಗಳ ವ್ಯವಸ್ಥೆ ಮಾಡಿಕೊಟ್ಟಿರುವ ಜೊತೆಯಲ್ಲಿ ಮಾಹಿತಿ ತಂತ್ರಜ್ಞಾನದ ಮೂಲಕ ಮಾಹಿತಿ ಪಡೆದುಕೊಳ್ಳುವ ಸಲುವಾಗಿ ಡಿಜಿಟಲ್ ಗ್ರಂಥಾಲಯವನ್ನಾಗಿ ಅಭಿವೃದ್ಧಿಪಡಿಸಿದೆ ಎಂದರು. ಗ್ರಂಥಾಲಯ ಇಲಾಖೆ ಓದುವ ಬೆಳಕು ಯೋಜನೆಯನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿ ಮತ್ತು ಸಾರ್ವಜನಿಕ ಓದುಗರಿಗಾಗಿ ಚೆಸ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರು, ಪಿಡಿಒ ಹರೀಶ್ ಹಾಗೂ ಇತರರು ಹಾಜರಿದ್ದರು. ಆಲೂರು-ಸಿದ್ದಾಪುರ ಸರಕಾರಿ ಪ.ಪೂ. ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಂದ ೨೫ ಮಂದಿ ವಿದ್ಯಾರ್ಥಿಗಳು ಮತ್ತು ೭ ಮಂದಿ ಸಾರ್ವಜನಿಕರು ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.