ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ ತಾಲೂಕು ಪಂಚಾಯಿತಿ ಇವರ ವತಿಯಿಂದ ‘ಓದುವ ಬೆಳಕು’ ಕಾರ್ಯಕ್ರಮದ ಭಾಗವಾಗಿ "ಗ್ರಾಮ ಚದುರಂಗ ಆಟ ಆಡೋಣ" ಅಭಿಯಾನದ ಅಂಗವಾಗಿ ನಗರದ ಸಾಮರ್ಥ್ಯ ಸೌಧ ಕಟ್ಟಡದಲ್ಲಿ ಆಯೋಜಿಸಲಾಗಿದ್ದ ಮಡಿಕೇರಿ ತಾಲೂಕು ಮಟ್ಟದ ಚದುರಂಗ ಸ್ಪರ್ಧೆ ಕಾರ್ಯಕ್ರಮಕ್ಕೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ಬಾಳೆಲೆ: ಬಾಳೆಲೆ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಚದುರಂಗ ಆಟ ಆಡೋಣ ಅಭಿಯಾನದಡಿ ಹೇಮಂತ್, ವೈ.ಕೆ. ಸಿದ್ದು, ಅಡ್ಡೇಂಗಡ ಅರ್ಜುನ್ ಪೊನ್ನಣ್ಣ ಪ್ರಶಸ್ತಿ ಪಡೆದರು. ತೀರ್ಪುಗಾರರಾಗಿ ಮುಕ್ಕಾಟಿರ ಮುತ್ತಣ್ಣ ಕಾವೇರಪ್ಪ, ಪೋಡಮಾಡ ನವೀನ್ ನಾಣಯ್ಯ, ಚಕ್ಕೇರ ದಿಲೀಪ್ ಬೋಪಣ್ಣ ಕಾರ್ಯನಿರ್ವಹಿಸಿದರು.ಚೆಟ್ಟಳ್ಳಿ: ವೀರಾಜಪೇಟೆ ತಾಲೂಕಿನ ಹಾಲುಗುಂದ ಗ್ರಾಮ ಪಂಚಾಯಿತಿಯಲ್ಲಿ "ಓದುವ ಬೆಳಕು" ಕಾರ್ಯಕ್ರಮದ ಭಾಗವಾಗಿ ಗ್ರಾಮ ಪಂಚಾಯಿತಿ ಮಟ್ಟದ 'ಚದುರಂಗ' ಸ್ಪರ್ಧೆ ನಡೆಯಿತು.
೧ ರಿಂದ ೭ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಬ್ ಜೂನಿಯರ್ ವಿಭಾಗದಲ್ಲಿ ಗಗನ್ ಬಿ.ಎ. ಪ್ರಥಮ, ಅಫ್ನ ಹೆಚ್.ಹೆಚ್. ದ್ವಿತೀಯ, ೮ ರಿಂದ ೧೨ನೇ ತರಗತಿವರೆಗಿನ ವಿದ್ಯಾರ್ಥಿಗಳ ಜೂನಿಯರ್ ವಿಭಾಗದಲ್ಲಿ ರಿಷಾದ್ ಕೆ.ಹೆಚ್. ಪ್ರಥಮ, ಸಲ್ಮಾನ್ ಫಾರಿಸ್ ಯು.ಕೆ. ದ್ವಿತೀಯ ಸ್ಥಾನ, ಸೀನಿಯರ್ಸ್ ವಿಭಾಗದಲ್ಲಿ ಮಂಜುನಾಥ್ ಎಂ.ಎಸ್. ಪ್ರಥಮ, ಹನೀಫ್ ಹೆಚ್.ಹೆಚ್. ದ್ವಿತೀಯ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷೆ ಸೀತಮ್ಮ, ಉಪಾಧ್ಯಕ್ಷ ದಿನೇಶ್, ಅಭಿವೃದ್ಧಿ ಅಧಿಕಾರಿ ಕಾಂಚನ, ಕಾರ್ಯದರ್ಶಿ ಕವಿತಾ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಂಥಪಾಲಕಿ ಪ್ರಿಯ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.*ಗೋಣಿಕೊಪ್ಪ: ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಕಾರ್ಯಕ್ರಮದಲ್ಲಿ ತಿತಿಮತಿ ಲ್ಯಾಂಪ್ಸ್ ಅಕಾಡೆಮಿಯ ಶಾಲೆಯ ವಿದ್ಯಾರ್ಥಿಗಳು ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡರು.
ಜಿಲ್ಲಾ ಪಂಚಾಯಿತಿ, ತಿತಿಮತಿ ಗ್ರಾಮ ಪಂಚಾಯಿತಿ, ಗ್ರಂಥಾಲಯ ಆಯೋಜನೆಯಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಪ್ರೌಢಶಾಲೆ ವಿಭಾಗದ ಸಂಜನ್ ಭಾರದ್ವಜ್ ಪ್ರಥಮ ಸ್ಥಾನ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಫರ್ಹಾನ್ ಪ್ರಥಮ, ನೀರಿಕ್ಷ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಅಭಿಶೇಕ್ ಬಿ.ಎಲ್., ಸಿನಾನ್ ಪಿ.ಎಸ್., ಸಮಧಾನಕರ ಬಹುಮಾನ ಪಡೆದುಕೊಂಡರು.ನಾಪೋಕ್ಲು: ಇಲ್ಲಿಗೆ ಸಮೀಪದ ಕುಂಜಿಲ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಗ್ರಂಥಾಲಯದ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಗ್ರಾಮ ಚದುರಂಗ ಆಟ ಆಡೋಣ ಬನ್ನಿ ಅಭಿಯಾನ ಜರುಗಿತು. ಇದರಲ್ಲಿ ೨೫ ಸ್ಪರ್ಧಿಗಳಲ್ಲಿ ಸಬ್ ಜೂನಿಯಾರ್ ವಿಭಾಗದಲ್ಲಿ ಪ್ರಥಮ ಶಿವಾನಿ ಎಂ.ಸಿ., ದ್ವಿತೀಯ ಹಭೀಬ್ ಪಿ.ಎ., ಜೂನಿಯರ್ ವಿಭಾಗದಲ್ಲಿ ಪ್ರಥಮ ಪೊನ್ನಪ್ಪ ಎ.ಕೆ., ದ್ವಿತೀಯ ಸಭೀರ್ ಪಿ.ಎ., ಸೀನಿಯರ್ ವಿಭಾಗದಲ್ಲಿ ಪ್ರಥಮ ವಿನೋದ್ ಕೆ.ಬಿ., ದ್ವಿತೀಯ ಮುಸ್ತಫ ಎಂ.ಯು. ಪಡೆದುಕೊಂಡರು. ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ತಾಲೂಕು ಮಟ್ಟದಲ್ಲಿ ಪ್ರತಿನಿಧಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ವಹಿಸಿದ್ದು ವಿಜೇತರಾದವರಿಗೆ ಅರ್ಹತಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್, ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂಣಚ್ಚ, ಚೆಯ್ಯಂಡಾಣೆ ಗ್ರಾಮ ಪಂಚಾಯಿತಿ ಸದಸ್ಯ ಚೊಯಮಾಡಂಡ ಪೊನ್ನಪ್ಪ ಹಾಗೂ ಪಂಚಾಯಿತಿ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಇನ್ನಿತರರು ಹಾಜರಿದ್ದರು.