ಶನಿವಾರಸAತೆ, ಸೆ. ೨: ಹೆಲ್ಮೆಟ್ ಧರಿಸದೆ ಹಾಗೂ ಚಾಲನಾ ಪತ್ರ ಇಲ್ಲದೆ, ಶನಿವಾರಸಂತೆ ಪಟ್ಟಣದಲ್ಲಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ ಸವಾರರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಸುಮಾರು ೧೨ ಮಂದಿಗೆ ಒಟ್ಟು ರೂ. ೧೮,೦೦೦ ದಂಡವನ್ನು ಪೊಲೀಸರು ವಿಧಿಸಿದ್ದಾರೆ.

ಶನಿವಾರಸಂತೆ ಹಾಗೂ ಗುಡುಗಳಲೆಯಲ್ಲಿ ಯಾವುದೇ ದಾಖಲಾತಿಗಳಿಲ್ಲದೆ ಕೆಲವು ಆಟೋ ರಿಕ್ಷಾಗಳು ಓಡಾಡುತ್ತಿರುವ ಬಗ್ಗೆ ದೂರುಗಳಿದ್ದು, ಅಂತಹ ಆಟೋ ರಿಕ್ಷಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹೇಳಿದರು. ವಾಹನ ಮಾಲೀಕರು ತಮ್ಮ ವಾಹನಗಳ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಎಚ್ಚರಿಸಿದರು. ಈ ಸಂದರ್ಭ ಸಿಬ್ಬಂದಿಗಳಾದ ಷರೀಫ್, ಲೋಹಿತ್, ಶನಂತ, ಶಣ್ಮುಖ ನಾಯಕ್, ಲೋಕೇಶ್ ಕುಮಾರ್ ಇದ್ದರು.