ಭಾಗಮಂಡಲ, ಸೆ. ೧: ಚೇರಂಬಾಣೆ ಸಮೀಪದ ಕೊಳಗದಾಳು ಗ್ರಾಮದ ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಹುಂಡಿ ಹಣ ಕಳವು ಮಾಡಿದ್ದಲ್ಲದೆ, ಪಕ್ಕದಲ್ಲೇ ಹರಿಯುವ ನದಿಯ ದೇವರ ಗುಂಡಿಯಲ್ಲಿದ್ದ ದೇವರ ಮೀನುಗಳನ್ನು ಬೇಟೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಅಪ್ರಾಪ್ತ ಬಾಲಕ ಸೇರಿದಂತೆ ಈರ್ವರನ್ನು ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿರುವ ಪ್ರಸಂಗ ನಡೆದಿದೆ.
ಪಾಕಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವರ್ಷಂಪ್ರತಿ ಡಿಸೆಂಬರ್ ೧೫ ಅಥವಾ ೧೬ ರಂದು ಉತ್ಸವ ನಡೆದು ಬಳಿಕ ಫೆಬ್ರವರಿಯಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತದೆ. ಇಲ್ಲಿ ಪ್ರತಿನಿತ್ಯ ಬೆಳಿಗ್ಗೆ ಪೂಜೆ ನಡೆಯುತ್ತದೆ. ನಿನ್ನೆ ದಿನ ಗ್ರಾಮದಲ್ಲಿ ಸಾವು ಸಂಭವಿಸಿದ್ದರಿAದ ಪೂಜೆಯನ್ನು ಮಧ್ಯಾಹ್ನದ ನಂತರ ನಡೆಸಲು ನಿರ್ಧರಿಸಲಾಗಿತ್ತು. ಹಾಗಾಗಿ ದೇವಾಲಯದ ಬಳಿ ಯಾರೂ ಕೂಡ ಇರಲಿಲ್ಲ. ಮಧ್ಯಾಹ್ನ ವೇಳೆಗೆ ಪ್ರತೀತಿಯಂತೆ ಅರ್ಚಕರು ನದಿಯಲ್ಲಿರುವ ದೇವರ ಗುಂಡಿಯಲ್ಲಿರುವ ಮೀನುಗಳಿಗೆ ಅಕ್ಕಿ ಹಾಕಲೆಂದು ತೆರಳಿದಾಗ ನದಿಯಲ್ಲಿ ಮೀನು ಹಿಡಿಯುತ್ತಿದ್ದವರು ಓಡಿ ಹೋಗಿದ್ದನ್ನು ಕಂಡಿದ್ದಾರೆ. ಕೂಡಲೇ ಅರ್ಚಕ ಶ್ರೀನಿವಾಸ್‌ಮೂರ್ತಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಓಡಿ ಹೋದವರನ್ನು ಬೆನ್ನಟ್ಟಿದ ಸಂದರ್ಭ ಮಡಿಕೇರಿಯ ರಾಜರಾಜೇಶ್ವರಿ ನಗರದ ನಿವಾಸಿ ನಿಸ್ಸಾರ್ ಮತ್ತು ಆತನೊಂದಿಗಿದ್ದ ಅಪ್ರಾಪ್ತ ಬಾಲಕನನ್ನು ಹಿಡಿದು ಭಾಗಮಂಡಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
(ಮೊದಲ ಪುಟದಿಂದ) ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಸಿದ್ಧಿಯಿದೆ
ಪಾಕ ದೇವಾಲಯ ಪ್ರಸಿದ್ಧಿ ಹೊಂದಿದ್ದು, ಹೆಚ್ಚಿಗೆ ಹರಕೆ, ಕಾಣಿಕೆಗಳು ಸಲ್ಲಿಸಲ್ಪಡುತ್ತವೆ. ಇಲ್ಲಿ ದೇವಾಲಯದ ಅರ್ಚಕರು ಪ್ರತಿ ದಿನ ನದಿಯ ಮೀನುಗಳಿಗೆ ಅಕ್ಕಿ ಹಾಕಿ ನಂತರ ನದಿಯಿಂದ ನೀರು ತಂದು ಪೂಜೆ ಸಲ್ಲಿಸುತ್ತಾರೆ . ವಾರ್ಷಿಕ ಉತ್ಸವದ ಸಂದರ್ಭ ಬಹಳಷ್ಟು ಮೀನುಗಳು ಕಾಣಸಿಗಲಿದ್ದು, ಭಕ್ತರು ಮೀನಿಗೆ ಅಕ್ಕಿ ಹಾಕಿ ಹರಕೆ ಸಲ್ಲಿಸುವ ಪ್ರತೀತಿಯಿದೆ.
ನದಿಗೆ ಅಧಿಕ ಮಹತ್ವವಿದ್ದು, ಮೀನುಗಳು ದೇವಾಲಯದ ನಂಬಿಕೆಯ ಪ್ರತೀಕಗಳಾಗಿವೆ.
ಇತ್ತೀಚೆಗೆ ಮೀನುಗಳ ಸಂಖ್ಯೆಯಲ್ಲಿ ಕಡಿಮೆ ಯಾಗುತ್ತಿರುವುದು ಕಂಡುಬAದಿದ್ದು, ಬಂದಿತ ಆರೋಪಿಗಳು
ಇಲ್ಲಿಗೆ ಬಂದು ಮೀನು ಕೊಂಡೊಯ್ಯುತ್ತಿದ್ದು ಇದರಿಂದ ಮೀನಿನ ಸಂಖ್ಯೆ ಕಡಿಮೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಪಿಗಳಿಂದ ಮೀನುಗಳನ್ನು ಸಂಗ್ರಹಿಸಿದ ಪೊಲೀಸರು ಅಂತ್ಯಸAಸ್ಕಾರ ನೆರವೇರಿಸಿದರು.
ಹುಂಡಿ ಹಣ ಕಳವು
ಆರೋಪಿಗಳು ನಾಗದೇವರ ಭಂಡಾರದ ಹುಂಡಿಯಲ್ಲಿದ್ದ ಹಣವನ್ನು ನಕಲಿ ಕೀ ಬಳಸಿ ದೋಚಿರುವದು ಇದೇ ಸಂದರ್ಭದಲ್ಲಿ ಗೋಚರಿಸಿದೆ. ಅವರುಗಳ ಬಳಿಯಿದ್ದ ಬ್ಯಾಗ್‌ನಲ್ಲಿ ಹುಂಡಿಯಲ್ಲಿದ್ದ ಚಿಲ್ಲರೆ ಹಣ ಹಾಗೂ ನೋಟುಗಳು ಸಿಕ್ಕಿವೆ.
ಪ್ರತಿದೂರು
ಗ್ರಾಮಸ್ಥರು ನೀಡಿದ ದೂರಿನನ್ವಯ ಪೊಲೀಸರು ನಿಸಾರ್ ಹಾಗೂ ಬಾಲಕನ ಮೇಲೆ ದೂರು ದಾಖಲಿಸಿಕೊಂಡಿದ್ದು, ಇತ್ತ ನಿಸಾರ್ ಕೂಡ ಗ್ರಾಮಸ್ಥರ ಮೇಲೆ ಪ್ರತಿ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ವಿರುದ್ಧ ಕೂಡ ದೂರು ದಾಖಲಾಗಿದೆ.
-ಸುನಿಲ್ ಕುಯ್ಯಮುಡಿ