ಕುಶಾಲನಗರ, ಸೆ. ೧ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟೆಕ್ವಾಂಡೋ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಕುಶಾಲನಗರದ ವಿದ್ಯಾರ್ಥಿಗಳು ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.
ಕುಶಾಲನಗರದ ಡೆಕ್ಕನ್ ಟೆಕ್ವಾಂಡೊ ಅಕಾಡೆಮಿ ವಿದ್ಯಾರ್ಥಿಗಳಾದ ಸಿಂಚನ, ಉತ್ಕರ್ಷ, ಚಾರ್ವಿ ಸುಬ್ಬಯ್ಯ, ವೈಭವಿ ದಿನೇಶ್ ಅವರುಗಳು ಚಿನ್ನದ ಪದಕ ಪಡೆದುಕೊಂಡಿದ್ದು ರಿತೇಶ್ ಗೌಡ ಬೆಳ್ಳಿಯ ಪದಕ ಗಳಿಸಿಕೊಂಡಿದ್ದಾರೆ. ಅಕಾಡೆಮಿಯ ಮುಖ್ಯ ತರಬೇತುದಾರ ಹಾಗೂ ಅಂರ್ರಾಷ್ಟಿçÃಯ ಟೆಕ್ವಾಂಡೊ ತೀರ್ಪುಗಾರರಾದ ಮುತ್ತಪ್ಪ ಲಕ್ಷö್ಮಣ ಹುದೇರಿ ಈ ಬಗ್ಗೆ ಮಾತನಾಡಿ, ಕೇವಲ ಮೂರು ತಿಂಗಳಲ್ಲಿ ಈ ಸಾಧನೆ ಮಾಡಲಾಗಿದೆ, ವಿದ್ಯಾರ್ಥಿ ಗಳನ್ನು ರಾಷ್ಟç ಹಾಗೂ ಅಂರ್ರಾಷ್ಟಿçÃಯ ಮಟ್ಟದಲ್ಲಿ ಭಾಗವಹಿಸಲು ಸಜ್ಜುಗೊಳಿ ಸಲಾಗುತ್ತಿದೆ. ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಲು ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.