ಕಡಂಗ, ಸೆ. ೧: ನರಿಯಂದಡ ಗ್ರಾಮ ಪಂಚಾಯಿತಿಯ ಅರಪಟ್ಟು ಮತ್ತು ಪೊದವಾಡ ಗ್ರಾಮದ ವಾರ್ಡ್ ಸಭೆಯು ಪಾಂಡAಡ ರಾಣಿ ಗಣಪತಿ ಮತ್ತು ವಾಣಿ ಇವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಗ್ರಾಮಸ್ಥರಾದ ಕಾರ್ಯಪ್ಪ ಮಾತನಾಡಿ ಕಳೆದ ಎರಡು ತಿಂಗಳಿನಿAದ ಮನೆಗಳಿಗೆ ಕುಡಿಯುವ ನೀರು ಇಲ್ಲದಿದ್ದರೂ ಪಂಚಾಯಿತಿ ನೀರಿನ ಬಿಲ್ ನೀಡಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯಿತಿ ಅಧಿಕಾರಿ ಆ ಭಾಗದಲ್ಲಿ ನೀರಿನ ಪೈಪುಗಳು ದುಸ್ಥಿತಿಗೊಂಡಿದ್ದು ಕೂಡಲೇ ಅದನ್ನು ಸರಿಪಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಕಾಡಾನೆ ಹಾವಳಿಯಿಂದ ಸುತ್ತಮುತ್ತಲಿರುವ ಗ್ರಾಮಗಳಲ್ಲಿ ನಷ್ಟ ಉಂಟಾಗಿದ್ದು ಗ್ರಾಮ ಪಂಚಾಯಿತಿ ಇದರ ಬಗ್ಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಸದಸ್ಯರು ಈ ವಿಷಯಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಗುವುದು ಎಂದು ಹೇಳಿದರು. ಸ್ಥಳೀಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಗೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ನೀಡಬೇಕು ಎಂದು ಮನವಿ ಮಾಡಿದ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ವಿನೋದ್ ನಾಣಯ್ಯ ಮಾತನಾಡಿ ನೀರಿನ ವ್ಯವಸ್ಥೆಯ ಕೆಲಸಗಳು ನಡೆಯುತ್ತಿದ್ದು ಎರಡು ತಿಂಗಳ ಒಳಗಾಗಿ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಗ್ರಾಮಸ್ಥ ಷಂಶುದ್ದೀನ್ ಮಾತನಾಡಿ, ಅಪ್ಪಿರ ತೋಟ ಮತ್ತು ಸುತ್ತಮುತ್ತಲಿರುವ ಮನೆಗಳಿಗೆ ತೆರಳುವ ಕಾಂಕ್ರಿಟ್ ರಸ್ತೆ ನಿರ್ಮಾಣ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ವಿನೋದ್ ಕೂಡಲೇ ರಸ್ತೆಯನ್ನು ಸರಿಪಡಿಸಲಾಗುವುದೆಂದು ಭರವಸೆ ನೀಡಿದರು.

ಕಡಂಗ ಮತ್ತು ಚೆಯ್ಯಂಡಾಣೆ ಮುಖ್ಯರಸ್ತೆಯು ಹಲವಾರು ವರ್ಷಗಳಿಂದ ಹದೆಗಟ್ಟಿದ್ದು ಸಂಬAಧಪಟ್ಟ ಇಲಾಖೆಗೆ ಪಂಚಾಯಿತಿ ವತಿಯಿಂದ ಮನವಿ ಮಾಡಬೇಕೆಂದು ಗ್ರಾಮಸ್ಥರು ಬೇಡಿಕೆ ಮುಂದಿಟ್ಟರು. ಜಲಜೀವನ್ ಮಿಷನ್ ನ ಬಗ್ಗೆ ಪಂಚಾಯಿತಿ ಸದಸ್ಯರಾದ ವಿನೋದ್ ಮಾಹಿತಿ ನೀಡಿದರು. ಈ ಸಂದರ್ಭ ಪಂಚಾಯಿತಿ ಸದಸ್ಯರಾದ ಸುಬೀರ್ ಸಿಇ, ವಾಣಿ, ಪಾಂಡAಡ ರಾಣಿ, ವಿನೋದ್ ನಾಣಯ್ಯ, ಕವಿತಾ, ಪಿಡಿಒ ಆಶಾಕುಮಾರಿ, ಕಾರ್ಯದರ್ಶಿ ಬಿದ್ದಪ್ಪ, ದಿನೇಶ್, ಮತ್ತು ಗ್ರಾಮಸ್ಥರು ಹಾಜರಿದ್ದರು.