ಮಡಿಕೇರಿ, ಸೆ. ೧: ೨೦೨೨-೨೩ನೇ ಸಾಲಿನ ಮುಂಗಡ ಪತ್ರದಲ್ಲಿ ಸರಕಾರ ಕೊಡವ ಜನಾಂಗದ ಶ್ರೇಯೋಭಿವೃದ್ಧಿ ಗೆಂದು ಘೋಷಿಸಿದ್ದ ರೂ. ೧೦ ಕೋಟಿ ಅನುದಾನಕ್ಕೆ ಸಂಬAಧಿಸಿದAತೆ ವಿವಿಧ ಕ್ರಿಯಾಯೋಜನೆಗೆ ಸರಕಾರ ಇದೀಗ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ಈ ಕುರಿತು ತಯಾರಿಸಿ ಕಳುಹಿಸಲಾಗಿದ್ದ ಕ್ರಿಯಾಯೋಜನೆಯ ಪ್ರಸ್ತಾವನೆಗೆ ಸರಕಾರ ಒಪ್ಪಿಗೆ ನೀಡಿದೆ ಎಂದು ಎಂಎಲ್‌ಸಿ ಸುಜಾಕುಶಾಲಪ್ಪ ಅವರು ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬAಧಿಸಿದAತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ವಿ. ಅಕ್ಕಮಹಾದೇವಿ ಆದೇಶ ಹೊರಡಿಸಿರುವುದಾಗಿ ಸುಜಾ ಅವರು ಮಾಹಿತಿ ನೀಡಿದ್ದಾರೆ.
ರೂ. ೧೦ ಕೋಟಿ ಅನುದಾನಕ್ಕೆ ಕೆಲವೊಂದು ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಆಗಸ್ಟ್ ೮ ರಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಈ ಚರ್ಚೆಯ ಅನುಸಾರವಾಗಿ ಇದೀಗ ರೂ. ೧೦ ಕೋಟಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೂರು ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
(ಮೊದಲ ಪುಟದಿಂದ)
ಯೋಜನೆಗಳೇನು...?
ಬಾಳುಗೋಡುವಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟಕ್ಕೆ ಕೊಡವ ಸಾಂಸ್ಕೃತಿಕ ಮ್ಯೂಸಿಯಂ ಇತ್ಯಾದಿ ಅಭಿವೃದ್ಧಿಗಾಗಿ ರೂ. ೬ ಕೋಟಿಯನ್ನು ನಿಗದಿಪಡಿಸಲಾಗಿದೆ. ಭಾಗಮಂಡಲದಲ್ಲಿ ಕೊಡವ ಸಭಾಭವನ ನಿರ್ಮಾಣಕ್ಕೆ ರೂ. ೧ ಕೋಟಿಯನ್ನು ಮೀಸಲಿರಿಸಲಾಗಿದೆ. ಇದರೊಂದಿಗೆ ೩೦ ಕೊಡವ ಸಮಾಜಗಳ ಸಮುದಾಯ ಭವನಕ್ಕೆ ಪ್ರತಿ ಭವನಕ್ಕೆ ರೂ. ೧೦ ಲಕ್ಷದಂತೆ ೩ ಕೋಟಿ ಹಣವನ್ನು ಹಂಚಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಸುಜಾಕುಶಾಲಪ್ಪ ಅವರು ಈ ಪ್ರಯತ್ನದಲ್ಲಿ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳೂ ಕೈಜೋಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಬಾಳುಗೋಡುವಿನಲ್ಲಿ ಕೊಡವ ಸಾಂಸ್ಕೃತಿಕ ಸಮುಚ್ಚಯ ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ಇಲ್ಲಿ ಸಂಸ್ಕೃತಿ ಪ್ರತಿಬಿಂಬಿಸುವAತಹ ಮ್ಯೂಸಿಯಂ ನಿರ್ಮಾಣದಲ್ಲಿ ಪ್ರವಾಸಿಗರೂ ಭೇಟಿ ನೀಡುವ ಸಾಧ್ಯತೆ ಇದ್ದು, ಈ ಮೂಲಕ ಆದಾಯವೂ ಹೆಚ್ಚಳವಾಗುತ್ತದೆ. ಇದರಿಂದ ಶಾಲೆ ಮತ್ತಿತರ ಭವಿಷ್ಯದ ಯೋಜನೆಗಳಿಗೆ ಇದು ಅನುಕೂಲವಾಗಲಿದೆ. ಇದರೊಂದಿಗೆ ಭಾಗಮಂಡಲ - ತಲಕಾವೇರಿ ಕೊಡವರ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದು, ಇಲ್ಲಿ ಸಮುದಾಯ ಭವನ ನಿರ್ಮಾಣದಿಂದ ಭಕ್ತರಿಗೆ ಉಪಯೋಗವಾಗಲಿದೆ ಹಾಗೂ ೩೦ ಸಮಾಜಗಳ ಸಮುದಾಯ ಭವನದಿಂದಲೂ ಜನಾಂಗಕ್ಕೆ ಪ್ರಯೋಜನವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರುಗಳಿಗೆ ಈ ಬಗ್ಗೆ ಧನ್ಯವಾದ ಸಲ್ಲಿಸುವದಾಗಿಯೂ ಸುಜಾ ತಿಳಿಸಿದ್ದಾರೆ.