ಶನಿವಾರಸಂತೆ, ಆ. 30: ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-2022ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು.

ಸಂಘದ ಅಧ್ಯಕ್ಷ ಎಸ್.ಸಿ. ಶರತ್‍ಶೇಖರ್ ಮಾತನಾಡಿ ಸಂಘದಲ್ಲಿ 2287 ಮಂದಿ ಸದಸ್ಯರಿದ್ದು ಸದಸ್ಯರಿಂದ 1,27,94,456 ಪಾಲು ಹಣ ಹೊಂದಿರುತ್ತದೆ ಸಂಘದಲ್ಲಿ ಸದಸ್ಯರು ಮತ್ತು ಸದಸ್ಯೇತರರಿಂದ ರೂ. 16,92,03,867.86 ಠೇವಣಿಯನ್ನು ಪಡೆಯಲಾಗಿದ್ದು ವಿವಿದ ಸಾಲಗಳ ರೂಪದಲ್ಲಿ ಸದಸ್ಯರು ಮತ್ತು ಸದಸ್ಯೇತರರಿಗೆ ರೂ. 19,16,36,756.00 ವಿತರಣೆ ಮಾಡಲಾಗಿದೆ ಸಂಘದಲ್ಲಿ ಒಟ್ಟು ರೂ 2,64,10,955.00 ವ್ಯಾಪಾರ ವಹಿವಾಟು ನಡೆಸಿ ರೂ. 8,51,492.20 ವ್ಯಾಪಾರ ಲಾಭಗಳಿಸಲಾಗಿದೆ. ಸಂಘದಲ್ಲಿ ಕ್ಷೇಮ ನಿಧಿ ರೂ. 1,03,01,369.21 ಮತ್ತು ಇತರೆ ನಿಧಿಗಳು ರೂ. 1,80,98,483.28 ಇದ್ದು ಪ್ರಸಕ್ತ ಸಾಲಿಗೆ ರೂ 40,35,205.75 ನಿವ್ವಳ ಲಾಭಗಳಿಸಿರುತ್ತದೆ. ಸಂಘದಲ್ಲಿ ಕಳೆದ ಮಹಾಸಭೆಯಿಂದ ಇಲ್ಲಿಯವರೆಗೆ 14 ಜನ ಮೃತಪಟ್ಟ ಸದಸ್ಯರ ವಾರಸುದಾರರಿಗೆ ತಲಾ ರೂ. 10 ಸಾವಿರಗಳಂತೆ ಒಟ್ಟು ಮರಣ ನಿಧಿಯನ್ನು ಪಾವತಿಸಲಾಗಿದೆ. ನಬಾರ್ಡ್ ವತಿಯಿಂದ ರೂ. 1 ಕೋಟಿ 53 ಲಕ್ಷ ಮಂಜೂರಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿರುತ್ತದೆ ಎಂದು ಹೇಳಿದರು

ಬ್ಯಾಂಕಿನ ಸದಸ್ಯರುಗಳಿಂದ ಚಂದ್ರೇಗೌಡ, ಸಿ.ಕೆ. ಕೋಮಾರಪ್ಪ, ಎ.ಎಂ. ಆನಂದ, ಎಸ್.ವಿ. ಜಗದೀಶ್, ಅರವಿಂದ್, ಮಹ್ಮದ್‍ಪಾಶಾ ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷ್ಮಣ ಅವರುಗಳು ಬ್ಯಾಂಕಿನ ವಹಿವಾಟು ಆಗುಹೋಗುಗಳ ಬಗ್ಗೆ ಚರ್ಚಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷೆ ಸವಿತಾ ಸತೀಶ್, ನಿರ್ದೇಶಕರುಗಳಾದ ಟಿ.ಆರ್. ಗಿರೀಶ್, ಜೆ.ಸಿ. ಲೋಕೇಶ್, ಕೆ.ಪಿ. ಪುಷ್ಪ, ಬಿ.ಕೆ. ಚಂದ್ರು, ಡಿ.ಈ. ಬಸಪ್ಪ, ಎಸ್.ಎನ್. ರಘು, ಸಿ.ಜೆ. ಗಿರೀಶ್, ಎಸ್.ಯು. ಆನಂದ್, ಎಸ್.ಎಂ. ನಟರಾಜ್, ಎ.ಆರ್. ರಕ್ಷಿತ್, ಕೆ.ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ಹೆಚ್.ಟಿ ನವೀನ್‍ಕುಮಾರ್ ಹಾಜರಿದ್ದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್. ಈ. ದೊಡ್ಡಯ್ಯ ಹಾಜರಿದ್ದರು.