ಮಡಿಕೇರಿ, ಆ. 30: ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಅವರ ನೂತನ ಕಚೇರಿ ವೀರಾಜಪೇಟೆಯಲ್ಲಿ ಕಾರ್ಯಾರಂಭಗೊಳ್ಳುತ್ತಿದ್ದು, ಇದರ ಉದ್ಘಾಟನೆ ಸೆ. 1 ರಂದು (ನಾಳೆ) ನಡೆಯಲಿದೆ. ವೀರಾಜಪೇಟೆ ಪಿ.ಡಬ್ಲ್ಯೂ.ಡಿ. ಬಳಿ ನೂತನ ಎಂ.ಎಲ್.ಸಿ. ಕಚೇರಿ ಪ್ರಾರಂಭಿಸಲಾಗುತ್ತಿದೆ. ಜನರ ಸಮಸ್ಯೆಗೆ ಸ್ಪಂದಿಸಲು ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಕಚೇರಿ ಪ್ರಾರಂಭಿಸುತ್ತಿರುವುದಾಗಿ ಸುಜಾ ಅವರು ತಿಳಿಸಿದ್ದಾರೆ.