ಸೋಮವಾರಪೇಟೆ, ಆ. 30: ಇಲ್ಲಿನ ಲಯನ್ಸ್ ಕ್ಲಬ್ ಸೋಮವಾರಪೇಟೆ ಮತ್ತು ಪುಷ್ಪಗಿರಿ ರೈತ ಉತ್ಪಾದಕರ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಾಜೂರಿನ ಹರಿಹರ ಯುವಕ ಸಂಘದ ಸಭಾಂಗಣದಲ್ಲಿ ಕಾಫಿ, ಕಾಳುಮೆಣಸು ಬೆಳೆ ಕಾರ್ಯಾಗಾರ ನಡೆಯಿತು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸಿ.ಕೆ. ರೋಹಿತ್ ವಹಿಸಿದ್ದರು. ಬೆಳೆ ಗಾರರಿಗೆ ಕಾಫಿ ಮತ್ತು ಕಾಳು ಮೆಣಸಿನ ಬೇಸಾಯದ ಕ್ರಮ, ರೋಗ ಬಾಧೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಕೆ.ಎ. ದೇವಯ್ಯ, ಎಂ.ಎನ್. ಹರೀಶ್ ಹಾಗೂ ವಿಷಯ ತಜ್ಞರು ಆಗಮಿಸಿ ಕಾಫಿ, ಕಾಳುಮೆಣಸಿನ ಕೃಷಿ ಕೈಗೊಳ್ಳುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಪುಷ್ಪಗಿರಿ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಬಿ.ಜಿ. ರಮೇಶ್, ಉಪಾಧ್ಯಕ್ಷ ಮಚ್ಚಂಡ ಅಶೋಕ್, ವ್ಯವಸ್ಥಾಪಕ ಬನ್ನಳ್ಳಿ ಸತೀಶ್ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳಾದ ಎಸ್.ಎನ್. ಯೋಗೇಶ್, ಕೆ.ಎಂ. ಜಗದೀಶ್, ಎ.ಎಸ್. ಮಹೇಶ್, ಎನ್.ಬಿ. ರಾಮಚಂದ್ರ, ಕೆ.ಡಿ. ವೀರಪ್ಪ, ಪ್ರವೀಣ್ ರಾಜ್ ಅರಸ್, ಶ್ರೀಹರಿ ಹಾಗೂ ಕಾಜೂರು, ಎಡವಾರೆ, ಐಗೂರು, ಕಿರಗಂದೂರು, ಹಾರಂಗಿ, ಸೋಮವಾರಪೇಟೆ ಸುತ್ತಮುತ್ತಲಿನ ಬೆಳೆಗಾರರು ಭಾಗವಹಿಸಿದ್ದರು.