ಗೋಣಿಕೊಪ್ಪಲು, ಆ. 30: ಗೋಣಿಕೊಪ್ಪಲುವಿನ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘವು 1.12 ಕೋಟಿ ಲಾಭಾಂಶದಲ್ಲಿ ಮುಂದುವರೆಯುತ್ತಿದ್ದು ಮುಂದಿನ ಸಾಲಿನಲ್ಲಿ 5 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ಕಾಮಗಾರಿ ಆರಂಭಿಸ ಲಾಗುವುದು, ಸದಸ್ಯರ ಹಣದಿಂದ ಈ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಸಹಕಾರ ಸಂಘದ ಅಧ್ಯಕ್ಷ ಕುಪ್ಪಂಡ ಎಂ.ಚಿಟ್ಟಿಯಪ್ಪ ತಿಳಿಸಿದರು.
ಗೋಣಿಕೊಪ್ಪಲುವಿನ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ 2021-22ನೇ ಸಾಲಿನ 68ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಗೋಣಿಕೊಪ್ಪಲು, ಆ. 30: ಗೋಣಿಕೊಪ್ಪಲುವಿನ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘವು 1.12 ಕೋಟಿ ಲಾಭಾಂಶದಲ್ಲಿ ಮುಂದುವರೆಯುತ್ತಿದ್ದು ಮುಂದಿನ ಸಾಲಿನಲ್ಲಿ 5 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ಕಾಮಗಾರಿ ಆರಂಭಿಸ ಲಾಗುವುದು, ಸದಸ್ಯರ ಹಣದಿಂದ ಈ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಸಹಕಾರ ಸಂಘದ ಅಧ್ಯಕ್ಷ ಕುಪ್ಪಂಡ ಎಂ.ಚಿಟ್ಟಿಯಪ್ಪ ತಿಳಿಸಿದರು.
ಗೋಣಿಕೊಪ್ಪಲುವಿನ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ 2021-22ನೇ ಸಾಲಿನ 68ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಕೆಲಸಗಳಿಗೆ ಶೇ. 3ರ ಬಡ್ಡಿ ದರದಲ್ಲಿ 10 ಲಕ್ಷಗಳವರೆಗೆ 5ರಿಂದ 7 ವರ್ಷಗಳಲ್ಲಿ ಮರು ಪಾವತಿಸುವಂತೆ ಸಾಲ ನೀಡಲಾಗುತ್ತಿದೆ.
ಸಂಘದ ಜಾಗದಲ್ಲಿ 4 ಅಂತಸ್ತುಗಳ ಕಟ್ಟಡವನ್ನು ನಿರ್ಮಿಸಲು ಸಹಕಾರ ಸಂಘದ ನಿಬಂಧಕರು ಅನುಮತಿ ನೀಡಿದ್ದು ಮುಂದಿನ ದಿನಗಳಲ್ಲಿ ಸಂಘದ ಕಟ್ಟಡ ಕಾಮಗಾರಿ ಹಂತ ಹಂತವಾಗಿ ಕೈಗೆತ್ತಿಕೊಳ್ಳ ಲಾಗುವುದು. ರಾಜ್ಯದಲ್ಲಿಯೇ ಉತ್ತಮ ಸಹಕಾರ ಸಂಘ ಮಾಡಬೇಕೆಂಬ ಬಯಕೆ ನಮ್ಮದೆಂದು ಅಧ್ಯಕ್ಷ ಕುಪ್ಪಂಡ ಎಂ. ಚಿಟ್ಟಿಯಪ್ಪ ತಮ್ಮ ಅಭಿಪ್ರಾಯ ವನ್ನು ಸಭೆಯಲ್ಲಿ ಮಂಡಿಸಿದರು.
ಮಹಾಸಭೆಯಲ್ಲಿ ಜಮ್ಮಡ ಮೋಹನ್, ಹಿರಿಯ ಸದಸ್ಯ ಕುಶ, ನಾಮೇರ ರವಿ ಸೇರಿದಂತೆ ಇನ್ನಿತರ ಪ್ರಮುಖರು ಸಂಘದ ಅಭಿವೃದ್ಧಿಯ ಬಗ್ಗೆ ಸಮಗ್ರವಾಗಿ ಚರ್ಚಿಸಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ಕೆ. ಪ್ರತಾಪ್ ಕಾರ್ಯಕ್ರಮ ನಿರೂಪಿಸಿ ಮಹಾಸಭೆಯ ವರದಿ ಮಂಡಿಸಿ ಅನು ಮೋದನೆ ಪಡೆದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕಬ್ಬಚ್ಚಿರ ಎಂ. ಸುಬ್ರಮಣಿ, ನಿರ್ದೇಶಕರುಗಳಾದ ಜಮ್ಮಡ ಸಿ.ಮೋಹನ್, ಬೆಲ್ಲತಂಡ ಸಿ. ಮಾದಯ್ಯ, ಚೆಪ್ಪುಡೀರ ಟಿ. ಗಣಪತಿ, ಕಾಡ್ಯಮಾಡ ಪಿ.ದೇವಯ್ಯ, ವೇದಪಂಡ ಬಿ. ಕಿರಣ್, ಪಿ.ವಿ. ಶೋಭಿತ್, ಕೊಕ್ಕಲೆಮಾಡ ಪಾರ್ವತಿ, ಜಮ್ಮಡ ಸೌಮ್ಯ, ಹೆಚ್.ಎಸ್. ಗಣೇಶ್, ವೈ.ಬಿ. ಗಪ್ಪು, ಕುಲ್ಲಚಂಡ ಪ್ರಮೋದ್ ಗಣಪತಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಸದಸ್ಯರಾದ ಚೇದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ ಹಿರಿಯ ಸದಸ್ಯರಾದ ಬೆಲ್ಲತಂಡ ಸಿ. ಮಾದಯ್ಯ ವಂದಿಸಿದರು.