ವೀರಾಜಪೇಟೆ, ಸೆ. 30: ಮ್ಯಾಗನೊಲಿಯ ರೆಸಾರ್ಟ್ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದ ಅರಣ್ಯ ಇಲಾಖೆಯ ಜಾಗವನ್ನು ಅರಣ್ಯ ಇಲಾಖೆಗೆ ಮರಳಿಸಿದ ಘಟನೆ ಆರ್ಜಿ ಗ್ರಾಮದ ಪೆರುಂಬಾಡಿಯಲ್ಲಿ ನಡೆದಿದೆ.

ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ಸರ್ವೇ ನಂಬರ್ , 333/1ಠಿ1 ಡಿಚಿ ಸೆಕ್ಷನ್ 4ರ ಅರಣ್ಯ ಜಾಗವನ್ನು ಮ್ಯಾಗನೊಲಿಯ ರೆಸಾರ್ಟ್ ಮಾಲೀಕರು ಒತ್ತುವರಿ ಮಾಡಿದ್ದಾರೆಂದು ಈ ಹಿಂದೆ ಆರ್ಜಿ ಗ್ರಾಮದಲ್ಲಿರುವ ವಾಲ್ಮೀಕಿ ಭವನದಲ್ಲಿ ನಡೆದ ಕಂದಾಯ ಅದಾಲತ್ ಸಭೆಯಲ್ಲಿ ಗ್ರಾಮಸ್ಥರೊಬ್ಬರು ದೂರು ನೀಡಿದರು. ಅದರಂತೆ ಅರಣ್ಯ ಇಲಾಖೆ ಮತ್ತು ಭೂ ದಾಖಲೆಗಳ ಇಲಾಖೆ ಜಂಟಿ ಸರ್ವೇ ಕಾರ್ಯ ನಡೆಸಿ 9.92 ಎಕ್ರೆ ಅರಣ್ಯ ಒತ್ತುವರಿ ಸಾಬೀತು ಆಗಿತ್ತು.

ನಂತರ ಕೊಡಗು ಏಕೀಕರಣ ರಂಗದ ಕಾರ್ಯದರ್ಶಿ ತೇಲಪಂಡ ಪ್ರಮೋದ್ ಸೋಮಯ್ಯ, ಪ್ರಮುಖರಾದ ಅಜ್ಜಿನಂಡ ತಮ್ಮು ಪೂವಯ್ಯ, ಪಾಂಡಿರ ಮುತಣ್ಣ, ಮಂದಪಂಡ ಸತೀಶ್ ಅಪ್ಪಚು, ಅವರು ಅರಣ್ಯ ಸಂರಕ್ಷಣಾ ಅಧಿಕಾರಿ ಓ.ಓ. ಮೂರ್ತಿ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಈ ವಿಚಾರವಾಗಿ ಕರ್ನಲ್ ಮುತ್ತಣ್ಣ ಪ್ರತ್ಯೇಕ ದೂರು ನೀಡಿದ್ದರು. ಅದರಂತೆ ಅರಣ್ಯ ಇಲಾಖೆ ನೀಡಿದ್ದ ನೋಟೀಸ್‍ಗೆ ರೆಸಾರ್ಟ್ ಮಾಲೀಕರು ಅರಣ್ಯದ ಒತ್ತುವರಿ ಜಾಗವನ್ನು ಅರಣ್ಯ ಇಲಾಖೆಯ ಸುಪರ್ಧಿಗೆ ಮರಳಿ ನೀಡಿದ್ದಾರೆ. ಸೋಮವಾರ ಅರಣ್ಯಾಧಿಕಾರಿಗಳು ತೆರವು ಕಾರ್ಯಾ ಚರಣೆ ನಡೆಸಿದ್ದಾರೆ. ಎಸಿಎಫ್ ನೆಹರು ಅವರ ನೇತೃತ್ವದಲ್ಲಿ ನಡೆದ ಈ ತೆರವು ಕಾರ್ಯಾಚರಣೆ ಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.ಓ.ಓ. ಮೂರ್ತಿ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಈ ವಿಚಾರವಾಗಿ ಕರ್ನಲ್ ಮುತ್ತಣ್ಣ ಪ್ರತ್ಯೇಕ ದೂರು ನೀಡಿದ್ದರು. ಅದರಂತೆ ಅರಣ್ಯ ಇಲಾಖೆ ನೀಡಿದ್ದ ನೋಟೀಸ್‍ಗೆ ರೆಸಾರ್ಟ್ ಮಾಲೀಕರು ಅರಣ್ಯದ ಒತ್ತುವರಿ ಜಾಗವನ್ನು ಅರಣ್ಯ ಇಲಾಖೆಯ ಸುಪರ್ಧಿಗೆ ಮರಳಿ ನೀಡಿದ್ದಾರೆ. ಸೋಮವಾರ ಅರಣ್ಯಾಧಿಕಾರಿಗಳು ತೆರವು ಕಾರ್ಯಾ ಚರಣೆ ನಡೆಸಿದ್ದಾರೆ. ಎಸಿಎಫ್ ನೆಹರು ಅವರ ನೇತೃತ್ವದಲ್ಲಿ ನಡೆದ ಈ ತೆರವು ಕಾರ್ಯಾಚರಣೆ ಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.