ನಾಪೋಕ್ಲು, ಆ. ೨೯: ಸಮೀಪದ ಬೇತು ಗ್ರಾಮದಲ್ಲಿ ಹುಚ್ಚುನಾಯಿ ಕಡಿತಕ್ಕೆ ಎರಡು ಹಸುಗಳು ಬಲಿಯಾಗಿದ್ದು ಗ್ರಾಮಸ್ಥರ ಒತ್ತಡಕ್ಕೆ ಮಣಿದು ಗ್ರಾಮ ಪಂಚಾಯಿತಿ ಬೀದಿನಾಯಿಗಳ ನಿಯಂತ್ರಣಕ್ಕೆ ಮುಂದಾಗಿದೆ.
ನಾಪೋಕ್ಲು ಪಟ್ಟಣ ಸೇರಿದಂತೆ ವಿವಿಧೆಡೆ ಬೀದಿ ನಾಯಿಗಳ ಹೆಚ್ಚಳದಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಭಯಪಡುವಂತಾಗಿದ್ದು ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಿ ಎಂದು ಒತ್ತಡ ಹೇರಿದ್ದರು.
ಪಟ್ಟಣದಲ್ಲಿನ ನೂರಕ್ಕೂ ಅಧಿಕ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಿ ಬಿಡಲಾಗಿದೆ. ಗ್ರಾಮಸ್ಥರು ಸಾಕು ನಾಯಿಗಳನ್ನು ಹಾಗೂ ಗೋವುಗಳನ್ನು ಪಟ್ಟಣದಲ್ಲಿ ಅಡ್ಡಾಡದಂತೆ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿ ಸೂಚಿಸಿದೆ.