ಗೋಣಿಕೊಪ್ಪಲು, ಆ.೨೯: ಇಲ್ಲಿನ ಬಿ.ಎ.ಚೆನ್ನಪ್ಪ ಪೂಜಾರಿ ಹಾಗೂ ಬಿ.ಸಿ.ನಳಿನಾಕ್ಷಿ ದಂಪತಿಯ ಪುತ್ರಿ ಬಿ.ಸಿ.ಮೇಘನಾ ಭಾರತೀಯ ನೆಟ್‌ಬಾಲ್ ತಂಡಕ್ಕೆ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆೆ.

ಸೆ.೩ರಂದು ಸಿಂಗಪೂರ್‌ನಲ್ಲಿ ನಡೆಯಲಿರುವ ಏಷ್ಯಾನ್ ನೆಟ್‌ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ತಂಡÀದಲ್ಲಿ ಉಪನಾಯಕಿಯಾಗಿ ಪಾಲ್ಗೊಳ್ಳಲಿರುವ ಮೇಘನಾ ಕಳೆದ ಎರಡು ವರ್ಷಗಳಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ತೆಲಂಗಾಣ, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಚತ್ತೀಸ್‌ಗಡದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.

ತಾಯಿ ನಳಿನಾಕ್ಷಿ ಕಳೆದ ೨೬ ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಟ್ಯಾಕ್ಸಿ ಚಾಲಕರಾಗಿ ಗೋಣಿಕೊಪ್ಪಲುವಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಭಾರತ ತಂಡವನ್ನು ಉಪ ನಾಯಕಿಯಾಗಿ ಪ್ರತಿನಿಧಿ ಸುತ್ತಿರುವ ಬಿ.ಸಿ.ಮೇಘನಾ ಭಾರತÀಕ್ಕೆ ಚಿನ್ನದ ಪದಕ ತರಬೇಕೆಂಬ ಮಹಾದಾಸೆ ಹೊಂದಿದ್ದಾರೆ. ಉಜಿರೆ ಕಾಲೇಜಿನ ರಮೇಶ್ ಹೆಚ್, ಸುಧೀನ್ ಪೂಜಾರಿ, ನಿತೀನ್ ಪೂಜಾರಿ, ಶಾರದ ಬಾರ್‌ಕೂರ್, ಕರ್ನಾಟಕ ತಂಡದ ಗಿರೀಶ್‌ರವರು ಬಿ.ಸಿ.ಮೇಘನಾಳಿಗೆ ತರಬೇತುದಾರರಾಗಿದ್ದಾರೆ.