ಭಾಗಮAಡಲ, ಆ. ೨೯: ತಾ. ೨೮ರ ರಾತ್ರಿ ಭಾಗಮಂಡಲ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆ ಜನರಲ್ಲಿ ಆತಂಕ ಸೃಷ್ಟಿಸಿತು. ದಿಢೀರ್ ಮಳೆಯಿಂದ ಜನರು ಆತಂಕಗೊAಡರು. ಸೋಮವಾರ ಮಳೆ ಸಂಪೂರ್ಣ ಬಿಡುವು ನೀಡಿತ್ತು. ಭಾನುವಾರ ಸುರಿದ ಮಳೆಯಿಂದ ರೈತರ ಕೃಷಿ ಭೂಮಿಗಳಿಗೆ ಹಾನಿಯಾಗಿವೆ. ತಾ.೨೮ಂದು ಭಾಗಮಂಡಲ ವ್ಯಾಪ್ತಿಯಲ್ಲಿ ಕೈಲು ಮುಹೂರ್ತ ಹಬ್ಬದ ಆಚರಣೆ ನಡೆದಿತ್ತು. ಎರಡು ದಿನದಿಂದ ಬಿಸಿಲಿನ ವಾತಾವರಣವಿದ್ದು, ಜನರು ಸಂಭ್ರಮದಿAದ ಕೈಲು ಮುಹೂರ್ತ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಭಾನುವಾರ ಸಂಜೆ ೫ ಗಂಟೆಯ ನಂತರ ಮಳೆ ಆರಂಭಗೊAಡಿತು. ಬೆಳಗಿನ ಜಾವ ಎರಡು ಗಂಟೆ ನಂತರ ಭಾರಿ ಮಳೆ ಸುರಿಯಿತು. ಇದರಿಂದ ನಾಪೋಕ್ಲು -ಭಾಗಮಂಡಲ ಮತ್ತು ಭಾಗಮಂಡಲ -ಮಡಿಕೇರಿ ರಸ್ತೆಯಲ್ಲಿ ನೀರು ತುಂಬಿ ರಸ್ತೆ ಸಂಪರ್ಕ ಕಡಿತಗೊಂಡಿತು. ಭಾಗಮಂಡಲ ವ್ಯಾಪ್ತಿಯಲ್ಲಿ ೮.೫ ಇಂಚು ಮಳೆ ಸುರಿದಿದೆ. ಕರಿಕೆ ರಸ್ತೆಯಲ್ಲಿ ಬರೆ ಕುಸಿತ ಉಂಟಾಗಿದ್ದು, ಸಂಪರ್ಕಕ್ಕೆ ಅಡಚಣೆಯಾಗಿದೆ. ಭಾಗಮಂಡಲ ತಣ್ಣಿಮಾನಿ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದಿದ್ದು, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಮಡಿಕೇರಿ- ಭಾಗಮಂಡಲ ರಸ್ತೆಯಲ್ಲಿ ಮೂರು ಅಡಿ ನೀರು ಹರಿದಿತ್ತು. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮುಂಭಾಗ ಮೆಟ್ಟಿಲಿನವರೆಗೆ ನೀರು ಸಂಗ್ರಹಗೊAಡಿತು. ಬೆಳಿಗ್ಗೆ ೬ರ ನಂತರ ಮಳೆ ನಿಂತು ೧೦ ಗಂಟೆಯ ನಂತರ ರಸ್ತೆಯಲ್ಲಿ ನೀರಿನ ಪ್ರಮಾಣ ಇಳಿಮುಖಗೊಂಡು ಬಳಿಕ ರಸ್ತೆ ಸಂಪರ್ಕ ಸಾಧ್ಯವಾಯಿತು. ತಣ್ಣಿಮಾನಿಯ ಬೆಟ್ಟ ಶ್ರೇಣಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಾಟಿ ಗದ್ದೆಗಳಿಗೆ ಹಾನಿಯಾಗಿವೆ. ಹೊಳೆ ಬದಿಯ ಗದ್ದೆಗಳಲ್ಲಿ ಮಣ್ಣು ತುಂಬಿಕೊAಡು ಸಮಸ್ಯೆ ಉದ್ಭವಿಸಿದೆ. ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ತಣ್ಣಿಮಾನಿಯ ಸೂರ್ತಲೆ ಮೋಹನ ಮತ್ತು ದೇವಯ್ಯ ಅವರ ಮನೆಯ ಮುಂಭಾಗ ಮತ್ತು ಹಿಂಭಾಗದಲ್ಲಿ ಬರೆ ಕುಸಿತ ಉಂಟಾಗಿದ್ದು ಅಪಾಯದ ಸ್ಥಿತಿಯಲ್ಲಿದೆ. ಅಲ್ಲದೆ ಕುದುಪಜೆ ರಾಮಯ್ಯ, ರಮೇಶ, ಮೊಣ್ಣಪ್ಪ ಅವರಿಗೆ ಸೇರಿದ ಮೂರು ಎಕರೆ ಗದ್ದೆ ಮಣ್ಣಿನಿಂದ ತುಂಬಿದ್ದು, ನಾಟಿ ಕೃಷಿಗೆ ತೊಂದರೆ ಆಗಿದೆ.

ಸಮೀಪದ ತಣ್ಣಿಮಾನಿಯ ಕುದುಪಜೆ ಐನ್‌ಮನೆಗೆ ತೆರಳುವ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಕಳೆದ ಒಂದು ತಿಂಗಳ ಹಿಂದೆ ಭಾರಿ ಮಳೆಯಿಂದ ಸಂಪರ್ಕ ರಸ್ತೆ ಕುಸಿದು ಹೋಗಿತ್ತು ರಸ್ತೆಯ ಸೇತುವೆ ಹಾನಿ ಆಗಿತ್ತು. ಬಳಿಕ ಮರದ ಪಾಲ ಹಾಗೂ ಮೋರಿ ನಿರ್ಮಿಸಿ ಸಂಪರ್ಕ ಕಲ್ಪಿಸಲಾಗಿತ್ತು. ಇದೀಗ ದಿಢೀರ್ ಮಳೆಗೆ ಮತ್ತೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಒಂದೆಡೆ ಮಳೆ ಕಡಿಮೆಯಾಗಿ ಕೃಷಿಕರು ಸಮಾಧಾನದಲ್ಲಿದ್ದರು. ಆದರೆ, ದಿಢೀರ್ ಮಳೆ ಆತಂಕ ಸೃಷ್ಟಿಸಿದೆ. ಇಂದು ಭಾಗಮಂಡಲದಲ್ಲಿ ಬಿಸಿಲಿನ ವಾತಾವರಣ ಕಂಡು ಬಂತು. ಭಾಗಮಂಡಲದಲ್ಲಿ ಒಂದು ದಿನದಲ್ಲಿ ೮.೪೬ ಇಂಚು ಹಾಗೂ ತಲಕಾವೇರಿಯಲ್ಲಿ ೮.೨೬ ಇಂಚು ಮಳೆ ದಾಖಲಾಗಿದೆ. -ಸುನಿಲ್ ಕುಯ್ಯಮುಡಿ